
ಭಟ್ಕಳ : ಪಾಲಕರು ಮಕ್ಕಳ ಎಟಿಎಂ ಆಗಬೇಡಿ, ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿ, ಇದರಿಂದ ಮಕ್ಕಳಲ್ಲಿ ಧೈರ್ಯ ಸ್ಥೈರ್ಯ ಉತ್ತಮ ಮನೋವೃತ್ತಿ ಹಾಗೂ ಜ್ಞಾನವಿಕಾಸ ಉಂಟಾಗುತ್ತದೆ ಎಂದು ಶಿವಾನಿ ಶಾಂತರಾಮ್ ಮಾಲಕರು ಇಂಡೇನ್ ಗ್ಯಾಸ್ ಭಟ್ಕಳ ಇವರು ಹೇಳಿದರು. ಗಾಣಿಗ ಸಮಾಜ ಸೇವಾ ಟ್ರಸ್ಟ್ ( ರಿ ) ಭಟ್ಕಳ ಶ್ರೀ ಗೋಪಾಲಕೃಷ್ಣ ಪತ್ತಿನ ಸಹಕಾರಿ ಸಂಘ ಭಟ್ಕಳ ಹಾಗೂ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಆಡಳಿತ ಮಂಡಳಿ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮೋತ್ಸವದ ಪ್ರಯುಕ್ತ ಆರು ವರ್ಷದೊಳಗಿನ ಮುದ್ದು ಮಕ್ಕಳಿಗಾಗಿ 11ನೇ ವರ್ಷದ ಯಶೋಧ ಕೃಷ್ಣ ಸ್ಪರ್ಧೆ 2025ರ ಬಹುಮಾನ ವಿತರಣಾ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.



ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸುಭಾಷ್ ಎಮ್ ಶೆಟ್ಟಿ ಅಧ್ಯಕ್ಷರು ಗಾಣಿಗ ಸೇವಾ ಟ್ರಸ್ಟ್ ರೀ ಭಟ್ಕಳ ಇವರು ಮಣ್ಣಿಗೆ ಸಂಸ್ಕಾರ ಕೊಟ್ಟರೆ ಮಡಿಕೆಯಾಗುತ್ತದೆ ಮಕ್ಕಳಿಗೆ ಸಂಸ್ಕಾರ ಕೊಟ್ಟರೆ ಮಹಾದೇವನಾಗುತ್ತಾನೆ ಮಕ್ಕಳನ್ನು ಸಂಸ್ಕಾರವAತರನ್ನಾಗಿ ಮಾಡಿ ಸನಾತನ ಧರ್ಮವನ್ನು ಉಳಿಸಿ ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕಿರಣ್ ಕಾಯ್ಕಿಣಿ ಅಧ್ಯಕ್ಷರು ಲಯನ್ಸ್ ಕ್ಲಬ್ ಮುಡೇಶ್ವರ ಪ್ರಪ್ರಥಮಬಾರಿ ಯಶೋಧ ಮತ್ತು ಕೃಷ್ಣ ಸ್ಪರ್ಧೆ ಆಯೋಜಿಸಿ ಯಶಸ್ವಿ ಗೊಳಿಸಿದ ಸಂಘಟಕರ ಕಾರ್ಯ ಶ್ಲಾಘನೀಯ, ಮುಂದಿನ ದಿನಗಳಲ್ಲಿ ತಮ್ಮ ಸೇವಾ ಟ್ರಸ್ಟ್ ಆಯೋಜಿಸುವ ಸಮಾಜ ಮುಖಿ ಕೆಲಸಗಳಿಗೆ ಸಹಕಾರ ನೀಡುವುದಾಗಿ ಹೇಳಿದರು.
ವೇದಿಕೆಯಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷರಾದ ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮನೋಜ ಶೆಟ್ಟಿ, ಗಜಾನನ ಶೆಟ್ಟಿ, ರಾಧಾ ಶೆಟ್ಟಿ, ಶರಣೇಶ ಶೆಟ್ಟಿ, ಸುಧಾಕರ ಶೆಟ್ಟಿ, ರಮೇಶ ಶೆಟ್ಟಿ, ವಿನೋಧ ಶೆಟ್ಟಿ, ರವಿಚಂದ್ರ ಶೆಟ್ಟಿ, ಅಜಯ ಶೆಟ್ಟಿ, ವಿಶಾಲಾಕ್ಷಿ, ಸುರೇಖಾ ಶೆಟ್ಟಿ ಉಪಸ್ಥಿತರಿದ್ದರು. ಯಶೋಧ-ಕೃಷ್ಣ 2025 ರ ವಿನ್ನರ ಸ್ನೇಹ ರಾಜೇಂದ್ರ ಮುರ್ಡೇಶ್ವರ ಹಾಗೂ ರುಹಾನಿ ರಾಜೇಂದ್ರ ಮುರ್ಡೇಶ್ವರ, ರನ್ನರ್ ಆಪ್ ಆಗಿ ಅನಿತಾ ರಾಜೇಶ ಶೆಟ್ಟಿ ಹಾಗೂ ಪುನರ್ವಿ ರಾಜೇಶ ಶೆಟ್ಟಿ ಪಡೆದರೆ ವಿಶೇಷ ಪ್ರಶಸ್ತಿಯನ್ನು ಮಮತಾ ಉಮೇಶ ನಾಯ್ಕ ,ದೃವಿತ ಉಮೇಶ ನಾಯ್ಕ ಹೇಮಾ ಮೊಗೇರ, ದಿಶಾನಿ ಮೊಗೇರ, ಮಂಜುಳಾ ಶಿವಕುಮಾರ ಶ್ರೀತಿಕ ಶಿವಕುಮಾರ ಪಡೆದರು. ಕಾರ್ಯಕ್ರಮದ ಸಂಯೋಜಕರಾದ ಪ್ರಕಾಶ್ ಶಿರಾಲಿ ಸ್ವಾಗತಿಸಿದರು ರಾಜೇಶ್ ಶೆಟ್ಟಿ ವಂದಿಸಿದರು. ಸತ್ಯವತಿ ಶೆಟ್ಟಿ , ಪೂರ್ಣಿಮಾ ಶೆಟ್ಟಿ, ಉಷಾ ಶೆಟ್ಟಿ ಹಾಗೂ ಗಾಯತ್ರಿ ಶೆಟ್ಟಿ, ನಿರೂಪಿಸಿದರು. ಕಾರ್ಯಕ್ರಮದಲ್ಲಿ ಭಟ್ಕಳ ಡಾನ್ಸ ಸ್ಕೂಲನ ವಿದ್ಯಾರ್ಥಿಗಳ ಕೃಷ್ಣ ರೂಪಕ ನೃತ್ಯ ಎಲ್ಲರ ಮೆಚ್ಚುಗೆ ಗಳಿಸಿತು.

More Stories
‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’
ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ