August 29, 2025

ಲಿಂಗನಮಕ್ಕಿ ಜಲಾಶಯ ಭರ್ತಿ, ನದಿತೀರದ ಪ್ರದೇಶಗಳಿಗೆ ಜಲಕಂಟಕ ಎದುರಾಗಿದೆ.

ಹೊನ್ನಾವರ: ತಾಲೂಕಿನಲ್ಲಿ ಎಡಬಿಡದೆ ಸುರಿದ ಮಳೆ ಹಾಗೂ ಲಿಂಗನಮಕ್ಕಿ ಜಲಾಶಯ ಭರ್ತಿಯ ಹಿನ್ನಲೆಯಲ್ಲಿ ನೀರು ಬಿಟ್ಟಿರುದರಿಂದ ನದಿತೀರದ ಪ್ರದೇಶಗಳಿಗೆ ಜಲಕಂಟಕ ಎದುರಾಗಿದೆ.

ಗಣೇಶ ಚತುರ್ಥಿ ಹಬ್ಬದ ಸಂಭ್ರಮದಲ್ಲಿರುವಾಗಲೇ ತಾಲೂಕಿನಲ್ಲಿ  ಮುಂಗಾರು ಆರ್ಭಟದಿಂದ ತಾಲೂಕಿನ ಶರಾವತಿ ನದಿಯ ಎಡ ಮತ್ತು ಬಲದಂಡೆಯ ನಿವಾಸಿಗಳು, ಗುಂಡಬಾಳ ಹಾಗೂ ಭಾಸ್ಕೇರಿ ಹೊಳೆ ತೀರದ ಪ್ರದೇಶದ ನೂರಾರು ಮನೆಗಳಿಗೆ ಹಾಗೂ ತೋಟ ಗದ್ದೆಗಳಿಗೆ ನೀರು ನುಗ್ಗಿದೆ. ಅಧಿಕಾರಿಗಳು ನೆರೆಪೀಡಿತ ಪ್ರದೇಶದವರನ್ನು ಸುರಕ್ಷೀತ ಸ್ಥಳಕ್ಕೆ ತರುವ ಕಾಯಕದಲ್ಲಿ ತೊಡಗಿದ್ದು, ಶುಕ್ರವಾರ ಮಧ್ಯಾಹ್ನದೊಳಗೆ ತಾಲೂಕಿನ  ಉಪ್ಪೋಣಿ, ಸರಳಗಿ, ಮಾವಿನಹೊಳೆ, ಹೆರಂಗಡಿ, ಅಳ್ಳಂಕಿ, ಹೈಗುಂದ, ಮೇಲಿನ ಇಡಗುಂಜಿ, ಪಡುಕುಳಿ, ಗುಂಡಿಬೈಲ್, ಹೆಬೈಲ್, ಗುಂಡುಬಾಳ, ಗುಡ್ಡೆಬಾಳ, ವನ್ನಕುಳಿ, ಬೆರೊಳ್ಳಿ, ಹಡಿನಬಾಳ, ಭಾಸ್ಕೇರಿ ಸೇರಿದಂತೆ 15 ಕಡೆ ಕಾಳಜಿ ಕೇಂದ್ರ ತೆರೆದಿದ್ದು, 129 ಕುಟುಂಬದ 368 ಸಾರ್ವಜನಿಕರು ಶಿಪ್ಟ ಮಾಡಲಾಗಿದೆ. ಅಗ್ನಿಶಾಮಕದಳ, ಕಂದಾಯ ಇಲಾಖೆಯ ಅಧಿಕಾರಿಗಳು, ಧರ್ಮಸ್ಥಳ ಯೋಜನೆಯ ಶೌರ್ಯ ವಿಪತ್ತುದಳದವರು ಜನರನ್ನು ಸುರಕ್ಷೀತ ಸ್ಥಳಕ್ಕೆ ತರಲು ಸಹಕರಿಸಿದ್ದಾರೆ. 

ಲಿಂಗನಮಕ್ಕಿ ಜಲಾಶಯವು ಭರ್ತಿಯ ಹಂತದಲ್ಲಿದ್ದು, ಆಣಿಕಟ್ಟಿನ ಸುರಕ್ಷತೆಯ ದೃಷ್ಠಿಯಿಂದ ಗೇಟು ಮೂಲಕ ನೀರು ಹೊರಬಿಡುತ್ತಿದ್ದು, ಮಳೆ ಮುಂದುವರೆದರೆ ತಗ್ಗು ಪ್ರದೇಶದಲ್ಲಿ ಇನ್ನಷ್ಟು ಆತಂಕ ಮನೆ ಮಾಡಲಿದೆ. ಕಂದಾಯ ಇಲಾಖೆ ಸೇರಿದಂತೆ ನೊಡೆಲ್ ಅಧಿಕಾರಿಗಳು ಸ್ಥಳದಲ್ಲೆ ಬೀಡು ಬಿಟ್ಟಿದ್ದು, ಜನ ಹಾಗೂ ಜಾನುವಾರುಗಳಿಗೆ ಸಮಸ್ಯೆ ಉಂಟಾಗದAತೆ ನೋಡಿಕೊಳ್ಳುತ್ತಿದ್ದಾರೆ. ಮಳೆಯು ಅಗಸ್ಟ 2ರವರೆಗೆ ಮುಂದುವರೆಯುವ ಮಾಹಿತಿಯನ್ನು ಹವಮಾನ ಇಲಾಖೆ ನೀಡಿರುದರಿಂದ ಸಾರ್ವಜನಿಕರಲ್ಲಿ ಆತಂಕ ಮುಂದುವರೆದಿದೆ.

ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author