
ಹೊನ್ನಾವರ : ಯುವ ಮೋರ್ಚಾದ ವತಿಯಿಂದ ಹೊನ್ನಾವರ ತಾಲೂಕಿನ ಉಪ್ಪೋಣಿ ಪಂಚಾಯತ್ ವ್ಯಾಪ್ತಿಯ ಕೆಂಬಾಲ್ ಗ್ರಾಮದ ಹೊಸಾನಿಯಲ್ಲಿರುವ ಶ್ರೀ ಮಹಾಗಣಪತಿ ದೇವಾಲಯಕ್ಕೆ ಯುವ ಮೋರ್ಚಾದ ವತಿಯಿಂದ ದೇವಾಲಯದ ಆವರಣದಲ್ಲಿ ನೆಲಹಾಸು ಮತ್ತು ನಾಮಫಲಕ ಅಳವಡಿಸಲಾಯಿತು.
ಇದೇ ಸಂದರ್ಭದಲ್ಲಿ ಯುವ ಮೋರ್ಚಾ ಅಧ್ಯಕ್ಷ ರಘು ಖಾರ್ವಿ, ಉಪಾಧ್ಯಕ್ಷ ಸುಬ್ರಮಣ್ಯ ಹೆಗಡೆ, ಪ್ರಧಾನ ಕಾರ್ಯದರ್ಶಿ ಶಿವಾನಂದ ಮರಾಠಿ, ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶ್ರೀಮತಿ ರಜನಿ ರವಿ ನಾಯ್ಕ, ಯುವ ಮೋರ್ಚಾದ ಸದಸ್ಯರಾದ ನಾಗರಾಜ್ ನಾಯ್ಕ್ ಕೆಂಬಾಲ್ ಹಾಗೂ ಪ್ರಸಾದ್ ಕೋಡಿಯ, ರವಿ ನಾಯ್ಕ ಮತ್ತು ಸ್ಥಳೀಯರು ಉಪಸ್ಥಿತರಿದ್ದರು. ಸೇವೆಗೆ ಸಹಕರಿಸಿದ ಯುವ ಮೋರ್ಚಾ ಪದಾಧಿಕಾರಿಗಳು, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರಮೋದ ನಾಯ್ಕ, ಶ್ರೀಮತಿ ರಜನಿ ರವಿ ನಾಯ್ಕ, ಬೂತ್ ಅಧ್ಯಕ್ಷರಾದ ದಿನೇಶ್ ನಾಯ್ಕ, ಪ್ರದೀಪ್ ನಾಯ್ಕ ಮಹಿಮೆ ಹಾಗೂ ಸ್ಥಳೀಯ ಭಾಜಪಾ ಕಾರ್ಯಕರ್ತರಿಗೆ ಯುವ ಮೋರ್ಚಾದ ವತಿಯಿಂದ ಧನ್ಯವಾದಗಳನ್ನ ತಿಳಿಸಿದ್ದಾರೆ ಎಂದು ಯುವ ಮೋರ್ಚಾ ಹೊನ್ನಾವರ ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
More Stories
‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’
ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ