August 30, 2025

ಭಟ್ಕಳದಲ್ಲಿ ದೋಣಿ ಮುಳುಗಿದ ದುರ್ಘಟನೆ: ಓರ್ವ ಮೀನುಗಾರರ ಶವ ಪತ್ತೆ, ಮೂವರು ಇನ್ನೂ ನಾಪತ್ತೆ

ಭಟ್ಕಳ: ಭಟ್ಕಳದ ಅಳ್ವೆಕೋಡಿ ಬಂದರಿಯಿAದ ಬುಧವಾರ ಮಧ್ಯಾಹ್ನ ಮೀನುಗಾರಿಕೆಗೆ ತೆರಳಿದ್ದ ಮಹಾಸತಿ ಎಂಬ ಗಿಲ್ನಟ್ ದೋಣಿ ಸಮುದ್ರದ ಅಲೆಗೆ ಸಿಲುಕಿ ಮುಳುಗಿದ ದುರ್ಘಟನೆ ನಡೆದಿದೆ. ಘಟನೆಯ ವೇಳೆ ದೋಣಿಯಲ್ಲಿ ಇದ್ದ ನಾಲ್ವರು ಮೀನುಗಾರರಲ್ಲಿ ಒಬ್ಬರಾದ ರಾಮಕೃಷ್ಣ ಮಂಜು ಮೊಗೇರ ಅವರ ಶವವನ್ನು ಹೊನ್ನೆಗ್ಗದೆಯ ಸಮುದ್ರ ತೀರದಲ್ಲಿ ಪತ್ತೆಹಚ್ಚಲಾಗಿದೆ.

ಇನ್ನುಳಿದ ಮೂವರು ಸತೀಶ್ ಮೊಗೇರ, ಗಣೇಶ್ ಮೊಗೇರ ಹಾಗೂ ನಿಶ್ಚಿತ ಮೊಗೇರ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ಜೋರಾಗಿದೆ. ಈ ಕಾರ್ಯದಲ್ಲಿ ಸ್ಥಳೀಯ ಮೀನುಗಾರರು ಹಾಗೂ ಕರಾವಳಿ ಭದ್ರತಾ ಪಡೆ ತೊಡಗಿದ್ದಾರೆ.

ಈ ದುರ್ಘಟನೆ ಭಟ್ಕಳದ ಮೀನುಗಾರ ಸಮುದಾಯದಲ್ಲಿ ತೀವ್ರ ಬೇಸರ ಮತ್ತು ಆತಂಕವನ್ನು0ಟುಮಾಡಿದೆ.

About The Author