November 19, 2025

ಪತಿಯ ಹಿಂಸೆ ತಾಳಲಾರದೆ ಗೃಹಿಣಿ ಆತ್ಮಹತ್ಯೆ

ಭಟ್ಕಳ: ತಾಲ್ಲೂಕಿನ ಮುಂಡಳ್ಳಿ ನೀರಗದ್ದೆ ಗ್ರಾಮದಲ್ಲಿ ಮಾನವೀಯತೆಯೇ ನಾಚುವಂತ ದುರ್ಘಟನೆ! ಪತಿಯ ನಿರಂತರ ಹಿಂಸೆ ತಾಳಲಾರದೆ 32 ವರ್ಷದ ಸವಿತಾ ಸೋಮಯ್ಯ ನಾಯ್ಕ ಗುರುವಾರ ರಾತ್ರಿ ಮನೆಯಲ್ಲಿ ಉರುಳಿಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆಯಾದಂದಿನಿAದಲೇ ಗಂಡ ಸೋಮಯ್ಯ ಅತಿಯಾದ ಸಂಶಯ ಪಟ್ಟು, ನಿರಂತರವಾಗಿ ಹೊಡೆದು ಬೇಸರಗೊಳಿಸುತ್ತಿದ್ದನೆಂದು ಕುಟುಂಬದವರು ಆರೋಪಿಸಿದ್ದಾರೆ. ದೈಹಿಕ ಮಾನಸಿಕ ಹಿಂಸೆಗೆ ಬೇಸತ್ತು ತಾಳ್ಮೆ ಕಳೆದುಕೊಂಡ ಸವಿತಾ ಕೊನೆಗೂ ಜೀವ ಬಲಿದಾನ ಮಾಡಬೇಕಾಯಿತು.

ನನ್ನ ತಂಗಿಯ ಸಾವಿಗೆ ಪತಿಯೇ ಕಾರಣ ಎಂದು ಸವಿತಾಳ ಅಣ್ಣ ಮೋಹನ ನಾಯ್ಕ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಕ್ಷಣವೇ ಗಂಡನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಗ್ರಾಮೀಣ ಠಾಣೆ ಸಿಪಿಐ ಮಂಜುನಾಥ ಲಿಂಗಾರೆಡ್ಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

About The Author

error: Content is protected !!