November 19, 2025

ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ, ತುಂಬಾ ಬೇಸರದ ಸಂಗತಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಹೇಶ ನಾಯ್ಕ

ಹೊನ್ನಾವರ: ಬ್ಲಾಕ್ ಕಾಂಗ್ರೇಸ್ ಉಪಾಧ್ಯಕ್ಷ ಕೇಶವ ಮೇಸ್ತ ಪತ್ರಿಕಾ ಹೇಳಿಕೆ ನೀಡಿ ತಾನು ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿರುವುದು ತುಂಬಾ ಬೇಸರದ ಸಂಗತಿ ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಹೇಶ ನಾಯ್ಕ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೇಸ್ ಗುರುವಾರ ಕರೆದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ ನಾನು ಮತ್ತು ಕೇಶವ ಸಹಪಾಠಿಗಳು, ಒಳ್ಳೆಯ ಆತ್ಮಿಯರು. ಬ್ಲಾಕ್ ಕಾಂಗ್ರೇಸ್ ಆಯೋಜಿಸಿದ ವಿವಿಧ ಗ್ರಾಮೀಣ ಮತ್ತು ಪಟ್ಟಣ ವ್ಯಾಪ್ತಿಯಲ್ಲಿ ನಡೆದ ಅನೇಕ ಸಂಘಟನಾ ಕಾರ್ಯಕ್ರಮದಲ್ಲಿ ನನ್ನ ಜೊತೆ ಸಹಕರಿಸಿದ್ದರು. ಅವರು ಪಕ್ಷದ ಸಂಘಟನಾ ಚಟುವಟಿಕೆ ನಡೆಯುತ್ತಿಲ್ಲ ಎಂದು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಹೇಳಿರುವುದು ಸತ್ಯಕ್ಕೆ ದೂರವಾಗಿದೆ ಎಂದು ತಾಲೂಕಿನ ನಡೆದ ವಿವಿಧ ಕಾರ್ಯಕ್ರಮದ ಭಾವಚಿತ್ರ ಪ್ರದರ್ಶಿಸಿದರು.
ರಾಜಿನಾಮೆ ಪತ್ರವನ್ನು ನಿಮಗೆ ಸಲ್ಲಿಸಿದ್ದಾರೆಯೇ ಎನ್ನುವವರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಇವರೆಗೂ ರಾಜೀನಾಮೆ ಪತ್ರ ನೀಡಿಲ್ಲ. ಪತ್ರಿಕಾ ಹೇಳಿಕೆ ಮಾತ್ರ ನೀಡಿದ್ದಾರೆ. ಹೊನ್ನಾವರ ಬ್ಲಾಕ ಬಣ ರಾಜಕೀಯ ಇದೆಯಾ ಎನ್ನುವ ಪ್ರಶ್ನೆಗೆ ಉತ್ತರಿಸಿ ಈವರೆಗೂ ಬಣ ರಾಜಕೀಯ ಮಾಡಿಲ್ಲ. ಎಲ್ಲರೊಂದಿಗೂ ಸೌಹಾರ್ದತೆಯಿಂದ ಇದ್ದೇನೆ. ಮುಂದೆಯೂ ಎಲ್ಲರ ವಿಶ್ವಾಸ ಪಕ್ಷದ ಸಂಘಟನೆಯಲ್ಲಿ ತೊಡಗುತ್ತೇನೆ. ಪದಾಧಿಕಾರಿಗಳಿಗೆ ನೇಮಕಾತಿಯ ಆದೇಶ ಪ್ರತಿ ನೀಡಲಿಲ್ಲ ಎನ್ನುವ ಆರೋಪದ ಪ್ರಶ್ನೆಗೆ ಉತ್ತರಿಸಿ, ಆದೇಶ ಪ್ರತಿ ಈವರೆಗೂ ನನ್ನ ಬಳಿ ಕೇಳಲಿಲ್ಲ. ಜಿಲ್ಲಾಧ್ಯಕ್ಷರು ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಅದನ್ನು ಎಲ್ಲರ ಗಮನಕ್ಕೂ ಸಭೆಯಲ್ಲಿ ತಂದು ಈ ಹಿಂದೆಯೇ ಮಾಧ್ಯಮದವರಿಗೆ ನೀಡಲಾಗಿದೆ. ಆದರೆ ವೈಯಕ್ತಿಕ ಆದೇಶ ಪ್ರತಿ ಪಕ್ಷದ ವರಿಷ್ಠರು ನೀಡಿದಾಗ ಕೂಡಲೆ ವಿತರಿಸಲಾಗುವುದು ಎಂದರು.
ಮುಂಬರುವ ಪ.ಪಂ. ಹಾಗೂ ತಾ.ಪಂ., ಜಿ.ಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಕಾರ್ಯಕರ್ತರನ್ನು ಸಮರ್ಥವಾಗಿ ಸಂಘಟಿಸುತ್ತಿದ್ದೇವೆ. ಎಲ್ಲರ ಸಹಕಾರದ ಮೇಲೆ ಪಕ್ಷದ ಸಂಘಟನೆಗೆ ಕಾರ್ಯನ್ಮೂಖನಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾರ್ಯದರ್ಶಿ ಹರಿಶ್ಚಂದ್ರ ನಾಯ್ಕ, ಆರ್ ಜಿ ಪಿ ಆರ್ ಎಸ್ ಜಿಲ್ಲಾ ಅಧ್ಯಕ್ಷ ವಿನೋದ ನಾಯ್ಕ ಕರ್ಕಿ, ಗಜಾನನ ನಾಯ್ಕ ಸಾಲಕೋಡ
ಯುವ ಕಾಂಗ್ರೆಸ್ ಅಧ್ಯಕ್ಷ ನವೀನ ಪಟಗಾರ ,ಎಸ್ ಸಿ ಸೆಲ್ ಅಧ್ಯಕ್ಷ ಕೃಷ್ಣ ಹರಿಜನ, ಹಿಂದುಳಿದ ವಿಭಾಗದ ಅಧ್ಯಕ್ಷ ಕೃಷ್ಣ ಗೌಡ, ಮಾಜಿ ಪ.ಪಂ.ಅಧ್ಯಕ್ಷೆ ಜೈನಾಬಿ ಸಾಬ್, ರಿಯಾಜ್ ಹಳದಿಪುರ, ಲಕ್ಷ್ಮಣ ಮೇಸ್ತ , ಉದಯ ಮೇಸ್ತ , ಸತೀಶ ನಾಯ್ಕ, ಕೃಷ್ಣ ನಾಯ್ಕ ಮಾರಿಮನೆ, ಪುಷ್ಪ ಮಹೇಶ ನಾಯ್ಕ, ಕಲ್ಪನಾ ನರೋನ, ಸುಮತಿ ನಾಯ್ಕ, ರಾಮಚಂದ್ರ ಗೌಡ, ಗೋವಿಂದ ಮುಕ್ರಿ ಮತ್ತಿತರರು ಇದ್ದರು.
ವರದಿ : ವಿಶಗವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!