September 5, 2025

ನಾಣಿಕಟ್ಟಾ ಗ್ರಾಮ ಸಮುದಾಯಗಳ ದೇವಾಲಯಗಳು ಹಾಗು ಹಿಂದೂ ಬಾಂಧವರಿ0ದ ಮನವಿ

ಸಿದ್ದಾಪುರ : ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ದ ಪಿತೂರಿ ನಡೆಸಿ ಅಪವಿತ್ರಮಾಡುತ್ತಿರುವವರನ್ನು ವಿಚಾರಣೆಗೆ ಒಳಪಡಿಸಿ ಸೂಕ್ತ ಕಾನೂನು ಕ್ರಮವಾಗಬೇಕೆಂದು ರಾಜ್ಯಪಾಲರಿಗೆ ಆಗ್ರಹಿಸಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಸಭಾಭವನ ನಾಣಿಕಟ್ಟಾದಲ್ಲಿ ನಾಣಿಕಟ್ಟಾ ಗ್ರಾಮ ಸಮುದಾಯಗಳ ದೇವಾಲಯಗಳು ಹಾಗು ಹಿಂದೂ ಬಾಂಧವರಿAದ ಸೋಮವಾರ ಗ್ರಾಮ ಪಂಚಾಯತಕ್ಕೆ ಭೇಟಿ ನೀಡಿ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಮುಖಂಡ ಶ್ರೀ ಉಪೇಂದ್ರ ಪೈ ಸಿರಸಿ ಇವರು ಶ್ರೀಕ್ಷೇತ್ರವನ್ನು ಅಪವಿತ್ರಗೊಳಿಸುತ್ತಿರುವ ಸುಜಾತ ಭಟ್,ಸಮೀರ ಮುಲ್ಲಾ,ಗಿರೀಶ ಮೆಟ್ಟಣ್ಣನವರ್,ಮಹೇಶ ಶೆಟ್ಟಿ,ತಿಮರೋಡಿ,ಜಯಂತ ಟಿ ಹಾಗೂ ಮುಸುಕುದಾರಿ ಚನ್ನಯ್ಯ ಡಿ ಇವರ ಹಿಂದಿರುವ ಕಾಣದ ಕೈಗಳ ವಿರುದ್ದ ಮೊದಲು ತನಿಕೆ ನಡೆಸಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ವೇದಿಕೆಮೇಲೆ ಯುವ ಮುಖಂಡ ಶ್ರೀ ಅನಂತಮೂರ್ತಿ ಹೆಗಡೆ ಸಿರಸಿ, ಶ್ರೀ ಎಂ ಆರ್ ಹೆಗಡೆ ಬಾಳೇಜಡ್ಡಿ , ಶ್ರೀ ಎಂ ಎಂ ಹೆಗಡೆ ಹಂಗಾರಖAಡ,ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಯಶೋಧಾ ದತ್ತಾತ್ರೇಯ ನಾಯ್ಕ್ ದೊಡ್ಡಜಡ್ಡಿ ,ಶ್ರೀ ಗಣಪತಿ ಗಣೇಶ ಹೆಗಡೆ ಸೂರನ್ ನೂರಾರು ಸಂಖ್ಯೆಯಲ್ಲಿ ಹಿಂದೂ ಬಾಂಧವರು ,ಮಾತೆಯರು ಸೇರಿದ್ದರು.

About The Author

error: Content is protected !!