
ಹೊನ್ನಾವರ : ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯ ಮೂರ್ತಿಗಳಾದ ಎಸ್. ಜಿ. ಪಂಡಿತ, ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್, ನ್ಯಾಯಮೂರ್ತಿ ಪ್ರದೀಪ ಸಿಂಗ್ ಯೆರೂರ್, ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ, ನ್ಯಾಯಮೂರ್ತಿ ಸಿ.ಎಂ ಜೋಷಿ, ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್ ಫಣೀಂದ್ರ, ಉಪಯೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಶನಿವಾರ ಶ್ರೀ ಕ್ಷೇತ್ರ ಇಡಗುಂಜಿ ಮಹಾಗಣಪತಿ ದರ್ಶನ ಪಡೆದರು.

ಅರ್ಚಕ ಎನ್. ಎಸ್. ಭಟ್ಟ ಪೂಜಾ ಕಾರ್ಯ ನೆರವೆರಿಸಿಕೊಟ್ಟರು. ಈ ಸಮಯದಲ್ಲಿ ವಕೀಲರ ಸಂಘದ ಅಧ್ಯಕ್ಷ ವಿ. ಎಮ್. ಭಂಡಾರಿ, ಕಾರ್ಯದರ್ಶಿ ಉದಯ ಬಿ ನಾಯ್ಕ ಚಿತ್ತಾರ, ನಾಗರಾಜ ಕಾಮತ್, ಕೆ.ವಿ. ನಾಯ್ಕ, ಶ್ರೀಪಾದ ನಾಯ್ಕ, ಸುರೇಶ ಚಂದಾವರ ಉಪಸ್ಥಿತರಿದ್ದರು.
ನ್ಯಾಯಮೂರ್ತಿಗಳು ರವಿವಾರ ಅ. 17 ರಂದು ಸಾಲ್ಕೋಡನಲ್ಲಿ ನಡೆಯಲಿರುವ ಸಹಸ್ರಾರು ವೃಕ್ಷಾರೋಪಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮವು ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಕರ್ನಾಟಕ ಲೋಕಾಯುಕ್ತ, ಜಿಲ್ಲಾ ಕಾನೂನು ಪ್ರಾಧಿಕಾರ ಕಾರವಾರ, ಜಿಲ್ಲಾಡಳಿತ ಉತ್ತರ ಕನ್ನಡ, ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ, ಮಾತೃ ಫೌಂಡೇಶನ್ (ರಿ) ಬೆಂಗಳೂರು, ಇವರು ವಕೀಲರ ಸಂಘ ಹೊನ್ನಾವರ ಪ್ರಾಯೋಜಕತ್ವದಲ್ಲಿ ನಡೆಯಲಿದೆ.
ವರದಿ : ವಿಶ್ವನಾಥ ಸಾಲ್ಕೋಡ್, ಹೊನ್ನಾವರ
More Stories
‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’
ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ