August 30, 2025

ಇ.ಡಿ ದಾಳಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಮನೆಯಲ್ಲಿ 14.13 ಕೋಟಿ ಮೌಲ್ಯದ ವಸ್ತುಗಳು ಸೀಝ್

ಕಾರವಾರ :– ಉತ್ತರ ಕನ್ನಡ ಜಿಲ್ಲೆಯ ಕಾರವಾರ ಶಾಸಕ ಸತೀಶ್ ಸೈಲ್ ಮನೆಯ ಮೇಲೆ ಅ.13 ಮತ್ತು ಅ.14 ರ ಮುಂಜಾನೆ ವರೆಗೂ ಇ.ಡಿ ದಾಳಿ ಮಾಡಿದ್ದು ಎರಡು ದಿನದ ಕಾರ್ಯಾಚರಣೆಯಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಮನೆಯಲ್ಲಿ ಅಪಾರ ಪ್ರಮಾಣದ ಹಣ ಹಾಗೂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

1.68ಕೋಟಿ ರೂ. ನಗದು ಜತೆ 6.75ಕೆ.ಜಿ. ಚಿನ್ನ ಇದರ ಮೌಲ್ಯ ಸುಮಾರು 6,20,45,319ರೂ ನಷ್ಟಿದೆ.
ಚಿನ್ನಾಭರಣ, ಬ್ಯಾಂಕ್ ಬ್ಯಾಲೆನ್ಸ್ ಹಾಗೂ ಇತರ ಸೊತ್ತುಗಳು ಸೇರಿ ಒಟ್ಟು 14.13 ಕೋಟಿ ರೂ. ಮೌಲ್ಯದ ಸೊತ್ತನ್ಬು ಫ್ರೀಝ್ ಮಾಡಲಾಗಿದೆ.

ಬೆಲೆಕೇರಿ ಅದಿರು ನಾಪತ್ತೆ ಪ್ರಕರಣ ಸಂಬAಧಿಸಿದAತೆ ಪ್ರಮುಖ ಆರೋಪಿಯಾಗಿದ್ದ ಸತೀಶ್ ಸೈಲ್ 2010ರಲ್ಲಿ ಮಲ್ಲಿಕಾರ್ಜುನ್ ಶಿಪ್ಪಿಂಗ್ ಕಂಪೆನಿ ಮೂಲಕ ಸೈಲ್ ನಡೆಸಿದ್ದ ಅವ್ಯವಹಾರ ಸಂಬAಧಿಸಿ ಅ.13 ರ ಮುಂಜಾನೆ ಕಾರವಾರದ ಚಿತ್ತಾಕುಲದ ಮನೆಗೆ ದಾಳಿ ಮಾಡಿ ಎರಡು ಟ್ರಂಕ್‌ನಲ್ಲಿ ಚಿನ್ನ, ಹಣ ಹಾಗೂ ದಾಖಲೆಗಳನ್ನು ಕೊಂಡೊಯ್ದಿದ್ದ ಇ.ಡಿ ಇದೀಗ ಇದರ ಮಾಹಿತಿಯನ್ನು ಪ್ರಕಟಿಸಿದೆ.

About The Author