August 31, 2025

ಬೈಕ್ ಲಾರಿ ಡಿಕ್ಕಿ!, ಗಣೇಶೋತ್ಸವದಿಂದ ಮರಳುತ್ತಿದ್ದ ಯುವಕನ ದುರ್ಮರಣ

ಭಟ್ಕಳ: ತಾಲೂಕಿನ ಗಡಿಭಾಗ ಶಿರೂರ ಪೊಲೀಸ್ ಚೆಕ್‌ಪೋಸ್ಟ್ ಹತ್ತಿರ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಹಡವಿನಕೋಣೆ ನಿವಾಸಿ ಗೋಪಾಲ ಜಿ. ಮೇಸ್ತ (25) ದುರ್ಮರಣ ಹೊಂದಿದ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

ಶುಕ್ರವಾರ ರಾತ್ರಿ ಒಂದೂವರೆ ಗಂಟೆ ಸುಮಾರಿಗೆ ಗಣೇಶ ಚೌತಿ ಕಾರ್ಯಕ್ರಮ ಮುಗಿಸಿ ಊಟಕ್ಕೆ ತೆರಳುತ್ತಿದ್ದಾಗ ಬೈಕ್ ಲಾರಿಗೆ ಡಿಕ್ಕಿಯಾಗಿ ದುರಂತ ಸಂಭವಿಸಿದೆ. ಗೋಪಾಲ ಮೇಸ್ತ ಸ್ಥಳದಲ್ಲೇ ಕೊನೆಯುಸಿರೆಳೆದರೆ, ಜೊತೆಗಿದ್ದ ಮನೋಜ್ ಮೇಸ್ತ ಗಂಭೀರ ಗಾಯಗೊಂಡು ಭಟ್ಕಳ ಸರ್ಕಾರಿ ಆಸ್ಪತ್ರೆ ಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

error: Content is protected !!