November 19, 2025

ಭಟ್ಕಳದ ಬೈಲೂರಿನಲ್ಲಿ ಬಾವಿಗೆ ಬಿದ್ದು ಕೃಷಿಕನ ದುರ್ಮರಣ!

ಬಾಳೆಗಿಡ ಕಡಿಯುವ ಕೆಲಸವೇ ಪ್ರಾಣಾಪಾಯಕ್ಕೆ ಕಾರಣ!

ಭಟ್ಕಳ: ಭಟ್ಕಳ ತಾಲ್ಲೂಕಿನ ಬೈಲೂರಿನಲ್ಲಿ ಕೇಳಗಿನ ಸೇರುಗಾರ ಕೇರಿಯ ಸತೀಶ (೪೬) ಎಂಬ ಕೃಷಿಕನಿಗೆ ಬಾಳೆಗಿಡ ಕಡಿಯುವ ಕೆಲಸವೇ ಜೀವ ಕಿತ್ತುಕೊಂಡ ದಾರುಣ ಘಟನೆ ನಡೆದಿದೆ.
ಮನೆಯ ಹತ್ತಿರದ ಬಾವಿ ಕಟ್ಟೆಯ ಮೇಲೆ ನಿಂತು ಬಾಳೆಗಿಡದ ಗೋಣೆಯನ್ನು ಕಡಿಯುತ್ತಿದ್ದಾಗ ಕಾಲು ಜಾರಿ ನೇರವಾಗಿ ಬಾವಿಗೆ ಬಿದ್ದ ಅವರು, ನೀರು ಕುಡಿದು ಮೃತಪಟ್ಟಿದ್ದಾರೆ.
ಘಟನೆಯ ಬಗ್ಗೆ ಮೃತನ ತಮ್ಮ ಉಲ್ಲಾಸ ಮುರುಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

About The Author

error: Content is protected !!