
ಹೊನ್ನಾವರ : ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಗಂಭೀರ ಆರೋಪ ಮಾಡುತ್ತಾ ಕ್ಷೇತ್ರದ ಹೆಸರಿಗೆ ಕಳಂಕ ತರುತ್ತಿರುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹೊನ್ನಾವರದಲ್ಲಿ ಬೃಹತ್ ಜನಾಗ್ರಹ ಸಭೆ ನಡೆದು ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಭಕ್ತವೃಂದದಿAದ ಮನವಿ ಸಲ್ಲಿಸಿದರು.
ಇತ್ತೀಚಿನ ಕೆಲವು ದಿನಗಳಿಂದ “ದಕ್ಷಿಣದ ಕಾಶಿ” ಎಂದೇ ಹೆಸರುವಾಸಿಯಾದ ಸಮಸ್ತ ಹಿಂದುಧರ್ಮದ ಶೃದ್ದಾ ಕೇಂದ್ರವಾದ ಸತ್ಯ ಹಾಗೂ ಧರ್ಮಕ್ಷೇತ್ರವೆಂದೇ ಪ್ರಸಿದ್ಧವಾದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಹಾಗೂ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರ ಕುಟುಂಬದ ತೇಜೋವಧೆ ಮಾಡುತ್ತ ಸುಳ್ಳು ಆರೋಪಗಳನ್ನು ಹೊರಿಸುತ್ತಿದ್ದಾರೆ. ಇವೆಲ್ಲವೂ ನಿಗೂಢ ಪಿತೂರಿ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ವಿಷಯವನ್ನು ಕೂಲಂಕುಶವಾಗಿ ಪರಿಶೀಲಿಸಿದಾಗ ಇದರಲ್ಲಿ ಕಾಣದ ಕೈಗಳ ಕೈವಾಡ ಇರುವುದು ಸ್ಪಷ್ಟವಾಗುತ್ತದೆ. ಪ್ರಾರಂಭದಲ್ಲಿ ಕೆಲವು ವ್ಯಕ್ತಿಗಳು ಕಪೋಲಕಲ್ಪಿತ ಕತೆಗಳನ್ನು ಕಟ್ಟಿಕೊಂಡು ಧರ್ಮಾಧಿಕಾರಿಗಳ ತೇಜೋವಧೆ ಮಾಡಲು ಪ್ರಾರಂಭಿಸಿದ್ದು ಅವ್ಯಾಹತವಾಗಿ ಕ್ಷೇತ್ರದ ಪಾವಿತ್ರ‍್ಯಕ್ಕೆ ಧಕ್ಕೆ ತರಲು ಇನ್ನಿಲ್ಲದ ಕಾಟ ಕೊಡುತ್ತಿದ್ದು, ಇದರಲ್ಲಿ ಯಾವದೇ ಹುರುಳಿಲ್ಲ ಎಂಬುದು ಸಾಬೀತಾಗಿದೆ.
ಇವರು ಸಿದ್ಧಪಡಿಸಿದ ಸುಳ್ಳು ಸಾಕ್ಷಿಗಳು ಕೂಡ ಒಬ್ಬೊಬ್ಬರಾಗಿ ಹಿಂದೆ ಸರಿಯುತ್ತಿರುವುದು ನೋಡಿದಾಗ ಇದೊಂದು ವ್ಯವಸ್ಥಿತ ಪಿತೂರಿ ಎಂದು ಸ್ಪಷ್ಟವಾಗುತ್ತಿದೆ. ಯಾವನೋ ಒಬ್ಬ ಅನಾಮಿಕ ವ್ಯಕ್ತಿಯ ಕೈಗೆ ಬುರುಡೆ ನೀಡಿ ಅವನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಲಯದ ದಿಕ್ಕು ತಪ್ಪಿಸಿ ಸಂಪೂರ್ಣ ವ್ಯವಸ್ಥೆಯ ದುರುಪಯೋಗಪಡಿಸುತ್ತಿದ್ದಾರೆ. ಅನಾಮಿಕ ವ್ಯಕ್ತಿಯ ಸೂಚನೆಯಂತೆ ಹಲವು ಸ್ಥಳಗಳನ್ನು ಅಗೆದರೂ ಒಂದೇ ಒಂದು ಸತ್ಯ ಸಾಕ್ಷಿ ಕೂಡ ದೊರೆತಿಲ್ಲ. ಇದೆಲ್ಲವನ್ನು ಗಮನಿಸಿದಾಗ ಈ ಕೃತ್ಯ ಕೇವಲ ಕೆಲವೇ ವ್ಯಕ್ತಿಗಳಿದ್ದಲ್ಲ ಇದರ ಹಿಂದೆ ಬಹುದೊಡ್ಡ ತಂಡವೇ ಕೆಲಸ ಮಾಡುತ್ತಿದ್ದು ಇವರ ಉದ್ದೇಶ ನಿಗೂಢವಾಗಿದೆ. ಒಟ್ಟಾರೆ ಈ ಎಲ್ಲ ಬೆಳವಣಿಗೆಯಿಂದ ಸಮಸ್ತ ಹಿಂದು ಸಮಾಜ ಆಘಾತಗೊಂಡಿದ್ದು ಶತಶತಮಾನಗಳಿಂದ ಶ್ರೀ ಕ್ಷೇತ್ರದ ಮೇಲೆ ಇಟ್ಟಂತಹ ಅಚಲ ಶೃದ್ಧಾ ಭಕ್ತಿಗೆ ಧಕ್ಕೆಯಾಗಿದೆ. ಇದು ಅಕ್ಷಮ್ಯ ಅಪರಾಧವಾಗಿದ್ದು ಇದರಿಂದ ಹಿಂದು ಸಮಾಜ ಆಕ್ರೋಶಗೊಂಡಿದೆ.
ಈ ವಿಚಾರದಲ್ಲಿ ಸರ್ಕಾರದ ಕ್ರಮ ಆಮೆಗತಿಯಲ್ಲಿ ಸಾಗುತ್ತಿದ್ದು ಶೃದ್ಧಾಳುಗಳು ಭ್ರಮನಿರಸನಗೊಳ್ಳುವಂತಾಗಿದೆ ಈ ಕುರಿತು ಸಮಸ್ತ ಹಿಂದು ಸಮಾಜವು ಈ ಮೂಲಕ ಒಕ್ಕೊರಲಿನಿಂದ ಕೇಳಿಕೊಳ್ಳುವುದೇನೆಂದರೆ, ವಿಳಂಬ ಮಾಡದೆ ಘನ ಸರ್ಕಾರ ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಸೂಕ್ತ ಮತ್ತು ಶ್ರೀಘ್ರ ತನಿಖೆ ನಡೆಸಿ ಅಪರಾಧಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು. ಒಂದು ವೇಳೆ ವಿಫಲವಾದಲ್ಲಿ ಹಿಂದು ಧರ್ಮದ ಗೌರವ ಕಾಪಾಡಲು ಸ್ವಾಭಿಮಾನಿ ಭಕ್ತಕೋಟಿ ಯಾವುದೇ ಮಟ್ಟಕ್ಕೆ ಹೊಗಲು ಹಿಂಜರಿಯಲಾರದು. ಹಿಂದು ಧರ್ಮಕ್ಕೆ ಸೂಕ್ತ ನ್ಯಾಯ ಒದಗಿಸಿಕೊಡುವಿರಾಗಿ ನಂಬಿದ್ದೇವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ತಹಶೀಲ್ದಾರ ಪ್ರವೀಣ ಕರಾಂಡೆ ಮನವಿ ಸ್ವೀಕರಿಸಿದರು.
ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಮುಂಭಾಗ ನಡೆದ ಜನಾಗ್ರಹ ಸಭೆಯಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹಿಂದು ಧಾರ್ಮಿಕ ಕೇಂದ್ರ ಹಾಗೂ ಧರ್ಮದ ಕುರಿತು ನಡೆಯುತ್ತಿರುವ ಷಡ್ಯಂತ್ರದ ಕುರಿತು ಕಟುವಾಗಿ ಟೀಕಿಸಿ ಸಮಾಜದ ಶೃದ್ದಾಕೇಂದ್ರಗಳ ರಕ್ಷಣೆಗೆ ಮುಂದಾಗುವAತೆ ಸಲಹೆ ನೀಡಿದರು.
ಸಾವಿರಾರು ಸಂಖ್ಯೆಯ ಭಕ್ತರು ವಿವಿಧ ಸಂಘಟನೆಯ ಪ್ರಮುಖರು ಈ ವೇಳೆ ಇದ್ದರು.
ವರದಿ : ಭಾವನಾ ಟಿವಿಗಾಗಿ ವಿಶ್ವನಾಥ ಸಾಲ್ಕೋಡ್ ಹೊನ್ನಾವರ
More Stories
‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’
ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ