
oplus_0
ಮುರ್ಡೇಶ್ವರ : ಲಯನ್ಸ್ ಕ್ಲಬ್ ಮುರ್ಡೇಶ್ವರವು ಭಟ್ಕಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉಳ್ಮಣ್ಗೆ ಅಂದಾಜು 4ಲಕ್ಷ ರೂಪಾಯಿ ಮೌಲ್ಯದ ಅತ್ಯಂತ ಸುಂದರ ಹಾಗೂ ಸುಸಜ್ಜಿತ ಶೌಚಾಲಯವನ್ನು ನಿರ್ಮಿಸಿ ಲಯನ್ 317ಬಿ ಲಯನ್ ಜಿಲ್ಲೆಯ ಹಿಂದಿನ ಗವರ್ನರ್ ಮನೋಜ್ ಮಾಣಿಕ್ರವರ ಮೂಲಕ ಅನಾವರಣ ಗೊಳಿಸಿ ವಿದ್ಯಾರ್ಥಿಗಳ ಬಳಕೆಗೆ ನೀಡಿದರು.ಶೌಚಾಲಯ ಅನಾವರಣ ಗೊಳಿಸಿ ಮಾತನಾಡಿದ ಅವರು ಲಯನ್ಸ್ ಕ್ಲಬ್ ಜಗತ್ತಿನಾದ್ಯಂತ ಸೇವಾಕಾಯದಲ್ಲಿ ತೊಡಗಿಸಿಕೊಂಡಿದ್ದು ಮುರ್ಡೇಶ್ವರ ಕ್ಲಬ್ನ ಸೇವಾ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ, ಉಳ್ಮಣ್ ಶಾಲೆಯ ಶೌಚಾಲಯ ತೀರಾ ಹಾಳಾಗಿರುವುದನ್ನು ಮನಗಂಡು ಅತೀ ಅಗತ್ಯವಿರುವಲ್ಲಿ ಶೌಚಾಲಯ ನಿರ್ಮಿಸಿಕೊಟ್ಟಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.
ಈ ವೇಳೆ ಮಾಜಿ ಲಯನ್ ಗವರ್ನರ್ ಡಾ.ಗಿರೀಶ ಕುಚಿನಾಡ್, ಲಯನ್ ಪ್ರಾಂತೀಯ ಅಧ್ಯಕ್ಷರಾದ ರಾಜೇಶ ಸಾಲೇಹಿತ್ತಲ್, ಲಯನ್ ವಲಯ ಅಧ್ಯಕ್ಷರಾದ ಮಂಗಲಾ ನಾಯಕ, ನಿವೃತ್ತ ವಲಯ ಅರಣ್ಯಾಧಿಕಾರಿಗಳಾದ ರವೀಂದ್ರ ನಾಯಕ, ಲಯನ್ಸ್ ಕ್ಲಬ್ ಮುರ್ಡೇಶ್ವರದ ಮಾಜಿ ಅಧ್ಯಕ್ಷರಾದ ವಿಶ್ವನಾಥ ಮಡಿವಾಳ, ಹಾಲಿಅಧ್ಯಕ್ಷರಾದ ಕಿರಣ ಕಾಯ್ಕಿಣಿ, ಕಾರ್ಯದರ್ಶಿಗಳಾದ ನಾಗೇಶ ಮಡಿವಾಳ, ಕೋಶಾಧ್ಯಕ್ಷರಾದ ಎಮ್.ವಿ.ಹೆಗಡೆ, ಲಯನ್ ಸದಸ್ಯರು ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಆಗಿರುವ ನಾಗರಾಜ ಭಟ್, ಎಸ್.ಡಿ.ಎಮ್.ಸಿ ಅಧ್ಯಕ್ಷರು,ಸದಸ್ಯರು, ಸ್ವಸ್ತಿಕ್ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷರು, ಸದಸ್ಯರು, ಶಿಕ್ಷಕರು, ಪಾಲಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
More Stories
‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’
ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ