August 30, 2025

ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ

ಪ್ರತಿಯೊರ್ವರು ನಿಯಮಿತವಾಗಿ ವ್ಯಾಯಾಮ, ವಾಕಿಂಗ್ ಮಾಡುವ ಮೂಲಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಲಯನ್ಸ್ ಕ್ಲಬ್ ಸದಸ್ಯರಾದ ಡಾ. ಚಂದ್ರಶೇಖರ ಶೆಟ್ಟಿ ಸಲಹೆ ನೀಡಿದರು.

ಹೊನ್ನಾವರ: ತಾಲೂಕಿನ ಹೊಳ್ಳಾಕುಳಿಯ ಒಕ್ಕಲಿಗರ ಸಮುದಾಯ ಭವನದಲ್ಲಿ ಹಿರಿಯರ ದಿನಾಚರಣೆ ಪ್ರಯುಕ್ತ ಲಯನ್ಸ ಕ್ಲಬ್‌ನ ಹೊನ್ನಾವರ, ಕನ್ನಡ ಸಾಹಿತ್ಯ ಪರಿಷತ್ತು ಹೊನ್ನಾವರ, ಸಮರ್ಪಣಾ ವೇದಿಕೆ ಗುಣವಂತೆ, ಆರ್ಟ್ ಆಫ್ ಲಿವಿಂಗ್ ಬೆಂಗಳೂರು ಮತ್ತು ಶ್ರೀ ಸದ್ಗುರು ಸೇವಾ ಅಭಿವೃದ್ಧಿ ಟ್ರಸ್ಟ ನಿಲೇಕೇರಿ, ಸಹಯೋಗದಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ನಾವು ಆರೋಗ್ಯವಂತ ಇದ್ದರೇ ಮಾತ್ರ ಜೀವನ ನಡೆಸಲು ಸಾಧ್ಯವಿದೆ. ಯಾರನ್ನು ಪ್ರಿತಿಸದೇ ಇದ್ದರೂ ನಮ್ಮ ದೇಹದ ಆರೋಗ್ಯವನ್ನು ಪ್ರೀತಿಸಬೇಕು. ಆರೋಗ್ಯವನ್ನು ಕಾಪಾಡಲು ಪ್ರತಿದಿನ ವ್ಯಾಯಾಮ, ವಾಕಿಂಗ್ ಗೆ ಸಮಯವನ್ನು ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಾವು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದರು.

ಲಯನ್ ಅಧ್ಯಕ್ಷರಾದ ಜೀವೊತ್ತಮ ನಾಯಕ ಮಾತನಾಡಿ ಈ ವರ್ಷ ನಾವು ಉಚಿತ 2 ಆರೋಗ್ಯ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ರೋಗ ಬರುವುದಕ್ಕಿಂತ ರೋಗಗಳನ್ನು ತಡೆಗಟ್ಟಲು ನಾವು ಆದ್ಯತೆ ನೀಡಬೇಕು. ಅದಕ್ಕೆ ತಕ್ಕಂಥೆ ಯೋಗಗಳನ್ನು, ವ್ಯಾಯಾಮಗಳನ್ನು ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.

ಈ ಸಂದರ್ಭದಲ್ಲಿ ಹಿರಿಯರನ್ನು ಗೌರವಿಸಿ ಸನ್ಮಾನಿಸಲಾಯಿತು. ಶಿಬಿರದಲ್ಲಿ ದಂತ ಚಿಕಿತ್ಸೆ, ಸ್ತ್ರೀ ರೋಗ, ಹೃದಯ ಕಾಯಿಲೆ, ಮಕ್ಕಳ ಕಾಯಿಲೆ, ಕಣ್ಣು, ಬಿ.ಪಿ, ಶುಗರ್ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಯಿತು. ಸುಮಾರು 200 ಕ್ಕೂ ಅಧಿಕ ಶಿಬಿರಾರ್ಥಿಗಳು ಪ್ರಯೋಜನ ಪಡೆದುಕೊಂಡರು.

ವೇದಿಕೆಯಲ್ಲಿ ಎ.ವಿ ಶ್ಯಾನಭಾಗ, ಜನಾರ್ದನ ನಾಯಕ, ರಾಜೇಶ ಸಾಳೇಹಿತ್ತಲ,  ಡಾ.ಪ್ರಮೋದ ಶೇಟ ಫಾಯ್ದೆ ಡಾ.ಭಾರ್ಗವ ಶೆಟ್ಟಿ, ಡಾ. ನಾಗರಾಜ ಭೋಸ್ಕಿ, ಮಲ್ಲಿಕಾರ್ಜುನ, ಡಾ. ಸುಹಾಸ ಸಿ.ಎಸ್, ನರಸಿಂಹ ಪಂಡಿತ, ರಾಜೇಶ ಸಾಳೇಹಿತ್ತಲ ಹಾಜರಿದ್ದರು. ಕಸಾಪ ತಾಲೂಕ ಅಧ್ಯಕ್ಷ ಎಸ್.ಎಚ್.ಗೌಡ ಸ್ವಾಗತಿಸಿ, ಜಿ.ಕೆ.ಗೌಡ ವಂದಿಸಿದರು.

ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author