August 29, 2025

ಫೋನ್ ಕಲೆ ಹಾಕಿ 20 ಲಕ್ಷಕ್ಕೆ ಬೆದರಿಕೆ, ಭಟ್ಕಳದಲ್ಲಿ ಮೂವರು ಸುಲಿಗೆಕೋರರ ನಾಟ್ಯ ಅಂತ್ಯ!

ಭಟ್ಕಳ: ತರಕಾರಿ ವ್ಯಾಪಾರಿಯನ್ನು ಹೆದರಿಸಿ 20 ಲಕ್ಷ ರೂ. ಸುಲಿಗೆ ಮಾಡಲು ಯತ್ನಿಸಿದ ಮೂವರು ಯುವಕರನ್ನು ಭಟ್ಕಳ ಶಹರ ಪೊಲೀಸರು ಪತ್ತೆಹಚ್ಚಿ ಜೈಲಿಗಟ್ಟಿದ್ದಾರೆ. ಭಟ್ಟಗಾಂವ್, ಕಿದ್ವಾಯಿ ರಸ್ತೆಯ ನಿವಾಸಿ ವಿದ್ಯಾಧಿ ಅನ್ವರಭಾಷ (57) ಅಂಗಡಿಯಲ್ಲಿ ಇದ್ದಾಗ, ಆಗಸ್ಟ್ 16ರ ರಾತ್ರಿ ಒಬ್ಬ ಅಪರಿಚಿತನಿಂದ ಕರೆ ಬಂದು, ನಿನ್ನ ಮಗಳ ಖಾಸಗಿ ಫೋಟೋ, ವೀಡಿಯೋ ನನ್ನ ಬಳಿ ಇದೆ. ತಕ್ಷಣ 20 ಲಕ್ಷ ಕೊಡಬೇಕು, ಇಲ್ಲವಾದರೆ ಎಲ್ಲರಿಗೂ ಕಳುಹಿಸಿ ನಿನ್ನ ಮಾನ ಹಾಳು ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ.

ನಂತರ ಆಗಸ್ಟ್ 18 ಮತ್ತು 19ರಂದು ವ್ಯಾಪಾರಿಯ ಪತ್ನಿಯ ಮೊಬೈಲ್‌ಗೆ ಕರೆ ಮಾಡಿ, 15 ಲಕ್ಷ ಆದರೂ ಕೊಡಬೇಕು ಎಂದು ಒತ್ತಾಯಿಸಿದ್ದ. ಬೆದರಿಕೆಗಳಿಂದ ಕಂಗಾಲಾದ ವ್ಯಾಪಾರಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇಲೆ ಕಾರ್ಯಪ್ರವೃತ್ತರಾದ ಇನ್ಸ್ಪೆಕ್ಟರ್ ದಿವಾಕರ ಪಿ.ಎಮ್. ಹಾಗೂ ಪಿ.ಎಸ್.ಐ ನವೀನ್ ಎಸ್. ನಾಯ್ಕ ನೇತೃತ್ವದ ಪ್ರತ್ಯೇಕ ತಂಡ ರಚಿಸಿ ಆರೋಪಗಳಾದ ಮೊಹಮ್ಮದ ಫಾರಿಸ್ ಅಬ್ದುಲ್ ಮುತಲ್ಲಬ್ ಕೋಡಿ ಅಬ್ದುಹುರೇರಾ ಕಾಲೊನಿ ಭಟ್ಕಳ, ಮೊಹಮ್ಮದ ಅರ್ಶದ ಮೊಹಮ್ಮದ ಜುಬೇರ್ ಬ್ಯಾರಿ ಮೂಸಾನಗರ, ಹಾಗೂ ಅಮನ್ ಮಸೂದ ಖಾನ್ ಇಂಜಿನಿಯರಿAಗ್ ವಿದ್ಯಾರ್ಥಿ ಕುಂದಾಪುರ ಹಾಲಾಡಿ ನಿವಾಸಿ, ಆರೋಪಿತರನ್ನು ಪತ್ತೆ ಹಚ್ಚಿ ಬಂಧಿಸಿದೆ ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಕಾರ್ಯಾಚರಣೆ ಮಹೇಶ್ ಎಂ.ಕೆ. ಮಾರ್ಗದರ್ಶನದಲ್ಲಿ ನಡೆದಿದೆ.ಠಾಣೆಯ ಸಿಬ್ಬಂದ್ದಿಯವರಾದ ದಿನೇಶ ನಾಯಕ,ವಿನಾಯಕ ಪಾಟೀಲ್, ನಾಗರಾಜ ಮೊಗೇರ,ಮಹಾಂತೇಶ ಹಿರೇಮಠ,ಕಾಶಿನಾಥ ಕೊಟಗುಣಸಿ,ಮತ್ತು ಲೊಕೇಶ ಕತ್ತಿ, ಮಹೇಶ ಅಮಗೋತ ರಾಘವೇಂದ್ರ ಗೌಡ, ಜಗದೀಶ ನಾಯ್ಕ ಹಾಗೂ ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿಯವರಾದ ಬಬನ್ ಮತ್ತು ಉದಯ ಗುಣಗಾ ರವರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

About The Author