

ಕೆ.ಆರ್.ಪೇಟೆ ತಾಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ, ಭೂ ವೈಕುಂಠವೆAದೇ ಪ್ರಸಿದ್ಧವಾಗಿರು ಭೂವರಹನಾಥ ಸುಕ್ಷೇತ್ರದಲ್ಲಿ ತಾಯಿ ಮಹಾಲಕ್ಷ್ಮಿ ಅಮ್ಮನವರ ಭವ್ಯ ದೇವಾಲಯದ ನಿರ್ಮಾಣ ಕ್ಕೆ ಭೂಮಿ ಪೂಜೆ, ಮೊಳಗಿದ ಜಯಘೋಷಗಳು, ಹರಿದು ಬಂದ ಭಕ್ತ ಸಾಗರ..

ಕೆ.ಆರ್.ಪೇಟೆ : ಸುರಪುರ ಮಹಾ ಸಂಸ್ಥಾನ ಹಾಗೂ ಮೈಸೂರು ಮಹಾ ಸಂಸ್ಥಾನಕ್ಕೆ ಸಾವಿರಾರು ವರ್ಷಗಳಿಂದಲೂ ಅವಿನಾಭಾವ ಸಂಬ0ಧವಿದೆ. ಮೈಸೂರು ಮಹಾರಾಜರ ರಾಜ ಗುರುಗಳಾದ ಪರಕಾಲ ಸ್ವಾಮಿಗಳ ಆಹ್ವಾನದ ಮೇರೆಗೆ ಭೂವರಹನಾಥ ಕಲ್ಲಹಳ್ಳಿ ಕ್ಷೇತ್ರಕ್ಕೆ ಬಂದು ತಾಯಿ ಮಹಾಲಕ್ಷ್ಮಿ ಅಮ್ಮನವರ ನೂತನ ದೇವಾಲಯದ ನಿರ್ಮಾಣಕ್ಕೆ ಸಂತೋಷದಿAದ ಭೂಮಿ ಪೂಜೆ ಮಾಡಿ, ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ ಮಾಡಿದ್ದೇನೆ ಎಂದು ಸುರಪುರ ಸಂಸ್ಥಾನದ ಅರಸರಾದ ರಾಜ ಕೃಷ್ಣಪ್ಪ ನಾಯಕ ಅವರು ಅಭಿಮಾನದಿಂದ ಹೇಳಿದರು.
ಅವರು ಇಂದು ಕೃಷ್ಣರಾಜಪೇಟೆ ತಾಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ, ಭೂವೈಕುಂಠ ವೆಂದೇ ಪ್ರಖ್ಯಾತವಾಗಿರುವ ಭೂದೇವಿ ಸಮೇತ ಶ್ರೀಲಕ್ಷ್ಮಿ ವರಹನಾಥ ಕಲ್ಲಹಳ್ಳಿ ಸುಕ್ಷೇತ್ರದಲ್ಲಿ ಈ ಹಿಂದೆ ಭೂ ವರಹನಾಥ ದೇವಾಲಯದ ಆವರಣದಲ್ಲಿದ್ದು ನಶಿಸಿ ನೇಪಥ್ಯಕ್ಕೆ ಸರಿದಿರುವ ತಾಯಿ ಮಹಾಲಕ್ಷ್ಮಿ ಅಮ್ಮನವರ ನೂತನ ದೇವಾಲಯದ ನಿರ್ಮಾಣಕ್ಕೆ, ಮೈಸೂರಿನ ಪರಕಾಲ ಸ್ವಾಮೀಜಿಗಳ ಸಮಕ್ಷಮದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ದೇವಾಲಯಗಳು ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಪ್ರತಿಬಿಂಬವಾಗಿದೆ. ನಮ್ಮ ನೆಲದ ಪುರಾತನ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಜೀವಂತ ಸ್ಮಾರಕಗಳಾಗಿರುವ ದೇವಾಲಯಗಳು ನಾಡಿನ ಶರಣ ಶ್ರದ್ಧಾ ಕೇಂದ್ರಗಳಾಗಿಯೂ ಕಾರ್ಯನಿರ್ವಹಿಸುತ್ತಿವೆ. ಬೇಡಿ ಬಂದ ಭಕ್ತರ ಬೇಡಿಕೆಗಳನ್ನು ಈಡೇರಿಸಿ , ಭೂ ವ್ಯಾಜ್ಯಗಳನ್ನು ಪರಿಹರಿಸಿ ಸ್ವಂತ ಮನೆ ಇಲ್ಲದ ಕಡುಬಡವರಿಗೆ ಮನೆಯನ್ನು ಅನುಗ್ರಹಿಸಿ, ಮನೆ ಕಟ್ಟಬೇಕೆಂಬ ಕನಸನ್ನು ಸಾಕಾರಗೊಳಿಸಿ ನೆರಳನ್ನು ನೀಡುತ್ತಿರುವ ಭೂವರಹನಾಥ ಸ್ವಾಮಿ ಸುಕ್ಷೇತ್ರಕ್ಕೆ ಅಪಾರವಾದ ಶಕ್ತಿಯಿದೆ ಭೂವರಹನಾಥ ಕಲ್ಲಹಳ್ಳಿ ಕ್ಷೇತ್ರವು ತಿರುಮಲ ತಿರುಪತಿಯ ಮಾದರಿಯಲ್ಲಿ ಸಮಗ್ರವಾಗಿ ಅಭಿವೃದ್ಧಿಯಾಗುತ್ತಿದೆ. ಭೂ ವರಹನಾಥ ದೇವಾಲಯದ ಜೀರ್ಣೋದ್ದಾರಕ್ಕೆ ಅಪಾರವಾದ ನೆರವು ನೀಡಿರುವ ಹೊಯ್ಸಳ ಚಕ್ರವರ್ತಿ ಮೂರನೇ ವೀರ ಬಲ್ಲಾಳನಿಗೆ ಭಕ್ತಿ ನಮನವನ್ನು ಸಲ್ಲಿಸುವ ಕಾರಣದಿಂದಾಗಿ ಈ ದೇವಾಲಯವನ್ನು ಸಂಪೂರ್ಣವಾಗಿ ಗ್ರಾನೈಟ್ ಕಲಿನಿಂದಲೇ ಹೊಯ್ಸಳ ವಾಸ್ತುಶಿಲ್ಪದ ಮಾದರಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ನೂತನವಾಗಿ ಜಗತ್ತಿಗೆ ಪರಿಚಯವಾಗಿರುವ ಕಂಪ್ಯೂಟರ್ ತಂತ್ರಜ್ಞಾನವನ್ನು ಬಳಸಿಕೊಂಡು ಈ ದೇವಾಲಯದ ಕಲ್ಲನ್ನು ಆದಷ್ಟು ಶೀಘ್ರವಾಗಿ ಕೆತ್ತಿಸಿ ಇನ್ನು ಮೂರು ವರ್ಷಗಳಲ್ಲಿ ಮೂರು ಪ್ರಕಾರಗಳ ಭವ್ಯವಾದ ದೇವಾಲಯ ಹಾಗೂ 186 ಅಡಿ ಎತ್ತರದ ಬೃಹತ್ ರಾಜಗೋಪುರವೂ ಕೂಡ ನಿರ್ಮಾಣವಾಗಲಿದೆ ಎಂದು ಸಂಕಲ್ಪ ಮಾಡಿರುವ ಪರಕಾಲ ಶ್ರೀಗಳು ಇಂದು ನನ್ನನ್ನು ಸುರಪುರ ಸಂಸ್ಥಾನದಿAದ ಕರೆಸಿ ಮೈಸೂರು ಸಂಸ್ಥಾನದ ನೆಲದಲ್ಲಿರುವ ಭೂವರಹನಾಥ ಕಲ್ಲಹಳ್ಳಿಯಲ್ಲಿ ತಾಯಿ ಮಹಾಲಕ್ಷ್ಮಿ ಅಮ್ಮನವರ ಭವ್ಯವಾದ ದೇವಾಲಯದ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಮಾಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನನಗೆ ಸಂತೋಷ ತಂದಿದೆ ಏಕೆಂದರೆ ಮೈಸೂರು ಮಹಾಸಂಸ್ಥಾನಕ್ಕೂ ಸುರಪುರ ರಾಜ ಮನೆತನಕ್ಕೂ ಸಾವಿರಾರು ವರ್ಷಗಳ ಅವಿನಾಭಾವ ಸಂಬAಧವಿದೆ ಎಂದು ರಾಜ ಕೃಷ್ಣಪ್ಪನಾಯಕ ಅಭಿಮಾನದಿಂದ ಹೇಳಿದರು.
ಮೈಸೂರು ಅರಸರ ರಾಜ ಗುರುಗಳಾದ ಶ್ರೀ ಪರಕಾಲ ಸ್ವಾಮಿಗಳು ತಾಯಿ ಮಹಾಲಕ್ಷ್ಮಿ ಅಮ್ಮನವರ ದೇವಾಲಯದ ಭೂಮಿ ಪೂಜ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆದಷ್ಟು ಶೀಘ್ರವಾಗಿ ಈ ಹಿಂದೆ ಕ್ಷೇತ್ರದಲ್ಲಿದ್ದ, ಮೊಹಮ್ಮದೀಯರ ದಾಳಿಯಿಂದ ಕಣ್ಮರೆಯಾಗಿರುವ ತಾಯಿ ಮಹಾಲಕ್ಷ್ಮಿ ಅಮ್ಮನವರ ದೇವಾಲಯವನ್ನು ಭವ್ಯವಾಗಿ ಮತ್ತೆ ಹೊಯ್ಸಳ ವಾಸ್ತುಶಿಲ್ಪದ ಮಾದರಿಯಲ್ಲಿ ಶೀಘ್ರವಾಗಿ ನಿರ್ಮಿಸಲು ಸಂಕಲ್ಪ ಮಾಡಲಾಗಿದೆ ಎಂದು ಹೇಳಿದರು.



ಭೂ ವರಹನಾಥ ದೇವಾಲಯ ವ್ಯವಸ್ಥಾಪನಾ ಸಮಿತಿಯ ಮ್ಯಾನೇಜಿಂಗ್ ಟ್ರಸ್ಟಿ ಡಾ. ಶ್ರೀನಿವಾಸ ರಾಘವನ್, ಗಂಜಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ್ ಗೌಡ, ಮಂಡ್ಯ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ ನಾಗೇಶ್, ಪುರಸಭೆ ಮಾಜಿ ಸದಸ್ಯ ಕೆ.ಆರ್.ನೀಲಕಂಠ ಸೇರಿದಂತೆ ಸುರಪುರ ಮಹಾಸಂಸ್ಥಾನದ ರಾಜ ಮನೆತನದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಾಯಿ ಶ್ರೀ ಮಹಾಲಕ್ಷ್ಮಿ ಅಮ್ಮನವರ ದೇವಾಲಯದ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.
More Stories
ಶ್ರೀ ಕಿಕ್ಕೇರಮ್ಮ ಕ್ರಿಕೆಟರ್ಸ್ ವತಿಯಿಂದ ಕಿಕ್ಕೇರಿ ಪ್ರೀಮಿಯರ್ ಲೀಗ್ ಸೀಸನ್ 1
ಶಾಲಾ ಮಕ್ಕಳಿಗೆ ಉಪಯೋಗಕ್ಕೆ ಬಾರದ ಶೌಚಾಲಯ
ಪ್ರೆಂಡ್ಸ್ ರಿಕ್ರಿಯೇಶನ್ ಕ್ಲಬ್ (ರಿ), ಕಿಕ್ಕೇರಿ ವತಿಯಿಂದ ವಿದ್ಯಾರ್ಥಿಗಳಿಗೆ ಸನ್ಮಾನ