November 18, 2025

ಭಟ್ಕಳ ಪೊಲೀಸ್ ಠಾಣೆ ಗಣೇಶೋತ್ಸವ, ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ

ಭಟ್ಕಳ: ಭಟ್ಕಳ ನಗರ, ಗ್ರಾಮೀಣ ಪೊಲೀಸ್ ಠಾಣೆ ಹಾಗೂ ಕರಾವಳಿ ಕಾವಲು ಪಡೆಯ ವತಿಯಿಂದ ನಗರ ಠಾಣೆ ಆವರಣದಲ್ಲಿ ವಿಜೃಂಭಣೆಯಾಗಿ ಗಣೇಶೋತ್ಸವ ನಡೆಯಿತು. ಐದು ದಿನಗಳ ಹಬ್ಬದ ಅಂಗವಾಗಿ ಮೂರನೇ ದಿನದಂದು ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಹೊರಗಿನಿಂದ ಯಾವುದೇ ದೇಣಿಗೆ ಸಂಗ್ರಹಿಸದೇ, ಠಾಣೆಯ ಸಿಬ್ಬಂದಿಯೇ ತಮ್ಮ ವೆಚ್ಚದಲ್ಲಿ ಅನ್ನದಾನ ಸೇವೆ ನಡೆಸಿದ್ದು ಭಟ್ಕಳದಲ್ಲೇ ವಿಶಿಷ್ಟ ಪರಂಪರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಬಾರಿ ಮಾತ್ರವೇ ಎರಡು ಸಾವಿರಕ್ಕೂ ಹೆಚ್ಚು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಗಿದೆ.

ಕಾರ್ಯಕ್ರಮಕ್ಕೆ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ.ಜಿ, ಡಿವೈಎಸ್ಪಿ ಮಹೇಶ್ ಕೆ, ಭಟ್ಕಳ ನಗರ ಠಾಣೆ ಸಿಪಿಐ ದಿವಾಕರ್, ಗ್ರಾಮೀಣ ಠಾಣೆ ಸಿಪಿಐ ಮಂಜುನಾಥ ಲಿಂಗಾರೆಡ್ಡಿ, ಮುರುಡೇಶ್ವರ ಠಾಣೆಯ ಸಿಪಿಐ ಸಂತೋಷ ಕಾಯ್ಕಿಣಿ ಹಾಜರಾಗಿ ದೇವರ ದರ್ಶನ ಪಡೆದರು.
ಕಾರ್ಯಕ್ರಮದ ಉಸ್ತುವಾರಿಯನ್ನು ಸಿಪಿಐ ದಿವಾಕರ್, ಎಎಸ್‌ಐ ರಾಮಚಂದ್ರ ವೈದ್ಯ, ರಮೇಶ ಪಟಗಾರ, ರಾಜೇಶ್ ನಾಯ್ಕ, ಹವಾಲ್ದಾರರು ವಿನಾಯಕ ಪಾಟೀಲ್, ದೇವು ನಾಯ್ಕ, ಮಂಜು ನಾಯ್ಕ, ಮಲ್ಲಿಕಾರ್ಜುನ ನಾಯ್ಕ, ಗಿರೀಶ ನಾಯ್ಕ, ಪಿಸಿ ವಿಲಿಯಂ, ಕಿರಣ್ ಪಾಟೀಲ್ ಹಾಗೂ ಇತರ ಸಿಬ್ಬಂದಿ ನಿರ್ವಹಿಸಿದರು. ಸಾರ್ವಜನಿಕರು ಪ್ರತಿ ವರ್ಷವೂ ನಡೆಯುತ್ತಿರುವ ಭಟ್ಕಳ ಪೊಲೀಸ್ ಇಲಾಖೆಯ ಈ ಸಮಾಜಮುಖಿ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

About The Author

error: Content is protected !!