ಭಟ್ಕಳ : ತಾಲೂಕಾ ಪಂಚಾಯತ್ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶನಿವಾರ(ಇಂದು) ಬೆಳಿಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಈಶ್ವರ ಮಂಜಪ್ಪ ನಾಯ್ಕ (61) ಮೃತಪಟ್ಟಿದ್ದಾರೆ. ಪತ್ನಿ ಭಾರತ ನಾಯ್ಕ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕರಿಕಲ್ ಮೂಲದ ಈಶ್ವರ ನಾಯ್ಕ ಮುರುಡೇಶ್ವರ ಬಸ್ತಿ ದೇವಿಖಾನ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಪತ್ನಿಯೊಂದಿಗೆ ವೆಂಟ್ರಮಣ ದೇವಾಲಯಕ್ಕೆ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ.
ಸರ್ಕಲ್ ಭಾಗದಿಂದ ತಾಲೂಕಾ ಪಂಚಾಯತ್ ಕಡೆಗೆ ಬರುತ್ತಿದ್ದ ವೇಳೆ, ಬೈಕ್ ಮೇಲೆ ಟ್ಯಾಂಕರ್ ಮುಂಭಾಗದ ಚಕ್ರ ಹರಿದು, ಹೆಲ್ಮೆಟ್ ಧರಿಸಿದ್ದರೂ ಈಶ್ವರ ನಾಯ್ಕರ ತಲೆಗೆ ತೀವ್ರ ಗಾಯವಾಗಿ ಅವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರು. ಪತ್ನಿಯ ಕೈ ಕಟ್ ಆಗಿ ಗಂಭೀರ ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ನಂತರ ಪತ್ನಿಯ ಆಕ್ರಂದನ ಹೃದಯ ಕಲುಕುವಂತಿತ್ತು. ನವೆಂಬರ್‌ನಲ್ಲಿ ಮಗಳ ಮದುವೆ ನಿಗದಿಯಾಗಿದ್ದು, ಕುಟುಂಬಕ್ಕೆ ಆಘಾತವಾಗಿದೆ. ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

More Stories
ಭಟ್ಕಳ ತಲಾಂದ ಶಾಲೆಯಲ್ಲಿ ಉತ್ಸಾಹಭರಿತ ಪ್ರತಿಭಾ ಕಾರಂಜಿ, ಪುರವರ್ಗ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಗೆ ಸಡಗರ
ಭಟ್ಕಳದಲ್ಲಿ ಶ್ರೀರಾಮ ದಿಗ್ವಿಜಯ ರಥಯಾತ್ರೆಗೆ ಅದ್ದೂರಿ ಸ್ವಾಗತ
ವ್ಯವಹಾರಿಕ ಜ್ಞಾನಕ್ಕೆ ಪಾಠ ಕಲಿಸಿದ ಮಕ್ಕಳ ಸಂತೆ