
ಹೊನ್ನಾವರ : ಒನ್ ಸೈಟ್ ಎಸ್ಸಿಲಾರ್ ಲಕ್ಸೋಟಿಕಾ ಫೌಂಡೇಶನ್ (ರಿ) ಮತ್ತು ಸ್ಪಂದನ ಸೇವಾ ಟ್ರಸ್ಟ್ (ರಿ) ಹಡಿನಬಾಳ ಹಾಗೂ ಹೊನ್ನಾವರ ರೈತ ಉತ್ಪಾದಕ ಕಂಪನಿ ಲಿಮಿಟೆಡ್, ಹಡಿನಬಾಳ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 17-08-2025 ರವಿವಾರದಂದು ಹಡಿನಬಾಳದ ಮಾಧವ ಸಭಾಭವನದಲ್ಲಿ ‘ದೃಷ್ಟಿ’- ಕಣ್ಣಿನ ಉಚಿತ ತಪಾಸಣೆ ಮತ್ತು ಕನ್ನಡಕ ವಿತರಣಾ ಕಾರ್ಯಕ್ರಮ ನಡೆಯಿತು.

ಊರಿನ ಹಿರಿಯರಾದ ಶ್ರೀ ರಮೇಶ ಪ್ರಭು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಕೋರಿದರು. ಅತಿಥಿಗಳಾಗಿ ಉಪಸ್ಥಿತರಿದ್ದ ಶ್ರೀ ಸುರೇಶ್ ಲೋಪಿಸ್ ಅವರು ಮಾತನಾಡಿ ಒನ್ ಸೈಟ್ ಎಸ್ಸಿಲಾರ್ ಲಕ್ಸೋಟಿಕಾ ಫೌಂಡೇಶನ್ ಹಾಗೂ ಸ್ಪಂದನ ಸೇವಾ ಟ್ರಸ್ಟ್ ನ ಸೇವೆಯನ್ನು ಶ್ಲಾಘಿಸಿದರು. ಗ್ರಾಮ ಪಂಚಾಯತದ ಸದಸ್ಯರಾದ ಶ್ರೀ ಸಚಿನ್ ಶೇಟ್ ಮಾತನಾಡಿ ಒನ್ ಸೈಟ್ ನಂತಹ ಸಂಸ್ಥೆಗಳ ಯೋಜನೆಗಳನ್ನು ಗ್ರಾಮೀಣ ಜನರಿಗೆ ತಲುಪಿಸುತ್ತಿರುವ ಸ್ಪಂದನ ಸೇವಾ ಟ್ರಸ್ಟ್ ನ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹೊನ್ನಾವರ ರೈತ ಉತ್ಪಾದಕ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎನ್ ಎಸ್ ಹೆಗಡೆ ಮಾತನಾಡಿ ಸ್ಪಂದನ ಸೇವಾ ಟ್ರಸ್ಟ್ ಕೈಗೊಳ್ಳುವ ಎಲ್ಲಾ ಸಮಾಜಮುಖಿ ಕಾರ್ಯಗಳಿಗೆ ತಮ್ಮ ಕಂಪನಿಯ ಸಹಕಾರವು ಸದಾ ಇರುವುದು ಎಂದರು. ಸ್ಪಂದನ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಗಣಪತಿ ಹೆಗಡೆಯವರು ಆಗಮಿಸಿದ ಸರ್ವರನ್ನೂ ಸ್ವಾಗತಿಸಿ ಕಣ್ಣಿನ ಉಚಿತ ತಪಾಸಣೆ ಮತ್ತು ಕನ್ನಡಕ ವಿತರಣಾ ಕಾರ್ಯಕ್ರಮದ ಉದ್ದೇಶ ರೂಪುರೇಷೆಗಳನ್ನು ವಿವರಿಸಿದರು.
ಶ್ರೀಮತಿ ಸುಧಾ ಹೆಗಡೆ ಕಾರ್ಯಕ್ರಮವನ್ನು ನಿರ್ವಹಿಸಿದರು. ಶ್ರೀ ಪ್ರಕಾಶ ನಾಯ್ಕ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಸುಮಾರು 200 ಕ್ಕೂ ಹೆಚ್ಚಿನ ಫಲಾನುಭವಿಗಳಿಗೆ ಕಣ್ಣಿನ ತಪಾಸಣೆ ನಡೆಸಲಾಯಿತು. ಪಂಚಾಯತ್ ಸದಸ್ಯರು, ಊರ ಗಣ್ಯರು, ಜನನಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಸಿಬ್ಬಂದಿವರ್ಗ ಹಾಗೂ ಸ್ಪಂದನ ಸೇವಾ ಟ್ರಸ್ಟ್ ನ ಸಿಬ್ಬಂದಿವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
More Stories
‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’
ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ