
ಭಟ್ಕಳ ; ಸ್ವಾತಂತ್ರ‍್ಯ ಎಂಬುದು ಕೆಚ್ಚಿನ ಹೋರಾಟ,ತ್ಯಾಗ ಬಲಿದಾನದಿಂದ ಗಳಿಸಿಕೊಂಡಿದ್ದೇ ಹೊರತು ಅದು ಸುಮ್ಮನೆ ಬಂದಿರುವುದಲ್ಲ, ಬ್ರಿಟಿಷರು ಕೊಟ್ಟಿರುವುದಲ್ಲ ಎಂದು ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ನುಡಿದರು. ಅವರು ಭಟ್ಕಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸ್ವಾತಂತ್ರೋತ್ಸವದ ಅಂಗವಾಗಿ ಇಲ್ಲಿನ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯ ಒಂದರಿAದ ಏಳನೆಯ ತರಗತಿಯ ವಿದ್ಯಾರ್ಥಿಗಳಿಗೆ ಆಯೋಜಿಸಿದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಿಸಿ ಮಾತನಾಡುತ್ತಿದ್ದರು. ಸ್ವಾತಂತ್ರಕ್ಕಾಗಿ ಹೋರಾಡಿದ ಮಹನೀಯರೆಲ್ಲರೂ ನಮಗೆ ಪ್ರಾತಃ ಸ್ಮರಣಿಯರು. ಅವರ ಸೇವೆಯಿಂದ ನಾವು ಪ್ರೇರಿತಾರಾಗಿ ದೇಶದ ಪ್ರಗತಿಗೆ ನಮ್ಮ ನೆಲೆಯಲ್ಲಿ ಕೊಡುಗೆ ನೀಡುವಂತಾಗಬೇಕು ಎಂದು ನುಡಿದು ಸ್ವಾತಂತ್ರ ಹೋರಾಟದ ಪ್ರೇರಣಾ ಪ್ರಸಂಗಗಳನ್ನು ನೆನಪಿಸಿ ಶಾಲಾ ಎಸ್. ಡಿ. ಎಂ. ಸಿ. ಸದಸ್ಯರು, ಮುಖ್ಯಾದ್ಯಾಪಕರಾದಿಯಾಗಿ ಶಿಕ್ಷಕರು ಸುಂದರವಾಗಿ ಆಯೋಜಿಸಿದ ಸ್ವಾತಂತ್ರ ದಿನಾಚರಣೆಯ ದ್ವಜಾರೋಹಣ, ಮೆರೆವಣಿಗೆ, ಹಾಗೂ ಶಾಲಾ ಮಕ್ಕಳ ಮನರಂಜನಾ ಕಾರ್ಯಕ್ರಮದ ಕುರಿತು ಶ್ಲಾಘಿಸಿದರು.

ಎಸ್. ಡಿ. ಎಂ. ಸಿ. ಅಧ್ಯಕ್ಷ ಹರೀಶ ದೇವಾಡಿಗ ಮಾತನಾಡಿ ಸಾಹಿತ್ಯ ಪರಿಷತ್ತು ಮಕ್ಕಳ ಪ್ರತಿಭೆಯನ್ನು ಪೋಷಿಸುವ ಕಾರ್ಯಕ್ರಮ ಸಂಘಟಿಸಿದ ಬಗೆಗೆ ಸಂತಸ ವ್ಯಕ್ತಪಡಿಸಿ ಸುಂದರವಾಗಿ ಸ್ವಾತಂತ್ರ‍್ಯ ದಿನಾಚರಣೆ ನಡೆಸಿಕೊಟ್ಟ ಮುಖ್ಯಾಧ್ಯಪಕರು ಹಾಗೂ ಶಿಕ್ಷಕ ವ್ರoದದವರ ಕಾರ್ಯ ಮೆಚ್ಚುವಂತಹದು ಎಂದರು.
ಶಾಲಾ ಮುಖ್ಯಾಧ್ಯಾಪಕ ಜನಾರ್ಧನ್ ಮೊಗೇರ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವತಂತ್ರ ಹೋರಾಟದ ಇತಿಹಾಸದ ಕುರಿತು ಮಾತನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಎಸ್. ಡಿ. ಎಂ.ಸಿ. ಉಪಾಧ್ಯಕ್ಷೆ ಸುಶೀಲ ಮೊಗೇರ್, ಸದಸ್ಯ ನಾಗರಾಜ್ ದೇವಾಡಿಗ, ನಿವ್ರತ್ತ ಶಿಕ್ಷಕರಾದ ಮಾಲತಿ ಕೆ., ಪುಷ್ಪ ನಾಯ್ಕ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮವನ್ನು ಶಿಕ್ಷಕಿ ರಾಧಾ ದೇವಾಡಿಗ ನಿರ್ವಹಿಸಿದರೆ ಜ್ಯೋತಿ ಹೊಸಮನಿ ಸ್ವಾಗತಿಸಿದರು. ಜಾನಕೀ ದೇವಾಡಿಗ ಬಹುಮಾನ ವಿತರಣೆಯನ್ನು ನಿರ್ವಹಿಸಿದರೆ ಶಿಕ್ಷಕಿ ದೀಪಾ ಗೌಡ ವಂದಿಸಿದರು.

ಒಂದರಿAದ ಮೂರನೇ ತರಗತಿಯ ವಿದ್ಯಾರ್ಥಿಗಳಿಗೆ ತರಗತಿವಾರು ನಡೆದ ರಾಷ್ಟ್ರಧ್ವಜ ಬಿಡಿಸುವ ಸ್ಪರ್ಧೆಯಲ್ಲಿ ಒಂದನೇ ತರಗತಿಯ ಮಾನ್ವಿತಾ ನಾಯ್ಕ ಪ್ರಥಮ, ವೈಷ್ಣವಿ ದೇವಾಡಿಗ ದ್ವಿತೀಯ, ನೇಹಾ ದೇವಾಡಿಗ ತ್ರತೀಯ, ಎರಡನೇ ತರಗತಿಯ ಭಾರತಿ ಮೊಗೇರ್ ಪ್ರಥಮ, ಗಾನವಿ ನಾಯ್ಕ ದ್ವಿತೀಯ, ಅಕ್ಷತಾ ನಾಯ್ಕ ತೃತೀಯ, ಮೂರನೇ ತರಗತಿಯ ಆಋಷಿ ಶೇಟ್ ಪ್ರಥಮ, ಯಾದವ ನಾಯ್ಕ ದ್ವಿತೀಯ, ಗಾನವಿ ನಾಯ್ಕ ತೃತೀಯ, ಸ್ಮರಣಶಕ್ತಿ ಸ್ಪರ್ಧೆಯಲ್ಲಿ
ನಾಲ್ಕನೇ ತರಗತಿಯಲ್ಲಿ ಅನ್ವಿತಾ ನಾಯ್ಕ ಪ್ರಥಮ, ಹಿಮಾ ನಾಯ್ಕ ದ್ವಿತೀಯ, ತನಿಶ್ ಮೊಗೇರ್ ತೃತೀಯ, ಶಬ್ದ ಭಂಡಾರ ಸ್ಪರ್ಧೆಯಲ್ಲಿ ಐದನೇ ತರಗತಿಯ
ಗ್ರೀಷ್ಮ ನಾಯ್ಕ್ ಪ್ರಥಮ, ಚಿರಾಗ್ ದೇವಾಡಿಗ ದ್ವಿತೀಯ, ಅಶ್ವಿಕ್ ನಾಯ್ಕ ತೃತೀಯ, ಸ್ವತಂತ್ರ ಹೋರಾಟಗಾರರ ಹೆಸರಿಸುವ ಸ್ಪರ್ಧೆಯಲ್ಲಿ ಆರನೇ ತರಗತಿಯ ಪ್ರಧಾನ ಪ್ರಥಮ, ಸನ್ನಿಧಿ ದ್ವಿತೀಯ, ಅನ್ವಿತ ತೃತೀಯ, ಸ್ವತಂತ್ರ ದಿನಾಚರಣೆ ಭಾಷಣ ಸ್ಪರ್ಧೆಯಲ್ಲಿ ಏಳನೇ ತರಗತಿಯ ವಿದ್ಯಾದರ
ಪ್ರಥಮ, ವಿಸ್ಮಿತ ದ್ವಿತೀಯ ಹಾಗೂ ವಿನೀಶ್ ತೃತೀಯ ಬಹುಮಾನ ಪಡೆದುಕೊಂಡರು.
ಪರಿಷತ್ತಿನಿಂದ ವಿಜೇತ ವಿದ್ಯಾರ್ಥಿಗಳಿಗೆ *ಪುಸ್ತಕ ಬಹುಮಾನ ಹಾಗೂ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಸಿಹಿಯನ್ನು ವಿತರಿಸಲಾಯಿತು. ಮುಂಜಾನೆ ಏಳು ಮೂವತ್ತಕ್ಕೆ ಧ್ವಜಾರೋಹಣ ನಡೆಯಿತು. ತದನಂತರದಲ್ಲಿ ಸ್ವತಂತ್ರ ಹೋರಾಟಗಾರರ ಛದ್ಮವೇಷವನ್ನು ಒಳಗೊಂಡ ವಿದ್ಯಾರ್ಥಿಗಳಿಂದ ಆಕರ್ಷಕ ಪ್ರಭಾತಫೆರಿ ನಡೆಯಿತು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ನಡೆದ ಮನೋರಂಜನಾ ಕಾರ್ಯಕ್ರಮವನ್ನು ವಿದ್ಯಾರ್ಥಿಗಳೇ ನಿರ್ವಹಿಸಿದ್ದು ವಿಶೇಷವಾಗಿತ್ತು.ಕಾರ್ಯಕ್ರಮದಲ್ಲಿ ಎಸ್. ಡಿ. ಎಂ. ಸಿ. ಸದಸ್ಯರಾದ ಮೋಹನ್ ನಾಯ್ಕ,ಸುಬ್ರಾಯ ನಾಯ್ಕ, ಲಕ್ಷ್ಮೀಶ್ ನಾಯ್ಕ, ರವಿಕಾಂತ್ ಬಾoದೇಕರ್, ಮಹೇಶ್ ನಾಯ್ಕ,ಪಾರ್ವತಿ ನಾಯ್ಕ,ರಾಮಚಂದ್ರ ದೇವಾಡಿಗ, ಭವಾನಿ ನಾಯ್ಕ, ಅಶ್ವಿನಿ ನಾಯ್ಕ, ನಾಗೇಂದ್ರ ಆಚಾರ್ಯ, ಶಿಕ್ಷಕ ವೃಂದದವರು, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
More Stories
‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’
ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ