September 11, 2025

ಮುರ್ಡೇಶ್ವರ ಬಳಿ ಕಾರಿಗೆ ಅಂಬುಲೆನ್ಸ್ ಡಿಕ್ಕಿ: ಮೂವರಿಗೆ ಗಾಯ

ಭಟ್ಕಳ: ಮುರುಡೇಶ್ವರ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬುಧವಾರ ಸಂಭವಿಸಿದ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ. ಚಂದಾವರದ ಪ್ರಕಾಶ ಡಿಯೋಗ ನರೋನಾ (33) ತಮಿಳುನಾಡಿನಿಂದ ಮರಳುತ್ತಿದ್ದು, ಮುರುಡೇಶ್ವರ ಬೈಲುರು ಕ್ರಾಸ್ ಹತ್ತಿರ ತಮ್ಮ ಇಕೊ ಕಾರನ್ನು ನಿಲ್ಲಿಸಿದ್ದರು. ಕಾರಿನಲ್ಲಿದ್ದ ಆಲನ್ ಸ್ಪ್ಯಾನಿ ಇಳಿಯುವ ವೇಳೆ, ಮುರುಡೇಶ್ವರದಿಂದ ಹೊನ್ನಾವರದ ಕಡೆಗೆ ಅತಿವೇಗದಲ್ಲಿ ಬರುತ್ತಿದ್ದ ಖಾಸಗಿ ಅಂಬುಲೆನ್ಸ್ ಕಾರಿಗೆ ಹಿಂಬದಿ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಆಲನ್ ಸ್ಪ್ಯಾನಿ ತಲೆಗೆ ಹಾಗೂ ಎಡ ಕೈ ಮಣಿಕಟ್ಟಿಗೆ ಗಾಯಗೊಂಡಿದ್ದಾರೆ. ಅಂಬುಲೆನ್ಸ್ ಹಿಂಬದಿ ಸವಾರ ಮಂಜುನಾಥ ಚಂದ್ರು ಗೌಡ (ಅಂಗಡಿಹಿತ್ತ, ಹೊನ್ನಾವರ) ತಲೆ, ಕೈಕಾಲುಗಳಿಗೆ ಗಾಯಗೊಂಡಿದ್ದಾರೆ. ಕಾರು ಮಾಲೀಕರಾದ ಪ್ರಕಾಶ ನರೋನಾ ಇವರಿಗೂ ಎರಡು ಕಾಲುಗಳಿಗೆ ಪೆಟ್ಟಾಗಿದೆ.

ಅಪಘಾತದಲ್ಲಿ ಇಕೊ ಕಾರಿಗೆ ಹಾನಿಯಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಸಂಬAಧ ಪ್ರಕಾಶ ನರೋನಾ ಅವರು ಅಂಬುಲೆನ್ಸ್ ಚಾಲಕ ಭರತ್ ಮಾದೇವ ಗೌಡ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

About The Author

error: Content is protected !!