September 11, 2025

ಮೀನುಗಾರಿಕೆಯಲ್ಲಿ ಯುವ ಮೀನುಗಾರನ ಅಕಾಲಿಕ ಸಾವು

ಭಟ್ಕಳ: ಮಠದಹಿಟ್ಟು ಸಮೀಪ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ವೇಳೆ ಯುವ ಮೀನುಗಾರ ಅಸ್ವಸ್ಥನಾಗಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಡೆದಿದೆ.
ಮಠದಹಿಟ್ಟು ಮೂಲದ ಯಶವಂತ ಮಂಜುನಾಥ ಮೊಗೇರ (35) ಪಾತಿ ದೋಣಿಯಲ್ಲಿ ಸಮುದ್ರಕ್ಕೆ ತೆರಳಿ ಬಲೆ ಬಿಡುತ್ತಿದ್ದಾಗ ಹಠಾತ್ ಅಸ್ವಸ್ಥನಾಗಿ ದೋಣಿಯಲ್ಲೇ ಕುಸಿದು ಬಿದ್ದನು. ತಕ್ಷಣವೇ ಸಹೋದ್ಯೋಗಿಗಳು ಅವನನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ, ಮಾರ್ಗ ಮಧ್ಯೆ ಆತ ಕೊನೆಯುಸಿರೆಳೆದಿದ್ದಾನೆ.
ಈ ಸಂಬAಧ ದೇವಿದಾಸ ಮೊಗೇರ ನೀಡಿದ ದೂರಿನ ಮೇರೆಗೆ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

error: Content is protected !!