August 30, 2025

ಈಶ್ವರ ನಾಯ್ಕರವರು ನಿರ್ದೇಶಕರಾಗಿದ್ದಕ್ಕೆ ಬೋಧಕ ಸಂಘ ಹರ್ಷ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ತದಡಿ ಮೂಲದ ಈಶ್ವರ ಹನುಮಂತ ನಾಯ್ಕರವರು ಶಾಲಾ ಶಿಕ್ಷಣ ಇಲಾಖೆಯ ಧಾರವಾಡದ ಅಪರ ಆಯುಕ್ತಾಲಯದ ನಿರ್ದೇಶಕರಾಗಿ ಬಡ್ತಿಗೊಂಡ ಕುರಿತಂತೆ ಕರ್ನಾಟಕ ರಾಜ್ಯ ಬೋಧಕರ ಸಂಘವು ಹರ್ಷವನ್ನು ವ್ಯಕ್ತಪಡಿಸಿದೆ.

1994 ರಲ್ಲಿ ಸಂತೆಗುಳಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕೆ.ಇ. ಎಸ್. ಪ್ರೊಬೇಷನರಿ ಮುಖ್ಯಾಧ್ಯಾಪಕರಾಗಿ ನೇಮಕಗೊಂಡು ಸೇವೆಯನ್ನು ಆರಂಭಿಸಿದ ಈಶ್ವರ ನಾಯ್ಕರವರು, ನಂತರದಲ್ಲಿ ಪಧೋನ್ನತಿಗೊಂಡು ಬೈಂದೂರು ಮತ್ತು ಕುಮಟಾದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ, ಚಿತ್ರದುರ್ಗ ಮತ್ತು ಕುಮಟಾದ ಡಯಟಿನ ಪ್ರಾಚಾರ್ಯರಾಗಿ, ಉತ್ತರ ಕನ್ನಡ ಜಿಲ್ಲೆಯ ಉಪನಿರ್ದೇಶಕರಾಗಿ, ಬೆಳಗಾವಿಯ ಸಿ.ಟಿ.ಇ.ಯ ಪ್ರಾಂಶುಪಾಲರಾಗಿ, ಧಾರವಾಡದ ಅಪರ ಆಯುಕ್ತಾಲಯದ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದವರು, ನಾಲ್ಕನೆಯ ಹಂತದ ಬಡ್ತಿಯಲ್ಲಿ ಅದೇ ಆಯುಕ್ತಾಲಯದಲ್ಲಿ ನಿರ್ದೇಶಕರಾಗಿ ನಿಯುಕ್ತಿಗೊಂಡಿದ್ದು, ಅಭಿಮಾನದ ವಿಷಯವೆಂದು ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯ ಕೋಶಾಧ್ಯಕ್ಷರಾದ ಶಿವಚಂದ್ರರವರು ಅಭಿಪ್ರಾಯಸಿರುತ್ತಾರೆ.

ಹಿಂದೆ ಕುಮಟಾದ ಡಯಟಿನಲ್ಲಿ ಪ್ರಾಚಾರ್ಯರಾಗಿದ್ದ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಉಪ ನಿರ್ದೇಶಕರಾಗಿದ್ದ ಹರೀಶ ಗಾಂವಕರರವರ ವಯೋನಿವೃತ್ತಿಯ ನಂತರದಲ್ಲಿ ಹೆಚ್ಚುವರಿ ಉಪ ನಿರ್ದೇಶಕರಾಗಿದ್ದ ಈಶ್ವರ ನಾಯ್ಕರವರು, ಮುಂದೆ ಅಲ್ಲಿಯೇ ಪೂರ್ಣಾವಧಿ ಉಪ ನಿರ್ದೇಶಕರಾಗಿ ನಿಯುಕ್ತಿಗೊಂಡAತೆ, ಈಗ ಧಾರವಾಡದ ಅಪರ ಆಯುಕ್ತಾಲಯದಲ್ಲಿ ಸಹ ನಿರ್ದೇಶಕರಾಗಿದ್ದವರು, ಅಲ್ಲಿನ ನಿರ್ದೇಶಕರ ಹುದ್ದೆಯ ಪ್ರಭಾರದಲ್ಲಿಯೂ ಕಾರ್ಯನಿರ್ವಹಿಸಿ, ಅದೇ ಹುದ್ದೆಗೆ ಪೂರ್ಣಾವಧಿಯಾಗಿ ನಿಯುಕ್ತಿಗೊಂಡಿರುವುದು ವಿಶೇಷವಾಗಿದ್ದು, ಸರಳ, ಸಜ್ಜನಿಕೆಯ, ಮೃದು ಸ್ವಭಾವದ ಅವರು, ತಾಯಿಯ ಕುರಿತಂತೆ ಅಪಾರವಾದ ಶ್ರದ್ಧೆಯನ್ನು ಹೊಂದಿದ್ದು, ಕೌಟುಂಬಿಕವಾಗಿ, ಇಲಾಖೆಯೊಂದಿಗೆ ಹಾಗೂ ಸಾರ್ವಜನಿಕ ಸಂಬAಧದಲ್ಲಿ ಮಾತೃ ಹೃದಯದ ನಡವಳಿಕೆಯನ್ನು ಹೊಂದಿದ್ದು, ಸತ್ವಕ್ಕೆ ಮಣಿಯುವ ಉದಾರತೆಯಿಂದ ಕರ್ನಾಟಕ ರಾಜ್ಯ ಬೋಧಕರ ಸಂಘವು ಹುಟ್ಟುಗೊಂಡಲ್ಲಿAದ, ಅದರ ರಚನಾತ್ಮಕ ಚಟುವಟಿಕೆಗಳನ್ನು ಬೆಂಬಲಿಸುತ್ತಲೇ ಬಂದ ಅವರ ಉತ್ಕರ್ಷಕ್ಕೆ ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯ ಸಂಚಾಲಕರಾದ ವಿಜಯಕುಮಾರ್ ಅವರು ಅತೀವ ಸಂತಸವನ್ನು ವ್ಯಕ್ತಪಡಿಸಿರುತ್ತಾರೆ.

ಈಶ್ವರ ನಾಯ್ಕರವರು ನಿರ್ದೇಶಕರಾದ ಕುರಿತಂತೆ ಸಂಘದ ಉಪಾಧ್ಯಕ್ಷ ಎಚ್. ಬಿ. ರಾವತ್,ಎನ್.ಬಿ. ನಾಯಕ ಸೂರ್ವೆ ಹಾಗೂ ಬಾಲಚಂದ್ರ ಗಾಂವಕರ್ ಮೊದಲಾದವರು ಅಭಿನಂದಿಸಿದ್ದಾರೆ.

About The Author