December 23, 2025

ಹಿಂದು ರುದ್ರಭೂಮಿ ಸ್ವಚ್ಛಗೊಳಿಸಿದ ಕ್ರಿಯೇಟಿವ್ ಬಾಯ್ಸ್ ಯುವಕರು

ಭಟ್ಕಳ: ತಾಲ್ಲೂಕಿನ
ಮೂಡಭಟ್ಕಳದಲ್ಲಿರುವ ಮುಕ್ತಿದಾಮ ಹಿಂದು ರುದ್ರಭೂಮಿಯನ್ನು ಮೂಡಭಟ್ಕಳದ ಕ್ರಿಯೇಟಿವ್ ಬಾಯ್ಸ್ ಯುವಕರು ಸ್ವಯಂಪ್ರೇರಿತವಾಗಿ ಶುಚಿಗೊಳಿಸಿದರು.


ರುದ್ರಭೂಮಿಯಲ್ಲಿ ದೀರ್ಘಕಾಲದಿಂದ ಜಮಾಯಿಸಿದ್ದ ಪ್ಲಾಸ್ಟಿಕ್ ತ್ಯಾಜ್ಯ, ಕಸಕಡ್ಡಿ ಹಾಗೂ ಒಣಗಿದ ಎಲೆಗಳನ್ನು ತೆರವುಗೊಳಿಸಿ ಸ್ಥಳವನ್ನು ಸ್ವಚ್ಛ ಹಾಗೂ ಸುವ್ಯವಸ್ಥಿತಗೊಳಿಸಲಾಯಿತು. ಸಾರ್ವಜನಿಕ ಉಪಯೋಗದ ಸ್ಥಳಗಳನ್ನು ಸ್ವಚ್ಛವಾಗಿ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂಬ ಸಂದೇಶವನ್ನು ಯುವಕರು ಈ ಕಾರ್ಯದ ಮೂಲಕ ಸಮಾಜಕ್ಕೆ ನೀಡಿದ್ದಾರೆ.


ಯುವಕರ ಈ ಸೇವಾಭಾವದ ಸಮಾಜಮುಖಿ ಕಾರ್ಯಕ್ಕೆ ಸ್ಥಳೀಯ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು. ಇಂತಹ ಸ್ವಯಂಸೇವಾ ಮತ್ತು ಪರಿಸರಪರ ಕಾರ್ಯಗಳು ಮುಂದುವರಿಯಬೇಕೆಂದು ಸಾರ್ವಜನಿಕರು ಆಶಿಸಿದ್ದಾರೆ.

About The Author

error: Content is protected !!