
ಧರ್ಮದ ಹೆಸರಿನಲ್ಲಿ ಪ್ರಚೋದನೆ; ಹಿಂದೂ ಜಾಗರಣ ವೇದಿಕೆ ವತಿಯಿಂದ ನಗರ ಠಾಣೆ ಗೆ ಮನವಿ
ಭಟ್ಕಳ: ಪುರಸಭೆ ವ್ಯಾಪ್ತಿಯ ಹಳೆ ಬಸ್ ನಿಲ್ದಾಣ (ರಾಜಾಂಗಣ) ಪ್ರದೇಶದಲ್ಲಿ ನೂರಾರು ವರ್ಷಗಳಿಂದ ಸಾಗಿಬಂದಿರುವ ಮೀನು ಮಾರುಕಟ್ಟೆ ಇದೀಗ ವಿವಾದದ ಕೇಂದ್ರವಾಗಿದೆ. ಬಡ ಮೀನು ವ್ಯಾಪಾರಿಗಳ ಬದುಕೇ ಅಪಾಯದಲ್ಲಿರುವ ಸ್ಥಿತಿ ಉಂಟಾಗಿದೆ. ಈ ಕುರಿತು ಹಿಂದೂ ಜಾಗರಣ ವೇದಿಕೆ, ಭಟ್ಕಳ ಘಟಕವು ನಗರ ಠಾಣೆ ಸಿಪಿಐ ದಿವಾಕರ ಪಿ.ಎಂ. ಅವರಿಗೆ ಮನವಿ ಸಲ್ಲಿಸಿದೆ.
ಸುಮಾರು 150-200 ಪುರುಷ ಮಹಿಳೆಯರು ಈ ಮಾರುಕಟ್ಟೆ ಅವಲಂಬಿಸಿ ಜೀವನ ಸಾಗಿಸುತ್ತಿದ್ದು, ಅವರ ಆಧಾರದ ಮೇಲೆ ಹಣ್ಣು ತರಕಾರಿ, ದಿನಸಿ ಕಿರಾಣಿ ಅಂಗಡಿಗಳು ಹಾಗೂ ರಿಕ್ಷಾ ಚಾಲಕರೂ ಬದುಕು ಕಟ್ಟಿಕೊಂಡಿದ್ದಾರೆ. ಕಾಲಕಾಲಕ್ಕೆ ನವೀಕರಿಸಲ್ಪಟ್ಟಿದ್ದರೂ, ಮಾರುಕಟ್ಟೆಯ ಚಟುವಟಿಕೆ ಎಂದಿನAತೆಯೇ ಇದೇ ಸ್ಥಳದಲ್ಲಿ ಮುಂದುವರಿದಿದೆ.
ಆದರೆ ಸೆಪ್ಟೆಂಬರ್ 1ರಿಂದ ಸಂತೆ ಮಾರ್ಕೆಟಿನಲ್ಲಿ ಕೇವಲ 60 ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಿ ಹೊಸ ಮೀನು ಮಾರುಕಟ್ಟೆ ಆರಂಭಿಸಿರುವುದರಿAದ ಗೊಂದಲ ಹುಟ್ಟಿಕೊಂಡಿದೆ. ಧರ್ಮದ ಹೆಸರಿನಲ್ಲಿ ಕೆಲವರು ತಮ್ಮದೇ ಸಮುದಾಯದವರನ್ನು ಅಲ್ಲಿ ಖರೀದಿಗೆ ಪ್ರಚೋದಿಸುತ್ತಿರುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದೇ ವೇಳೆ ಹಳೆ ಮಾರುಕಟ್ಟೆಯ ವಿರುದ್ಧ ಸ್ವಚ್ಛತೆ ಹೆಸರಿನಲ್ಲಿ ಅಪಪ್ರಚಾರ ನಡೆಯುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ಸ್ಥಳೀಯರ ಅನುಮಾನ ಪ್ರಕಾರ, ಹಳೆ ಮಾರುಕಟ್ಟೆ ಮುಚ್ಚಿಸಿ ಆ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಪುರಸಭೆಯ ಕೆಲ ಅಧಿಕಾರಿಗಳೂ ಕೈಜೋಡಿಸಿರುವ ಶಂಕೆ ವ್ಯಕ್ತವಾಗಿದೆ. ಭಟ್ಕಳವು ಕೋಮು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಇಂತಹ ಧಾರ್ಮಿಕ ಪ್ರಚೋದನೆಗಳು ಮುಂದಿನ ದಿನಗಳಲ್ಲಿ ಶಾಂತಿಬಸುವ್ಯವಸ್ಥೆಗೆ ಧಕ್ಕೆಯಾಗಬಹುದೆಂಬ ಭೀತಿ ವ್ಯಕ್ತವಾಗಿದೆ. ಹೀಗಾಗಿ ಪ್ರಚೋದನೆ ನಡೆಸುತ್ತಿರುವವರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೀನು ವ್ಯಾಪಾರಿಗಳು ಆಗ್ರಹಿಸಿದ್ದಾರೆ.
ಜಿಲ್ಲಾ ಹಿಂದೂ ಜಾಗರಣಾ ಸಹ ಸಂಯೋಜಕ ದಿನೇಶ ನಾಯ್ಕ, ತಾಲೂಕು ಸಂಯೋಜಕ ಜಯಂತ ನಾಯ್ಕ, ಸಹ ಸಂಯೋಜಕ ನಾಗೇಶ ನಾಯ್ಕ, ಕುಮಾರ್ ನಾಯ್ಕ,ರಾಘವೆಂದ್ರ ನಾಯ್ಕ, ಶ್ರೀಕಾಂತ್ ನಾಯ್ಕ,ರಾಘವೆಂದ್ರ ನಾಯ್ಕ,ಮುಠಳ್ಳಿ ವಿನಾಯಕ ಆಚಾರಿ,ಶ್ರೀನಿವಾಸ್ ನಾಯ್ಕ ಹನುಮಾನ್ ನಗರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
More Stories
ಮೀನುಗಾರಿಕೆಯಲ್ಲಿ ಯುವ ಮೀನುಗಾರನ ಅಕಾಲಿಕ ಸಾವು
ಮುರ್ಡೇಶ್ವರ ಬಳಿ ಕಾರಿಗೆ ಅಂಬುಲೆನ್ಸ್ ಡಿಕ್ಕಿ: ಮೂವರಿಗೆ ಗಾಯ
ನೀರಿಲ್ಲದೆ ನಲುಗಿದ ಬೆಂಗ್ರೆ ಉಳ್ಳಣ್, ಶಶಿಹಿತ್ತು ಭಾಗದ ಜನರು: ಪಂಚಾಯತ್ ಗೆ ಗ್ರಾಮಸ್ಥರ ಮುತ್ತಿಗೆ