
ಹೊನ್ನಾವರ: ತಾಲೂಕಿನ ಪ್ರಸಿದ್ಧ ಕಾರಣಿಕ ಕ್ಷೇತ್ರಗಳಲ್ಲೊಂದಾದ ಕಾನಗೋಡ ಶ್ರೀ ಚೆನ್ನಕೇಶವ ದೇವರ ಸನ್ನಿಧಿಯಲ್ಲಿ `ಅನಂತ ಚತುರ್ದಶಿ’ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವರ್ಷಂಪ್ರತಿಯAತೆ ಶನಿವಾರ ವಿಜೃಂಭಣೆಯಿAದ ಸಂಪನ್ನವಾಯಿತು.
ಬೆಳಿಗ್ಗೆ ದೇವತಾ ಪ್ರಾರ್ಥನೆ, ಅನಂತ ಚತುರ್ಥ ವೃತಾಚರಣೆ, ವಿಶೇಷ ಪುಷ್ಪಾಲಂಕಾರ, ಮಹಾಮಂಗಳಾರತಿ, ಮಹಾನೈವೇದ್ಯ ಸೇರಿದಂತೆ ಇತರೆ ಧಾರ್ಮಿಕ ಕಾರ್ಯಕ್ರಮಗಳು ದೇವಾಲಯದ ಅರ್ಚಕರಾದ ಶಂಭು ಭಟ್ಟ ಅವರ ನೇತ್ರತ್ವದಲ್ಲಿ ನಡೆಯಿತು. ಭಕ್ತಾಧಿಗಳು ಶ್ರೀ ಸನ್ನಿದಿಗೆ ಆಗಮಿಸಿ ಹಣ್ಣು,ಕಾಯಿ ಸಮರ್ಪಿಸಿ ವಿವಿಧ ಸೇವೆ ಸಲ್ಲಿಸಿದರು. ರೈತರು ತಮ್ಮ ಹೊಲದಲ್ಲಿ,ತೋಟದಲ್ಲಿ ಬೆಳೆದಂತಹ ಬೆಳೆಯ ವಿವಿಧ ರೀತಿಯ ಫಲವನ್ನು ಶ್ರೀ ದೇವರಿಗೆ ಫಲಾವಳಿಯ ರೂಪದಲ್ಲಿ ಸಲ್ಲಿಸಿ ಬೆಳೆ ಸಮ್ರದ್ದಿಯಾಗಲಿ ಎಂದು ಬೇಡಿಕೊಂಡರು. ದೇವರ ದರ್ಶನ ಪಡೆದು ಸರತಿ ಸಾಲಿನಲ್ಲಿ ಬಂದು ತೀರ್ಥ ಪ್ರಸಾದ ಸ್ವಿಕರಿಸಿದರು. ಮಹಾಪೂಜೆಯ ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಎಲ್ಲಾ ಸಮಾಜ ಭಾಂದವರ ಸಹಕಾರದಿಂದ ಇಲ್ಲಿನ ಕಾರ್ಯಕ್ರಮ ನೇರುವೇರುತ್ತದೆ. ಅನಂತ ಚತುರ್ದಶಿಯದಿನದಂದು ಇಲ್ಲಿ ಭೊಜನ ಮಾಡುವುದು ಅತ್ಯಂತ ವಿಶೇಷವಾದದು ಇಷ್ಠಾರ್ತಗಳು ಸಿದ್ದಿಯಾಗುತ್ತದೆ ಎಂಬ ಪ್ರತಿತಿ ಇದೆ.
ಪ್ರಾಣಿಗಳು ಮುಟ್ಟಿದ ಅಥವಾ ಎಂಜಲು ಮಾಡಿದ ಆಹಾರಗಳನ್ನು ಅರಿಯದೆ ಸೇವಿಸಿದ್ದರೆ ಅನಂತ ಚತುರ್ದಶಿಯಂದು ಶ್ರೀದೇವರ ಪ್ರಸಾದ ಸೇವಿಸಿದರೆ ಅದರ ದೋಷ ಪರಿಹಾರವಾಗುತ್ತದೆ ಎನ್ನುವ ನಂಬಿಕೆಯು ಭಕ್ತ ವರ್ಗದಲ್ಲಿದೆ.

ಈ ಕುರಿತು ಭಕ್ತರಾದ ನಾಗರಾಜ ಪ್ರಭಾಕರ ಶೇಟ್ ಮಾತನಾಡಿ, “ಸಾವಿರಾರು ವರ್ಷಗಳ ಹಿಂದೆ ಪ್ರತಿಷ್ಠಾಪಿಸಲ್ಪಟ್ಟ ದೇವಾಲಯ. ಕಾರಣಿಕವಾದ ಸತ್ಯ ಕ್ಷೇತ್ರ. ಪ್ರತಿವರ್ಷ ಶ್ರದ್ದಾಭಕ್ತಿಯಿಂದ ಅನಂತ ಚತುರ್ದಶಿ ಆಚರಣೆ ನಡೆಯುತ್ತದೆ. ಯಾವುದೇ ಕಳ್ಳತನ ನಡೆದಾಗ ಇಲ್ಲಿನ ಕೊಂಕಣತೋಟ ನಾಗಬನಕ್ಕೆ ಬಂದು ಶ್ರೀ ದೇವರಲ್ಲಿ ಮೊರೆಯಿಟ್ಟಾಗ ಕಳುವಾದ ವಸ್ತು ಸಿಗುತ್ತದೆ ಎಂಬ ನಂಬಿಕೆ ಇದೆ.ಇದು ಅತ್ಯಂತ ಜಾಗೃತ ಸ್ಥಳವಾಗಿದ್ದು ಯಾವುದೇ ಶುಭ ಕಾರ್ಯಗಳಿಗೆ ಇಲ್ಲಿ ಎಡಬಲ ಸಿಂಗಾರದ ಮೂಲಕ ಪ್ರಸಾದ ಕೇಳುವ ರೂಢಿ ನ್ಯಾಯಯುತ ಬೇಡಿಕೆಗಳು,ನಿಷ್ಕಲ್ಮಶ ಮನಸ್ಸಿನಿಂದ ಬೇಡಿದ ಭಕ್ತರ ಇಷ್ಟಾರ್ಥಗಳು ಈಡೇರುತ್ತದೆ”ಎಂದರು.
ಇನ್ನೊರ್ವ ಭಕ್ತರಾದ ಚಂದ್ರಹಾಸ ಗೌಡ , ಈ ದೇವಾಲಯದಲ್ಲಿ ನಡೆಯುವ ಅನಂತನೋಪಿ ಆಚರಣೆ ವಿಶೇಷವಾಗಿದೆ.ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ದೇವರಲ್ಲಿ ನಿಷ್ಕಲ್ಮಶವಾಗಿ ಬೇಡಿಕೊಂಡಾಗ ನಮ್ಮ ಕೋರಿಕೆಗಳು ಈಡೇರುತ್ತದೆ ಎಂದರು.
ಇನ್ನು ಧಾರ್ಮಿಕ ಕಾರ್ಯಕ್ರಮದ ನಂತರ ಫಲಾವಳಿ ಸವಾಲು,ಅನ್ಮಸಂತರ್ಪಣೆ ನಡೆಯಿತು. ಶ್ರೀ ದೇವರ ಅಲಂಕಾರ,ಬಾಳೆದಿAಡಿನ ದಂಡಾವಳಿ ಭಕ್ತರ ಆಕರ್ಷಣಿಯವಾಗಿತ್ತು.ತಾಲೂಕಿನ ವಿವಿಧೆಡೆಯಿಂದ ಭಕ್ತಾಧಿಗಳು ಶ್ರೀ ಚೆನ್ನಕೇಶವವನ ಸನ್ನಿದಿಗೆ ಆಗಮಿಸಿದ್ದರು.
ವರದಿ : ವಿಶ್ವನಾಥ ಸಾಲ್ಕೊಡ್ ಹೊನ್ನಾವರ
More Stories
ಸಚಿವ ಮಂಕಾಳ ಎಸ್. ವೈದ್ಯ ಅಧ್ಯಕ್ಷತೆ ಯಲ್ಲಿ ನಡೆದ ಕೆ.ಡಿ.ಪಿ. ಸಭೆ; ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ
ಹಳೆ ಬಸ್ ನಿಲ್ದಾಣದ ಮೀನು ಮಾರುಕಟ್ಟೆ ವಿವಾದ; ವ್ಯಾಪಾರಿಗಳ ಬದುಕಿಗೆ ಕುತ್ತು
ಪೊಲೀಸರಿಗೆ ಒತ್ತಡ ನಿರ್ವಹಣೆಯ ಪಾಠ:ಸಮಯೋಚಿತ ಹೆಜ್ಜೆ ಭಟ್ಕಳದಲ್ಲಿ ಕಾರ್ಯಾಗಾರ