December 23, 2025

ನಿವೃತ್ತ ಪೊಸ್ಟ ಮಾಸ್ಟರ್ ಎನ್.ಜಿ.ಭಟ್ ಇವರಿಗೆ ಧಾರವಾಡದಲ್ಲಿ ಸನ್ಮಾನ

ಹೊನ್ನಾವರ; ಅಖಿಲ ಭಾರತ ಕೇಂದ್ರ ಸರ್ಕಾರಿ ಪಿಂಚಣೆದಾರ ಸಂಘದ ಆಶ್ರಯದಲ್ಲಿ ಧಾರವಾಡ ಗಾಂಧಿನಗರದ ಶ್ರೀ ಈಶ್ವರ ದೇವಾಲಯದ ಸಭಾಭವನದಲ್ಲಿ ಪಿಂಚಣೆದಾರರ ದಿನಾಚರಣೆ ಜರುಗಿತು. ಶಾಸನ ಮತ್ತು ಪುರಾತತ್ವ ತಜ್ಞರಾದ ಹನುಮಾಕ್ಷಿ ಗೋಗಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಎಲ್ಲಾ ನೌಕರರಿಗೆ ಸಿಗುವಂತೆ ನಿವೃತ್ತರಿಗೂ 8 ನೇ ವೇತನ ಆಯೋಗದಿಂದ ಸಿಗುವ ಸೌಲಭ್ಯದ ಕುರಿತು ಮಾಹಿತಿ ನೀಡಿದರು.

ಅನುಭವ ಪ್ರಶಸ್ತ್ರಿ ಪುರಸ್ಕ್ರತ ನಿವೃತ್ತ ಮುಖ್ಯ ಲೆಕ್ಕಾಧಿಕಾರಿ ಎನ್.ನಾಗಲಕ್ಷ್ಮೀ ಮಾತನಾಡಿ ನಿವೃತ್ತ ನೌಕರರೂ ಆರೋಗ್ಯ ಕಾಯ್ದುಕೊಂಡು ಸಮಾಜದಲ್ಲಿ ಗೌರವದಿಂದ ಹೇಗೆ ಬದುಕಬೇಕು ಎಂದು ಮಾಹಿತಿ ನೀಡಿದರು.

ಪಿಂಚಣಿದಾರಣಿ ಸಂಘದ ಅಧ್ಯಕ್ಷ ಎಂ.ಎಸ್.ಹಾಗರAಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಅಂಚೆ ಇಲಾಖೆಯ ನೌಕರರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಹೊನ್ನಾವರದ ನಿವೃತ್ತ ಪೊಸ್ಟಮಾಸ್ತರ್ ಎನ್.ಜಿ.ಭಟ್ ಸನ್ಮಾನಿತರ ಪರವಾಗಿ ಮಾತನಾಡಿದರು.

ವೇದಿಕೆಯಲ್ಲಿ ನಿವೃತ್ತ ಅಸಿಸ್ಟೆಂಟ್ ಡೈರಕ್ಟರ್ ಆರ್.ಆರ್.ಭಟ್ ಹೊನ್ನಾವರ, ಕೆ.ಎಚ್.ಹೊಸಮನಿ, ವಿ.ಎಸ್. ಸೊರಟೂರು, ಎಸ್.ಜೆ.ಲೋಗೋ, ಜೀವನ ಎಸ್.ನಾಯ್ಕ ಉಪಸ್ಥಿತರಿದ್ದರು. ಆರ್.ವೈ ಶೆಟ್ಟಿ ಸ್ವಾಗತಿಸಿ, ಎ.ವಿ.ಮಹಾಲೆ ವಂದಿಸಿದರು. ಸಿ.ಎನ್.ಸವದತ್ತಿ ನಿರೂಪಿಸಿದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!