August 30, 2025

ಆಗಸ್ಟ 24 ರಂದು ನಡೆಯುವ ಪಂಪ್ಡ ಸ್ಟೋರೇಜ್ ಯೋಜನೆ ಬಗ್ಗೆ ನಡೆಯುವ ವಿಚಾರಗೋಷ್ಠಿಯ ಮಾಹಿತಿ ನೀಡಿದ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮದರ್ಶಿ ಮಾರುತಿ ಗುರೂಜಿ

ಹೊನ್ನಾವರ : ಜಿಲ್ಲೆಯ ಜನತೆ ಅಣುಸ್ಥಾವರ, ಡ್ಯಾಂ ನಿರ್ಮಾಣ ಸೇರಿದಂತೆ ಅನೇಕ ಯೋಜನೆಗಳಿಗೆ ಜಾಗ ಕಳೆದುಕೊಂಡಿದ್ದಾರೆ. ಇದೀಗ ಶರಾವತಿ ಪಂಪ್ ಸ್ಟೋರೆಜ್ ಯೋಜನೆಯ ಮೂಲಕ ಇನ್ನಷ್ಟು ಜಾಗ ಕಳೆದುಕೊಳ್ಳುವ ಭೀತಿ ಎದುರಾಗಿರುವುದು ಆತಂಕಕಾರಿಯಾಗಿದೆ ಎಂದು ಶ್ರೀ ಕ್ಷೇತ್ರ ಬಂಗಾರ ಮಕ್ಕಿಯ ಧರ್ಮದರ್ಶಿ ಮಾರುತಿ ಗುರೂಜಿ ಕಳವಳ ವ್ಯಕ್ತಪಡಿಸಿದರು.

ಅವರು ಬಂಗಾರಮಕ್ಕಿಯ ನಡೆದ ಪತ್ರಿಕಾಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಆಗಸ್ಟ 24 ರಂದು ನಡೆಯುವ ಪಂಪ್ದ ಸ್ಟೋರೇಜ್ ಯೋಜನೆ ಬಗ್ಗೆ ನಡೆಯುವ ವಿಚಾರಗೋಷ್ಠಿಯ ಮಾಹಿತಿ ನೀಡಿ ಜಿಲ್ಲೆಯ ಅನೇಕ ಯೋಜನೆಯಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಹಣ ಬರಲಿದೆ. ಜಿಲ್ಲೆಯ ಜನರ ತ್ಯಾಗದಿಂದ ಆದಾಯ ಬರುತ್ತಿದ್ದು, ಹಣವನ್ನು ಜಿಲ್ಲೆಯ ಅಭಿವೃದ್ದಿಗೆ ಬಳಸಿ, ಜನರ ಬದುಕು ಕಟ್ಟಿಕೊಳ್ಳಲು ನೆರವಾಗಿ, ಬದುಕು ಕಸಿದುಕೊಳ್ಳಬೇಡಿ ಎಂದು ಆಗ್ರಹಿಸಿದರು. ಶರಾವತಿ ಆಣೆಕಟ್ಟು 2000ರಿಂದ ವಿದ್ಯುತ್ ಉತ್ಪಾದನೆ ಪ್ರಾರಂಭವಾದದಿನದಿAದ ಇಲ್ಲಿಯವರೆಗೆ ಊರಿಗೆ ಆಗಲಿ, ಸುತ್ತಮುತ್ತಲಿನ ಪ್ರದೇಶಕ್ಕೆ ಆಗಲಿ ಯಾವ ಕೊಡುಗೆಯು ಕೆಪಿಸಿಯಿಂದ ಸಿಕ್ಕಿಲ್ಲ. ನಾವು ಅಭಿವೃದ್ಧಿ ವಿರೋಧಿಗಳಲ್ಲ, ಅಭಿವೃದ್ಧಿ ಪರವಾಗಿ ಇದ್ದೇವೆ. ವಿದ್ಯುತ್ ಉತ್ಪಾದನೆಗೆ ಪರ್ಯಾಯ ವ್ಯವಸ್ಥೆ ಇದೆ. ವಯನಾಡು ಅಂಕೋಲಾದ ಶಿರೂರು, ಕೊಡಗು ಜಿಲ್ಲೆಯ ಭೂಕುಸಿತ ಪ್ರಕರಣ ಕಣ್ಣಮುಂದೆ ಇರುವಾಗ, ಗುಡ್ಡ ಕೊರೆದು ಭೂಗತವಾಗಿ ಮಾಡುವ ಯೋಜನೆಗೆ ಅವಕಾಶ ಮಾಡಿಕೊಟ್ಟರೆ, ನೆತ್ತಿಯ ಮೇಲೆ ಕತ್ತಿ ಕಟ್ಟಿಕೊಂಡು ಇದ್ದಂತೆ ಆಗಲಿದೆ. ಯೋಜನೆ ಜಾರಿ ಮಾಡುದೆ ಆದರೆ ಅಮೂಲಾಗ್ರ ವರದಿ ಜನತೆಯ ಮುಂದಿಡಿ. 142 ಎಕ್ಟೆರ್ ಅರಣ್ಯ ಭೂಮಿಯಲ್ಲಿ ಸರಿಸಮಾರು ಹತ್ತು ಸಾವಿರದಷ್ಟು ಮರಗಳು ನಾಶವಾಗಲಿದೆ..

ಯುನೆಸ್ಕೊದಿಂದ ಮಾನ್ಯತೆ ಪಡೆದ ಪಶ್ಚಿಮಘಟ್ಟ ಅರಣ್ಯ ಪ್ರದೇಶವಾಗಿದೆ. ಈ ಯೋಜನೆಗೆ ಬಳಸುವ ಕೋಟಿ ಕೋಟಿ ಅನುದಾನದಿಂದ ಪರ್ಯಾಯ ವಿದ್ಯುತ್ ಉತ್ಪತ್ತಿ ಮಾಡಬಹುದಾಗಿದೆ. ಸಿಂಗಳಿಕ ಸಮುಚ್ಚಳ, ಹುಲಿ ಸಂರಕ್ಷಣೆ ಪ್ರದೇಶ, ಕಾಳಿಂಗ ಸರ್ಪ ಪ್ರದೇಶದಂತ ಸೂಕ್ಷ್ಮ ಪ್ರದೇಶವಾಗಿದೆ. ಈ ಯೋಜನೆಗೆ 10 ಸಾವಿರ ಕೋಟಿ ಸಾಲ ಪಡೆಯಬೇಕಿದೆ. 

ಈ ಹಿಂದೆ ಜೋಗ ಡ್ಯಾಮ್ ನಿರ್ಮಾಣ ಸಂದರ್ಭದಲ್ಲಿ ಭೂಮಿ ಕಳೆದುಕೊಂಡವರಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ.  14 ಸಾವಿರ ಎಕರೆಭೂಮಿ  ಕೊಟ್ಟಿಲ್ಲ.  ಲಿಂಗನಮಕ್ಕಿ ಜಲಾಶಯದ ಹಿಂಭಾಗದಲ್ಲಿ 3800 ದೇವಸ್ಥಾನ ಮುಳುಗಿ ಹೋಗಿದೆ. ಮತ್ತೆ ಜನತೆಗೆ ಸೂಕ್ತ ಮಾಹಿತಿ ನೀಡದೇ ಯೋಜನೆ ಜಾರಿ ಮಾಡುವ ಸರ್ಕಾರದ ನಡೆಯ ಬಗ್ಗೆ ಹಲವು ಅನುಮಾನ ಮೂಡುತ್ತಿದೆ.

ಈ ಎಲ್ಲಾ ವಿಷಯದ ಬಗ್ಗೆ ಚರ್ಚೆ ಮಾಡಲು, ಯೋಜನೆಯ ಅಧ್ಯಯನ ಮಾಡಲು ಅನೇಕ ತಜ್ಞರು, ವಿಜ್ಞಾನಿಗಳು, ಚಿಂತಕರು, ಸಂಸೋದಕರು, ಸಂಘ ಸಂಸ್ಥೆಯವರು ಆಗಮಿಸಿಲಿದ್ದಾರೆ. ಸಾರ್ವಜನಿಕರು ಕೂಡ ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯರ ಮೂಲಕ ಸರ್ಕಾರಕ್ಕೆ ಸಂದೇಶ ತಲುಪಿಸಿದ್ದೀರಾ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಸ್ಥಳೀಯ ಜನರ ಪರವಾಗಿ ಶಾಸಕರಾದ ದಿನಕರ ಶೆಟ್ಟಿಯವರು ಯೋಜನೆ ವಿರುದ್ಧ ಅಧಿವೇಶನದಲ್ಲಿ ಮಾತನಾಡಿದ್ದಾರೆ. ನಾವು ಯಾವುದೇ ಪ್ರತಿಭಟನೆಯನ್ನು ಆಯೋಜಿಸಿಲ್ಲ. ಈ ವಿಷಯವನ್ನು ಚರ್ಚಿಸಲು ನಾವು ಸಮಗ್ರ ಸಭೆಯನ್ನು ಆಯೋಜಿಸಿದ್ದೇವೆ. ಜನರು ಇದರ ಬಗ್ಗೆ ಜಾಗೃತರಾಗಿರಬೇಕು ಗ್ರಾ.ಪಂ. ಮಟ್ಟದಿಂದ ಪ್ರಧಾನ ಮಂತ್ರಿಯವರೆಗೆ ತಲುಪಿಸಬೇಕು. ಪ್ರತಿ ಪಂಚಾಯತ್ ಗ್ರಾಮ ಸಭೆಯಲ್ಲಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಅದನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಸಾಮೂಹಿಕ ಅಭಿಪ್ರಾಯಗಳನ್ನು ಸಂಗ್ರಹಿಸಿದ ನಂತರ, ನಾವು ಖಂಡಿತವಾಗಿಯೂ ಕಾನೂನು ಹೋರಾಟ ಮಾಡುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಕ್ಷೇತ್ರ ಬಂಗಾರಮಕ್ಕಿಯ ವ್ಯವಸ್ಥಾಪಕರಾದ ಅಜಿತಕುಮಾರ, ಮತ್ತಿತರರು ಇದ್ದರು.

ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author