
ಭಟ್ಕಳ: ಅಂಜುಮಾನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಕಂಪ್ಯೂಟರ್ ಅಪ್ಲಿಕೇಶನ್ (AIMCA)ನಲ್ಲಿ, ರಾಬಿತಾ ಸೊಸೈಟಿ ಭಟ್ಕಳ ಹಾಗೂ ಎಸಿಐ ಸರ್ವಿಸ್ ಅಕಾಡೆಮಿ ಮಂಗಳೂರು ಸಹಯೋಗದಲ್ಲಿ ನಿಮ್ಮ ಯುಪಿಎಸ್‌ಸಿ (IAS, KAS) ಮತ್ತು ಇತರೆ ಕ್ಷೇತ್ರಗಳ ಕಡೆಗಿನ ರೋಡ್‌ಮ್ಯಾಪ್ ಶೀರ್ಷಿಕೆಯಲ್ಲಿ ಸಿವಿಲ್ ಸರ್ವಿಸ್ ಜಾಗೃತಿ ಕಾರ್ಯಕ್ರಮ ನಡೆಯಿತು.
ಪಿಎಸ್‌ಐ ಮುಶಾಹಿದ್ ಅಹ್ಮದ್, ಪ್ರೇರಣಾತ್ಮಕ ವಕ್ತಾರ ಮುಹಮ್ಮದ್ ರಫೀಕ್ ಮಾಸ್ಟರ್, ಐಎಎಸ್/ಕೆಎಎಸ್ ತರಬೇತುದಾರ ಸಯ್ಯದ್ ಸಾದತ್ ಪಾಷಾ (ಬೆಂಗಳೂರು) ಹಾಗೂ ಎಸಿಇ ಐಎಎಸ್ ಅಕಾಡೆಮಿಯ ನಿರ್ದೇಶಕ ನಝೀರ್ ಅಹ್ಮದ್ (ಮಂಗಳೂರು) ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ತಂತ್ರಗಳು, ಸಾರ್ವಜನಿಕ ವಲಯದ ಉದ್ಯೋಗಾವಕಾಶಗಳು ಸೇರಿದಂತೆ ಸಿವಿಲ್ ಸರ್ವಿಸ್‌ಗಳ ಮಹತ್ವ ಕುರಿತು ಮಾಹಿತಿ ನೀಡಲಾಯಿತು. ಸುಮಾರು 200 ವಿದ್ಯಾರ್ಥಿಗಳು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ 70ಕ್ಕೂ ಹೆಚ್ಚು ಮಂದಿ ಯುಪಿಎಸ್‌ಸಿ ಹಾಗೂ ಕೆಪಿಎಸ್ಸಿ ಪರೀಕ್ಷೆಗಳಿಗೆ ತಯಾರಿ ನಡೆಸಲು ಆಸಕ್ತಿ ತೋರಿದರು.
ಅಂಜುಮನ್ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಇಸ್ಲಾಕ್ ಶಾಬಂದ್ರಿ, ರಾಬಿತಾ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಹತ್ತಿಕು ರೆಹಮಾನ್ ಮುನೀರಿ, ಪ್ರಾಂಶುಪಾಲ ಮೊಹ್ಸಿನ್ ಕೆ. ಮತ್ತಿತರರು ಉಪಸ್ಥಿತರಿದ್ದರು.
More Stories
‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’
ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ