August 30, 2025

ಹಬ್ಬದ ಮುನ್ನೆಚ್ಚರಿಕೆ ಪೊಲೀಸರ ಭರ್ಜರಿ ರೂಟ್ ಮಾರ್ಚ್

ಭಟ್ಕಳ: ಗಣಪತಿ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಶಾಂತಿ ಸೌಹಾರ್ದ ಕಾಪಾಡಲು ಹಾಗೂ ಯಾವುದೇ ಅಹಿತಕರ ಘಟನೆ ತಡೆಯಲು ಭಟ್ಕಳ, ಗ್ರಾಮೀಣ ಹಾಗೂ ಮುರುಡೇಶ್ವರ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ರೂಟ್ ಮಾರ್ಚ್ ನಡೆಸಿದರು.

ಭಟ್ಕಳ ಪಟ್ಟಣದ ಹಳೆಯ ಬಸ್ ನಿಲ್ದಾಣದಿಂದ ಪ್ರಾರಂಭವಾದ ಮಾರ್ಚ್ ಸುಲ್ತಾನ್ ಸ್ಟ್ರೀಟ್, ಚಿನ್ನದ ಪಳ್ಳಿ, ರಥ ಬೀದಿ ಮತ್ತು ಸರ್ಕಲ್ ಮಾರ್ಗವಾಗಿ ಸಾಗಿತು. ಈ ವೇಳೆ ಇನ್ಸ್ಪೆಕ್ಟರ್ ದಿವಾಕರ ಪಿ.ಎಮ್. ಮತ್ತು ಪಿಎ??? ನವೀನ್ ಎಸ್. ನಾಯ್ಕ ನೇತೃತ್ವ ವಹಿಸಿದ್ದರು. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ತಪಾಸಣೆ ನಡೆಸಿ ಭದ್ರತಾ ಸಿದ್ಧತೆ ಪರಿಶೀಲಿಸಲಾಯಿತು.

ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿ ಸಿಪಿಐ ಮಂಜುನಾಥ ಲಿಂಗಾರೆಡ್ಡಿ ನೇತೃತ್ವದಲ್ಲಿ ಮಾರ್ಚ್ ನಡೆದಿದ್ದು, ಮುರುಡೇಶ್ವರದಲ್ಲಿ ಸಿಪಿಐ ಸಂತೋಷ ಕಾಯ್ಕಿಣಿ ಹಾಗೂ ಪಿಎಸ್‌ಐ ಹನುಮಂತ ಬಿರಾದರ್ ನೇತೃತ್ವದಲ್ಲಿ ಪ್ರಮುಖ ಬೀದಿಗಳಲ್ಲಿ ಪೊಲೀಸರು ಪೆರೇಡ್ ನಡೆಸಿದರು.

ಹಬ್ಬದ ಸಮಯದಲ್ಲಿ ಶಾಂತಿ ಸೌಹಾರ್ದ ಕಾಪಾಡುವುದು ಎಲ್ಲರ ಜವಾಬ್ದಾರಿ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

About The Author