December 23, 2025

ಎಂ.ಪಿ.ಇ ಸೊಸೈಟಿಯ ಸೆಂಟ್ರಲ್ ಸ್ಕೂಲ್ ವಾರ್ಷಿಕ ಸ್ನೇಹ ಸಮ್ಮೇಳನ

ಹೊನ್ನಾವರ: ವಿದ್ಯೆಗಿಂತ ಮಿಗಿಲಾದದು ಯಾವುದು ಇಲ್ಲ. ಶಿಕ್ಷಣ ಮತ್ತು ಆರೋಗ್ಯವು ಪ್ರತಿಯೊಬ್ಬ ವ್ಯಕ್ತಿಯು ತೀರಾ ಅಗತ್ಯವಾಗಿದೆ ಎಂದು ಸುದಿಕ್ಷಾ ಗ್ರೂಪ್ ಕಂಪನಿಯ ಎಂ.ಡಿ. ಡಾ. ಸುಬ್ರಹ್ಮಣ್ಯ ಶರ್ಮ ಅಭಿಪ್ರಾಯಪಟ್ಟರು. ಎಸ್.ಡಿ.ಎಂ. ಕಾಲೇಜಿನ ಡಾ.ಎನ್.ಆರ್.ನಾಯಕ ಬಯಲು ರಂಗಮAದಿರಲ್ಲಿ ಎಂ.ಪಿ.ಇ ಸೊಸೈಟಿಯ ಸೆಂಟ್ರಲ್ ಸ್ಕೂಲ್ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯ ಪ್ರಕೃತಿ ಸೌಂದರ್ಯ, ಧಾರ್ಮಿಕ ಸ್ಥಳಗಳನ್ನು ನೋಡಿದಾಗ ಸಂತೋಷ ಎನಿಸುತ್ತದೆ. ಹೊನ್ನುರು ಹೃದಯಕ್ಕೆ ಹತ್ತಿರವಾದ ಜಾಗವಾಗಿದೆ. ಶೈಕ್ಷಣಿಕವಾಗಿ ಸಹಕಾರ ನೀಡಲು ಸದಾ ಕಾಲ ಸಿದ್ದವಿದ್ದು, ಉನ್ನತ ಶಿಕ್ಷಣದ ಜೊತೆ ಸಾಧನೆ ಮಾಡುವ ಮೂಲಕ ತಾಲೂಕಿನ ಕೀರ್ತಿ ಹೆಚ್ಚಿಸುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಜಿಲ್ಲೆಯ ಹಲವು ದಶಕಗಳ ಬೇಡಿಕೆಯಾದ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಬೇಡಿಕೆ ಈಡೇರಿಸುವತ್ತ ಗಮನ ನೀಡಿದ್ದು, ಈ ಹಿಂದೆಯೇ ಆ ನಿಟ್ಟಿನಲ್ಲಿ ಪ್ರಯತ್ನಿಸಲಾಗಿತ್ತು. ಕೆಲವೇ ತಿಂಗಳಿನಲ್ಲಿ 300 ಬೆಡ್ ಆಸ್ಪತ್ರೆ ಈ ಜಿಲ್ಲೆಯಲ್ಲಿ ನಿರ್ಮಾಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಶೈಕ್ಷಣಿಕವಾಗಿ, ಕ್ರೀಡೆ, ಸಾಂಸ್ಕ್ರತಿಕವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಇದೆ ವೇಳೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಕೃಷ್ಣಮುರ್ತಿ ಭಟ್ ಶಿವಾನಿ ಮಾತನಾಡಿ ಪಾಲಕರು ಮಕ್ಕಳಲ್ಲಿ ಶಿಕ್ಷಕಿಯರ ಮೇಲೆ ಮಾತ್ರತ್ವ ಭಾವನೆ ಮೂಡಿಸಬೇಕು. ಶಾಲೆಯ ವಿವಿಧ ಚಟುವಟಿಕೆಯಲ್ಲಿ ಪಾಲಕರ ಪಾತ್ರ ಬಹುಮುಖ್ಯವಾಗಿದೆ. ಮಕ್ಕಳು ಮುಖ್ಯವಾಹಿನಿಗೆ ಬರಲು ಇದು ಪ್ರಮುಖ ಪಾತ್ರ ವಹಿಸಲಿದೆ. ಶಾಲೆಯಲ್ಲಿ ಬೋದಿಸುವುದು ಮಾತ್ರ ಶಿಕ್ಷಣವಲ್ಲ. ಸಮಾಜದ ಮುಂದೆ ಮಗು ಹೇಗೆ ವರ್ತಿಸುತ್ತದೆ ಎನ್ನುವುದು ತಿಳಿಸುವುದು ಅತಿ ಅಗತ್ಯವಾಗಿದೆ. ಶಿಕ್ಷಣ ಎನ್ನುವ ಸ್ವಾರ್ಥಕ್ಕಾಗಿ ನಮ್ಮ ಮಕ್ಕಳನ್ನು ಬೆಳಸದೇ, ತ್ಯಾಗಕ್ಕಾಗಿ ಬೆಳೆಸಬೇಕು. ತ್ಯಾಗದಿಂದ ಬೆಳಸದೇ ಹೊದಲ್ಲಿ ನಮ್ಮನ್ನು ಮರೆಯಬಹುದು. ಮಕ್ಕಳ ಮನೊವಿಕಾಸ ಆಗುವಾಗ ನಾವು ಅವರೊಂದಿಗೆ ಶಿಕ್ಷಣ ಸಂಸ್ಥೆಯೊAದಿಗೆ ಇರಬೇಕಿದೆ ಎಂದರು.

ಗೋವಾ ರಾಜ್ಯದ ಸಾಂಗ್ಲಿ ಯ ಮಾಜಿ ಶಾಸಕ ಪ್ರಸಾದ ಗಾವಂಕರ, ಎಂ.ಪಿ.ಇ ಸೊಸೈಟಿಯ ಉಪಾಧ್ಯಕ್ಷ ನಾಗರಾಜ ಕಾಮತ್, ಕಾರ್ಯದರ್ಶಿ ಎಸ್.ಎಂ.ಭಟ್, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮಹಮ್ಮದ್ ಸೈಪಾನ್ ಕ್ರೀಡಾ ಕಾರ್ಯದರ್ಶಿ ಕರಣ್ ನಾಯ್ಕ ಉಪಸ್ಥಿತರಿದ್ದರು. ಪ್ರಾಚಾರ್ಯೆ ವಿಜಯಲಕ್ಷ್ಮಿ ನಾಯಕ ವಾರ್ಷಿಕ ವರದಿ ಮಂಡಿಸಿದರು. ಶಿಕ್ಷಕಿ ಕವಿತಾ ನಾಯ್ಕ ಸ್ವಾಗತಿಸಿದರು. ಶಾರದಾ ಭಟ್, ಶ್ವೇತಾ ಕಾರ್ಯಕ್ರಮ ನಿರ್ವಹಿಸಿದರು. ಸುಜಯ್ ಭಟ್ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ಮನೊರಂಜನಾ ಕಾರ್ಯಕ್ರಮ ಜರುಗಿತು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!