August 29, 2025

ಕರಾಟೆ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾಂಜಲಿ ಶಾಲೆಯ ವಿದ್ಯಾರ್ಥಿನಿ

ಭಟ್ಕಳ :ಇಲ್ಲಿನ ICSE ಪಠ್ಯಕ್ರಮದ ವಿದ್ಯಾಂಜಲಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ದಿನಾಂಕ 22/08/2025 ರಂದು ಜರುಗಿದ CISCE ಶಾಲೆಗಳ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.6ನೇ ತರಗತಿಯ ವಿದ್ಯಾರ್ಥಿನಿಯಾದ ಕುಮಾರಿ ಭಾನ್ವಿ ಚಂದ್ರಕಾ0ತ ನಾಯ್ಕ ಚಿನ್ನದ ಪದಕ ಗೆದ್ದು ರಾಷ್ಟçಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿ ಇತಿಹಾಸ ನಿರ್ಮಿಸಿದ್ದಾಳೆ

.ಇದೇ ಪಂದ್ಯಾವಳಿಯಲ್ಲಿ ಭಾಗವಹಿಸಿದ ವಿಜೇತ ಮೊಗೇರ ಬೆಳ್ಳಿ ಪದಕ ಗೆದ್ದ ರಾಘವೇಂದ್ರ ನಾಯ್ಕ ಹಾಗೂ ತುಷಾರ ಮಹಾಲೆ ಕಂಚಿನ ಪದಕ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.ಶಾಲೆಯ ವಿದ್ಯಾರ್ಥಿನಿಯೊಬ್ಬಳು ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದು ಶಾಲಾ ಆಡಳಿತ ಮಂಡಳಿ ಹಾಗೂ ಪಾಲಕರು ಶ್ಲಾಘಿಸಿದ್ದಾರೆ.ಕಳೆದ ಹಲವಾರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ ನೀಡುತ್ತಿರುವ ಭಟ್ಕಳದ ಶೋಟೋಕಾನ್ ಕರಾಟೆ ಸಂಸ್ಥೆಯನ್ನು ಈ ಸಂಧರ್ಬದಲ್ಲಿ ವಿಶೇಷವಾಗಿ ಆಭಿನಂದಿಸಲಾಗಿದೆ.

About The Author