August 30, 2025

ಪಂಚಾಯತ ಸದಸ್ಯರೋರ್ವರು ಮಾಡಿದ ಟ್ವೀಟ್ ಗೆ ಪುರಸಭೆ ಅಧಿಕಾರಿಗಳು ಸ್ಥಳಕ್ಕೆ

ಭಟ್ಕಳ: ತೆಂಗಿನಗುAಡಿ ಕ್ರಾಸ್ ನಿಂದ ಹೆಬಳೆಗೆ ತೆರಳುವ ರಸ್ತೆಯಲ್ಲಿ ಚರಂಡಿ ಸಮಸ್ಯೆಯಿಂದಾಗಿ ರಸ್ತೆ ತುಂಬೆಲ್ಲ ನೀರು ನಿಂತಿರುವ ರಸ್ತೆಯ ಅವ್ಯವಸ್ಥೆ ಬಗ್ಗೆ ಹೆಬಳೆ ಪಂಚಾಯತ ಸದಸ್ಯರೋರ್ವರು ಮಾಡಿದ ಟ್ವೀಟ್ ಗೆ ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ರಸ್ತೆ ಹಾಗೂ ಒಳಚರಂಡಿ ಸಮಸ್ಯೆಯನ್ನು ಪರಿಶೀಲನೆ ಮಾಡಿದರು.

ಹೆಬಳೆ ಪಂಚಾಯತ ಸದಸ್ಯರಾದ ಸೈಯದ್ ಅಲೀ ಅವರು ಮಂಗಳವಾರ ರಾತ್ರಿ ಮದೀನ ಕಾಲೋನಿಯಿಂದ ಹನಿಫಾಬಾದ್ ಗೆ ಬರುತ್ತಿರುವ ವೇಳೆ ತೆಂಗಿನಗುAಡಿ ಕ್ರಾಸ್ ನಿಂದ ಹೆಬಳೆಗೆ ತೆರಳುವ ರಸ್ತೆ ತುಂಬಾ ನೀರು ನಿಂತ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ತೆರಳಲು ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಬಳಿಯ ರಸ್ತೆಯ ಅವ್ಯವಸ್ಥೆ ಬಗ್ಗೆ ಅವರು ವಿಡಿಯೋ ಚಿತ್ರೀಕರಣ ಮಾಡಿ
@dckarwar@MankalSVaidya@osd_cmkarnataka@CMofKarnataka@satishjarakiholi ಅವರಿಗೆ “ರಾಷ್ಟ್ರೀಯ ಹೆದ್ದಾರಿ 66 ರಿಂದ ತೆನಿಂಗುAಡಿಗೆ ಸಂಪರ್ಕ ಕಲ್ಪಿಸುವ ಪಿಡಬ್ಲ್ಯೂಡಿ ರಸ್ತೆ ಸಂಪೂರ್ಣವಾಗಿ ನದಿಯಾಗಿ ಮಾರ್ಪಟ್ಟಿದೆ. ಪ್ರಯಾಣಿಕರು ದಿನನಿತ್ಯ ಕಷ್ಟಪಡುತ್ತಿದ್ದಾರೆ, ತುರ್ತು ದುರಸ್ತಿ ಅಗತ್ಯವಿದೆ ಎಂದು ಟ್ವೀಟ್ ಮಾಡಿದ್ದರು. ಬಳಿಕ @osಜಛಿmಞಚಿಡಿಟಿಚಿಣಚಿಞಚಿ ದಿಂದ ನೋಟೆಡ್ ಎಂದು ಪ್ರತಿಕ್ರಿಯೆ ಬಂದಿತ್ತು. ಬಳಿಕ ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಹೆಬಳೆ ಪಂಚಾಯತ ಸದಸ್ಯರಾದ ಸೈಯದ್ ಅಲೀ ಅವರಿಗೆ ಪುರಸಭೆ ಅಧಿಕಾರಿಗಳು ಕರೆ ಮಾಡಿ ಸ್ಥಳಕ್ಕೆ ಬರುವಂತೆ ಹೇಳಿದ್ದಾರೆ.

ನಂತರ ಸ್ಥಳಕ್ಕೆ ಪುರಸಭೆ ಅಧ್ಯಕ್ಷರು, ಪುರಸಭೆ ಮುಖ್ಯಾಧಿಕಾರಿ, ಪುರಸಭೆ ಎಂಜಿನಿಯರ, ಪಿಡಬ್ಲ್ಯೂಡಿ ಎಂಜಿನಿಯರ ಸ್ಥಳಕ್ಕೆ ಬಂದು ಅಲ್ಲಿರುವ ಸಮಸ್ಯೆಗಳ ಬಗ್ಗೆ ಪರಿಶೀಲನೆ ಮಾಡಿ ಹೆಬಳೆ ಪಂಚಾಯತ ಸದಸ್ಯರಾದ ಸೈಯದ್ ಅಲೀ ಅವರ ಜೊತೆ ಚರ್ಚೆ ಮಾಡಿ ಎರಡು ಮೂರು ದಿನದೊಳಗಾಗಿ ಸಮಸ್ಯೆ ಪರಿಹಾರಿಸುವುದಾಗಿ ಭರವಸೆ ನೀಡಿದ್ದಾರೆ.

ಈ ಭಾಗದಲ್ಲಿ ರಸ್ತೆ ಎರಡು ಬದಿಯಲ್ಲಿ ಚರಂಡಿ ಎತ್ತರದಲ್ಲಿದ್ದು ರಸ್ತೆ ಕೆಲಭಾಗದಲ್ಲಿರುವುದರಿಂದಾಗಿ ಮಳೆಯ ನೀರು ಚರಂಡಿಯಲ್ಲಿ ಹೋಗದೆ ರಸ್ತೆಯಲ್ಲಿ ನಿಂತುಕೊAಡು ನದಿಯಂತಾಗುದರಿAದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ..

ಸ್ಥಳಕ್ಕೆ ಬಂದ ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವೂಡ ಮಾತನಾಡಿ ತೆಂಗಿನಗುAಡಿ ಕ್ರಾಸ್ ನಿಂದ ಹೆಬಳೆಗೆ ತೆರಳುವ ರಸ್ತೆಯಲ್ಲಿ ನೀರು ನಿಲ್ಲುತ್ತಿರುವ ಬಗ್ಗೆ ದೂರ ಬಂದ ಹಿನ್ನೆಲೆಯಲ್ಲಿ ಪಿಡಬ್ಲ್ಯೂಡಿ ಎಂಜಿನಿಯರ ಜೊತೆಯಲ್ಲಿಸ್ಥಳ ಪರಿಶೀಲನೆಗೆ ಬಂದಿದ್ದೆ. ಇಲ್ಲಿ ರಸ್ತೆಯ 2 ಭಾಗದಲ್ಲಿ ಚರಂಡಿ ಮುಚ್ಚಲಾಗಿದ್ದು. ಆದರೆ ರಸ್ತೆಯಲ್ಲಿನ ನೀರು ಚರಂಡಿಗೆ ಹೇಗೆ ಹೋಗುತ್ತಿಲ್ಲ ಎಂದು ತಿಳಿಯುತಿಲ್ಲ. ಅದಕ್ಕಾಗಿ ನಾಳೆ ಮುಚ್ಚಲಾದ ಚರಂಡಿಯನ್ನು ಒಡೆದು ನೋಡುತ್ತೇವೆ. ಈ ಮೊದಲು ಇಲ್ಲಿ ಯಾವುದೇ ದೂರು ಬಂದಿರಲಿಲ್ಲ. ಅಕ್ಕ ಪಕ್ಕ ದಲ್ಲಿ 2 ಕಟ್ಟಡ ನಿರ್ಮಾಣವಾದ ಬಳಿಕ ಈ ಸಮಸ್ಯೆ ಉಂಟಾಗಿದೆ ಎಂದು ಸ್ಥಳೀಯರು ದೂರುತ್ತಿದ್ದರೆ. ಆದರೆ ರಸ್ತೆಯ 2 ಭಾಗದಲ್ಲಿ ಎತ್ತರವಾಗಿ ಖಾಸಗಿಯವರು ಚರಂಡಿ ನಿರ್ಮಾಣ ಮಾಡಿರುವುದರಿಂದಾಗಿ ಈ ಸಮಸ್ಯೆ ಉಂಟಾಗಿರ ಬಹುದು ಎಂದು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವೂಡ ಹೇಳಿದರು.

ಈ ಬಗ್ಗೆ ಟ್ವೀಟ್ ಮಾಡಿದ ಹೆಬಳೆ ಪಂಚಾಯತ ಸದಸ್ಯರಾದ ಸೈಯದ್ ಅಲೀ ಮಾತನಾಡಿ ಮಂಗಳವಾರ ರಾತ್ರಿ ಮದೀನ ಕಾಲೋನಿಯಿಂದ ಹನಿಫಾಬಾದ್ ಗೆ ಬರುತ್ತಿರುವ ವೇಳೆ ತೆಂಗಿನಗುAಡಿ ಕ್ರಾಸ್ ನಿಂದ ಹೆಬಳೆಗೆ ತೆರಳುವ ರಸ್ತೆ ತುಂಬಾ ನೀರು ನಿಂತಿತ್ತು ಈ ವೇಳೆ ಓರ್ವ ಮಹಿಳೆ ವಾಹನದಿಂದ ಬಿದ್ದು ಗಾಯಗೊಂಡಿದ್ದರು. ಈ ಬಗ್ಗೆ ವಿಡಿಯೋ ಮಾಡಿ ಟ್ವೀಟ್ ಮಾಡಿದ್ದೆ. ಬಳಿಕ ಬುಧವಾರ ಸಂಜೆ ಪುರಸಭೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಮಾಡಿ ಎರಡು ಮೂರು ದಿನದೊಳಗಾಗಿ ಸಮಸ್ಯೆ ಪರಿಹಾರಿಸುವುದಾಗಿ ಭರವಸೆ ನೀಡಿದ್ದಾರೆ.ಎಂದರು

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಅಲ್ತಾಫ್ ಕರೂರಿ, ಪುರಸಭೆ ಎಂಜಿನಿಯರ, ಪಿಡಬ್ಲ್ಯೂಡಿ ಎಂಜಿನಿಯರ ಸುಜಯ ಉಪಸ್ಥಿತರಿದ್ದರು

About The Author