December 23, 2025

ಭಟ್ಕಳ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಮೋಹನ ನಾಯ್ಕ ಅವಿರೋಧವಾಗಿ ಆಯ್ಕೆ

ಭಟ್ಕಳ: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಂಗ ಸಂಸ್ಥೆಯಾದ ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪ್ರಜಾವಾಣಿ ವರದಿಗಾರ ಮೋಹನ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಶೈಲೇಶ ವೈದ್ಯ ಪುನರಾಯ್ಕೆಯಾಗಿದ್ದಾರೆ.

ಸೂಮವಾರ ಸಂಜೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮುಂದಿನ ಮೂರು ವರ್ಷಗಳ ಪದಾಧಿಕಾರಿಗಳ ಚುನಾವಣೆಯು ಹಿರಿಯ ಪತ್ರಕರ್ತ ಹಾಗೂ ಮಾಜಿ ಅಧ್ಯಕ್ಷ ಸತೀಶ ಕುಮಾರ್ ಅವರ ನೇತೃತ್ವದಲ್ಲಿ ನಡೆಯಿತು. ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಕಾರ್ಯದರ್ಶಿ ಸ್ಥಾನಕ್ಕೆ ಒಂದೊAದೇ ಹೆಸರುಗಳು ಸೂಚನೆಯಾಗಿದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಹಿರಿಯ ಪತ್ರಕರ್ತ ಅತೀಕುರ್ ರಹಮಾನ್ ಶಾಬಂದ್ರಿ, ಖಜಾಂಚಿ ಸ್ಥಾನಕ್ಕೆ ಫಯಾಜ್ ಮುಲ್ಲಾ ಅವರು ಆಯ್ಕೆಯಾದರು. ಸಂಘದ ಗೌರವಾಧ್ಯಕ್ಷ ಸ್ಥಾನಕ್ಕೆ ನಿಕಟಪೂರ್ವ ಅಧ್ಯಕ್ಷ ಎಂ.ಆರ್. ಮಾನ್ವಿ ಅವರನ್ನು ಆಯ್ಕೆ ಮಾಡಲಾಯಿತು.

ಈ ಸದಂದರ್ಭದಲ್ಲಿ ಜಿಲ್ಲಾ ಸಂಘದ ಮಾಜಿ ಅಧ್ಯಕ್ಷ ರಾಧಾಕೃಷ್ಣ ಭಟ್ಟ, ಮಾಜಿ ಅಧ್ಯಕ್ಷರಾದ ರಾಘವೇಂದ್ರ ಹೆಬ್ಬಾರ್ ಹಾಗೂ ಭಾಸ್ಕರ ನಾಯ್ಕ, ಮನಮೋಹನ ನಾಯ್ಕ, ಇನಾಯುತ್‌ವುಲ್ಲಾ ಗವಾಯಿ, ವಿಷ್ಣು ದೇವಡಿಗ, ರಿಜ್ವಾನ್ ಗಂಗಾವಳಿ, ಅಝರ್ ಬರ್ಮಾವರ್, ಪ್ರಸನ್ನ ಭಟ್ಟ, ಲೋಕೇಶ ನಾಯ್ಕ, ಈಶ್ವರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

About The Author

error: Content is protected !!