September 11, 2025

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಹೊಸ ಹೆಜ್ಜೆ: ಪ್ರತಿ ಮನೆಗೆ ಸಿಸಿ ಕ್ಯಾಮರಾ ಯೋಜನೆಗೆ ಚಾಲನೆ

ಭಟ್ಕಳ: ಕಳ್ಳತನ, ದರೋಡೆ, ಸುಲಿಗೆ ಪ್ರಕರಣಗಳ ತನಿಖೆಯಲ್ಲಿ ಎದುರಾಗುತ್ತಿದ್ದ ಸಿಸಿ ಕ್ಯಾಮರಾ ಕೊರತೆಯನ್ನು ನಿವಾರಿಸಲು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯು ಪ್ರತಿ ಮನೆಗೆ ಸಿಸಿ ಕ್ಯಾಮರಾ ಅಭಿಯಾನಕ್ಕೆ ಚಾಲನೆ ನೀಡಿದೆ.
ಮಂಗಳವಾರ ಶ್ರೀ ಚಿತ್ರಾಪುರ ಮಠದಲ್ಲಿ ನಡೆದ ಕಾರ್ಯಕ್ರಮವನ್ನು ಶೈಕ್ಷಣಿಕ ಸಲಹೆಗಾರ ಡಾ. ರವೀಂದ್ರ ಕಾಯ್ಕಿಣಿ ಹಾಗೂ ಜಾಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎಂ. ಮಂಜಪ್ಪ ಹಸಿರು ನಿಶಾನೆ ತೋರಿಸಿ ಉದ್ಘಾಟಿಸಿದರು. ಈ ಯೋಜನೆಯಡಿ ಗ್ರಾಮೀಣ ಠಾಣಾ ವ್ಯಾಪ್ತಿಯ ಪ್ರತಿಯೊಂದು ಮನೆ, ಅಂಗಡಿ, ವ್ಯಾಪಾರ ಸಂಸ್ಥೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ಪ್ರೋತ್ಸಾಹ ನೀಡಲಾಗುವುದು ಎಂದು ಪೊಲೀಸರು ತಿಳಿಸಿದರು. ಜನರ ಸಹಕಾರದೊಂದಿಗೆ ಕಾನೂನು ಸುವ್ಯವಸ್ಥೆ ಕಾಪಾಡುವುದು ಮುಖ್ಯ ಗುರಿಯಾಗಿದೆ ಎಂದು ಸಿಪಿಐ ಮಂಜುನಾಥ ಲಿಂಗಾರೆಡ್ಡಿ ಹೇಳಿದರು.
ಕಾರ್ಯಕ್ರಮದಲ್ಲಿ ಪಿಎಸೈ ರನ್ ಗೌಡ್, ಶ್ರೀವಲಿ ಶಾಲೆಯ ಶಿಕ್ಷಕ ನಾರಾಯಣ ನಾಯ್ಕ, ಪೊಲೀಸ್ ಸಿಬ್ಬಂದಿ ನಾರಾಯಣ ನಾಯ್ಕ, ಸುಬ್ರಹ್ಮಣ್ಯ ನಾಯ್ಕ, ಅಶೋಕ ನಾಯ್ಕ, ಸಾವಿತ್ರಿ ಗೋಪಾಲ ಪುರದ್, ದೇವರಾಜ್ ಮೊಗೇರ್ ಹಾಗೂ ಸ್ಥಳೀಯ ಆಟೋ ಚಾಲಕರು ಉಪಸ್ಥಿತರಿದ್ದರು.

About The Author

error: Content is protected !!