September 11, 2025

ಉಚಿತ ಮದುಮೆಹ ತಪಾಸಣಾ ಶಿಬಿರ ಮತ್ತು ಬಿಪಿ ತಪಾಸಣಾ ಶಿಬಿರ

ಮುರ್ಡೇಶ್ವರ : ಲಯನ್ಸ್ ಕ್ಲಬ್ ಮುರುಡೇಶ್ವರ ದ ವತಿಯಿಂದ ನಡೆದ ಉಚಿತ ಮದುಮೆಹ ತಪಾಸಣಾ ಶಿಬಿರ ಮತ್ತು ಬಿಪಿ ತಪಾಸಣಾ ಶಿಬಿರ ಮುರುಡೇಶ್ವರ ರೈಲ್ವೆ ಸ್ಟೇಷನ್ ನಲ್ಲಿ ನಡೆಯಿತು. ಶಿಬಿರದ ಉದ್ಗಾಟನೆ ಮಾಡಿ ಮಧುಮೇಹ ಮತ್ತು ಬಿಪಿ ಕಾಯಿಲೆ ಯ ಬಗ್ಗೆ ಸವಿಸ್ತಾರವಾಗಿ ಕಾರ್ಯಕ್ರಮದ ಪ್ರಾಯೋಜಕರಾದ ಎಂಜೆಎಫ್ ಲಯನ್ ಡಾ ಸುನಿಲ್ ಜತ್ತನ್ ರವರು ತಿಳಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಗಳಾಗಿ ಮುರುಡೇಶ್ವರ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಕಿರಣ್ ಶೆಟ್ಟಿ ಯುವಕರಲ್ಲಿ ಬಿಪಿ ಶುಗರ್ ಕಾಯಿಲೆಯ ಬಗ್ಗೆ ಕಾಳಜಿಯ ಬಗ್ಗೆ ತಿಳಿ ಹೇಳಿದರು.
ಮುರುಡೇಶ್ವರ ರೈಲ್ವೆ ಸ್ಟೇಷನ್ ಮಾಸ್ಟರ್, ಡಾ ವಾದಿರಾಜ್ ಭಟ್, ಡಾ ಹರಿಪ್ರಸಾದ್ ಕಿಣಿ,ಲಯನ್ ಸುಬ್ರಾಯ ನಾಯ್ಕ್ ,ಡಾ ಮನೋಜ್,ಗೌರಿಶ್ ಟಿ ನಾಯ್ಕ್,ವಿಶ್ವನಾಥ್ ಮಡಿವಾಳ,ಗಜಾನನ ಭಟ್ ಉಪಸ್ಥಿತರಿದ್ದರು
ಲಯನ್ ಎಂ ವಿ ಹೆಗ್ಡೆವಂದಿಸಿದರು. ರೈಲ್ವೆ ಸಿಬ್ಬಂದಿಗಳು ರಿಕ್ಷಾ ಸಿಬ್ಬಂದಿಗಳು ಸಾರ್ವಜನಿಕರು ರೈಲ್ವೆ ಪ್ರಯಾಣಿಕರು ಕಾರ್ಯಕ್ರಮದ ಪ್ರಯೋಜನ ಪಡೆದು ಕೊಂಡರು.

About The Author

error: Content is protected !!