August 29, 2025

ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಐ.ಸಿ.ಟಿ ಅಕಾಡೆಮಿ – ಇನ್ಫೋಸಿಸ್ ಫೌಂಡೇಷನ್ ವತಿಯಿಂದ ಉದ್ಯೋಗ ಕೌಶಲ್ಯ ತರಬೇತಿ.

ಭಟ್ಕಳ: ಇನ್ಫೋಸಿಸ್ ಫೌಂಡೇಷನ್ ನಿಂದ ಆಯೋಜಿಸಿದ್ದ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಕ್ರಮಕ್ಕೆ ಶ್ರೀ ಗುರು ಸುಧೀಂದ್ರ ಕಾಲೇಜು, ಐ.ಸಿ.ಟಿ ಅಕಾಡೆಮಿ ಮತ್ತು ಇನ್ಫೋಸಿಸ್ ಫೌಂಡೇಷನ್ ಸಹಯೋಗದಲ್ಲಿ ಚಾಲನೆ ನೀಡಲಾಯಿತು. ಉದ್ಘಾಟಕರಾಗಿ ಆಗಮಿಸಿದ್ದ ಐ.ಸಿ.ಟಿ ಅಕಾಡೆಮಿಯ ಕರ್ನಾಟಕ ವಿಭಾಗದ ಮುಖ್ಯಸ್ಥರಾದ ಡಿ. ವಿಷ್ಣು ಪ್ರಸಾದ್ ರವರು ಐ.ಸಿ.ಟಿ ತರಬೇತಿಯ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು. ಐ.ಸಿ.ಟಿ ಅಕಾಡೆಮಿಯ ಪವನ್ ಕಲ್ಯಾಣ ರವರು ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಕಾಲೇಜು ಕೈಗೊಳ್ಳುತ್ತಿರುವ ತರಭೇತಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಪ್ರಾಚಾರ್ಯ ಶ್ರೀ ಶ್ರೀನಾಥ ಪೈ ಮಾತನಾಡಿ, ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಅವರ ಉದ್ಯೋಗ ಸಾಮರ್ಥ್ಯ ಸುಧಾರಿಸಲು ಮತ್ತು ವೃತ್ತಿಪರ ಜಗತ್ತಿಗೆ ಅವರ ಸಿದ್ಧತೆ ಉತ್ತಮಗೊಳಿಸಲು ಸಹಕಾರಿ ಎಂದರು. ರಾಜ್ಯದ 46 ಕಾಲೇಜಿನ ವಿದ್ಯಾರ್ಥಿಗಳಿಗೆ ಇನ್ಫೋಸಿಸ್ ಫೌಂಡೇಷನ್ ತರಬೇತಿ ನೀಡುತ್ತಿದ್ದು. ನಮ್ಮ ಮಹಾವಿದ್ಯಾಲಯವು ಇದರಲ್ಲಿ ಒಂದಾಗಿದೆ ಎಂದರು. ಐ.ಸಿ.ಟಿ ಅಕಾಡೆಮಿಯ ವಿಶಾಲ್ ಆರ್. ಏನ್ 15 ದಿನಗಳ ಕಾಲ ತರಬೇತಿ ತರಬೇತಿ ನೀಡಲಿದ್ದು, ಶಿಬಿರದಲ್ಲಿ 65 ವಿದ್ಯಾರ್ಥಿಗಳು ಫೈನಾನ್ಸ್, ತಾಂತ್ರಿಕ ವಿಷಯ ಸೇರಿದಂತೆ ಸಂವಹನ ಕೌಶಲ,ಸಮಯ ನಿರ್ವಹಣೆ, ನಾಯಕತ್ವ ಕೌಶಲ, ಸೃಜನಶಿಲತೆ ಬಗ್ಗೆ ತರಬೇತಿ ಪಡೆಯಲಿದ್ದಾರೆ. ಐ.ಸಿ.ಟಿ ಸ್ಪೋಕ್ ವಿಖ್ಯಾತ್ ಪ್ರಭು, ಕಾರ್ಯಕ್ರಮ ಸಂಯೋಜಕರಾದ ಶ್ರೀ ವಿಜ್ಞೇಶ ಪ್ರಭು, ಮೆಂಟರ್ಸ್ ಹಾಗು ಉಪನ್ಯಾಸಕಿಯರಾದ ಐಶ್ವರ್ಯ ಐಗೋಡ್, ನಿಖಿತಾ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು, ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author