
ಹೊನ್ನಾವರ : 79 ನೇ ವರ್ಷದ ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ಹೊನ್ನಾವರದ ಪಟ್ಟಣದ ಪೆದ್ರು ಪೋವೆಡಾ ಶಾಲೆಯ ವಿದ್ಯಾರ್ಥಿಗಳಿಗೆ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಸಹಕಾರಿಯ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಬೆಡ್ ಶೀಟ್, ಸಿಹಿ ತಿಂಡಿ ವಿತರಣೆ ಕಾರ್ಯಕ್ರಮ ಜರುಗಿತು.
ಹಿರಿಯ ಪತ್ರಕರ್ತರಾದ ಜಿ.ಯು.ಭಟ್ ಮಾತನಾಡಿ ಮಿಲಾಗ್ರಿಸ್ ಸಹಕಾರಿಯು ತನ್ನ ಲಾಭಾಂಶವನ್ನು ಇಂತಹ ಹಲವಾರು ಸಮಾಜಮುಖಿ ಕಾರ್ಯಕ್ರಮಗಳಿಗೆ ಉಪಯೋಗಿಸುತ್ತಾ ಬಂದಿರುವುದು ಮಾದರಿ ಕಾರ್ಯವಾಗಿದೆ. ಈ ಸಹಕಾರಿಯೂ ಇನ್ನಷ್ಟು ಹೆಚ್ಚು ಅಭಿವೃದ್ಧಿ ಹೊಂದುವ ಮೂಲಕ ಇನ್ನಷ್ಟು ಜನರಿಗೆ ಸಹಾಯಕವಾಗಲಿ ಎಂದು ಹಾರೈಸಿದರು.
ಈ ಸಹಕಾರಿಯು ರಾಜ್ಯದ 11 ಶಾಖೆಗಳಲ್ಲಿಯೂ ಈ ಕಾರ್ಯಕ್ರಮ ನಡೆಸುತ್ತಾ ಬಂದಿದೆ. ಈ ಕಾರ್ಯಕ್ರಮದ ಅಥಿತಿಗಳಾಗಿ ವಂದನೀಯ ಫಾದರ್ ಅಂಥೋನಿ ಲೋಪಿಸ್ , ಮಾಜಿ ಸೈನಿಕರಾದ ಅನಂತ ವಿ ಮಡಿವಾಳ, ಹಿರಿಯ ಪತ್ರಕರ್ತರಾದ ಜಿ.ಯು ಭಟ್, ಶಿಕ್ಷಕರಾದ ಎ .ಎ ಶೇಕ್, ಮಿಲಾಗ್ರಿಸ್ ಸಹಕಾರಿಯ ಆಡಳಿತ ಸಲಹೆಗಾರರಾದ ವಲೇರಿಯನ್ ಜಾರ್ಜ್ ಫರ್ನಾಂಡಿಸ್, ಸಹಕಾರಿಯ ನಿರ್ದೇಶಕರಾದ ಜುಜೆ ಫರ್ನಾಂಡಿಸ್, ಪೆದ್ರು ಮೊವೆಡಾ ಪ್ರಾಂಶುಪಾಲರಾದ ಪ್ಲಾವಿಯಾ ರವರು, ಮಿಲಾಗ್ರಿಸ್ ಹೊನ್ನಾವರ ಶಾಖೆಯ ವ್ಯವಸ್ಥಾಪಕರಾದ ಸಂತೋಷ ನಾಯ್ಕ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ
More Stories
‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’
ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ