
ಮುರ್ಡೇಶ್ವರ : ದಿನಾಂಕ: 13/08/2025 ರಂದುಬೆಳಿಗ್ಗೆ 9.30 ಕ್ಕೆ ಕಾಲೇಜು ಸಭಾಂಗಣದಲ್ಲಿ ಆರ್‌ಎನ್‌ಎಸ್ ಪ್ರಥಮ ದರ್ಜೆ ಕಾಲೇಜು ಮುರುಡೇಶ್ವರ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕವತಿಯಿಂದ ನಶಾಮುಕ್ತ ಭಾರತ ಅಭಿಯಾನ 2025 ಕಾರ್ಯಕ್ರಮ… ಮತ್ತು ಪ್ರತಿಜ್ಞಾ ಸ್ವೀಕಾರನಡೆಸಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಪ್ರೊ. ದಿನೇಶ್ ಆಚಾರ್ಯ ಮುಖ್ಯಸ್ಥರು ಆಟೋಮೊಬೈಲ್ ವಿಭಾಗ ಆರ್ ಎನ್ ಎಸ್ ರೂರಲ್ ಪಾಲಿಟೆಕ್ನಿಕ ಮುರುಡೇಶ್ವರರವರು ಮಾತನಾಡಿ ಕೆಲಕಾಲ ಮಾದಕ ವಸ್ತುವನ್ನು ಬಳಸುವುದರಿಂದ ತಾತ್ಕಾಲಿಕ ತೃಪ್ತಿ ಅಥವಾ ಉಲ್ಲಾಸ ದೊರಕಬಹುದು. ಆದರೆ, ದೀರ್ಘಾವಧಿಯಲ್ಲಿ ಬಹುಮಾನ್ಯ ಹಾನಿಯುಂಟಾಗುತ್ತದೆ. ಇದನ್ನು ಅರಿತುಕೊಂಡು ಶಿಸ್ತಿನ ಜೀವನ ನಡೆಸಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ. ಶಾಂತಶ್ರೀ ಹರಿದಾಸ ರವರು ಮಾತನಾಡಿ ತಾತ್ಕಾಲಿಕ ಸಂತೋಷವು ದೀರ್ಘಾವಧಿಯ ನೋವನ್ನು ತರುತ್ತದೆ, ಅದನ್ನು ದೂರವಿಡುವುದು ಉತ್ತಮ. ಮಾದಕ ವಸ್ತುಗಳಿಂದ ದೂರವಿರುವುದು ಆರೋಗ್ಯಕರ, ಸಫಲ, ಸಂತುಷ್ಟ ಜೀವನದ ಮಾರ್ಗವಾಗಿದೆ ಎಂದರು. ರಾಷ್ಟ್ರೀಯ ಸೇವಾ ಯೋಜನೆ ಘಟಕದ ಯೋಜನಾಧಿಕಾರಿಗಳಾದ ಗಣಪತಿ ಕಾಯ್ಕಿಣಿ ಮಾತನಾಡಿ ನಶೆ ಎನ್ನುವುದು ಪ್ರಾರಂಭದಲ್ಲಿ ಸುಖವನ್ನು ನೀಡಿದರೆ, ಕೆಲವೇ ದಿನಗಳಲ್ಲಿ ನಮ್ಮನ್ನು ಆಕ್ರಮಿಸಿ ಸಾವನ್ನ ತರುತ್ತದೆ, ಮಾನವ ಜನ್ಮವನ್ನು ಹಾಳು ಮಾಡಿಕೊಳ್ಳಬಾರದು ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಅತಿ ಮುಖ್ಯ ಎಂದರು. ವೇದಿಕೆಯಲ್ಲಿ ಕಂಪ್ಯೂಟರ್ ವಿಭಾಗದ ಮುಖ್ಯಸ್ಥರಾದ ಗಣೇಶ್ ನಾಯ್ಕ್ ಹಾಜರಿದ್ದರು. ಉಪನ್ಯಾಸಕಿ ಮಮತಾ ಮರಾಠಿ ಕಾರ್ಯಕ್ರಮವನ್ನು ನಿರೂಪಿಸಿ ಎಲ್ಲರನ್ನ ಸ್ವಾಗತಿಸಿದರು. ವಿದ್ಯಾರ್ಥಿಗಳಿಂದ ಪ್ರತಿಜ್ಮಾ ಸ್ವೀಕಾರ ನಡೆಸಲಾಯಿತು.
More Stories
‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’
ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ