October 5, 2025

ಜಿಲ್ಲಾ ಮಟ್ಟಕ್ಕೆ ಬಂಕಿಕೊಡಲದ ಆನಂದಾಶ್ರಮ ಪ್ರೌಢಶಾಲೆ

ಕುಮಟ : ಪ್ರಗತಿ ಆಂಗ್ಲ ಮಾಧ್ಯಮ ಮೂರೂರು ಇವರ ಆಶ್ರಯದಲ್ಲಿ ನಡೆದ ಕುಮಟಾ ತಾಲೂಕು ಮಟ್ಟದ ಇಲಾಖ ಕ್ರೀಡಾಕೂಟದಲ್ಲಿ ಆನಂದಶ್ರಮ ಪ್ರೌಢಶಾಲೆ ಬಂಕಿ ಕೊಡಲದ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿರುತ್ತಾರೆ. ಗುಂಪು ಆಟ ಹುಡುಗಿಯರ ಕಬ್ಬಡ್ಡಿ * ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರೆ ಹುಡುಗರ ಶಟಲ್ ಬ್ಯಾಡ್ಮಿಂಟನ್ ದ್ವಿತೀಯ ಸ್ಥಾನ ವೈಯಕ್ತಿಕ ವಿಭಾಗದಲ್ಲಿ *ಅನಿಕೇತ್ ಎ ಚೋಡನ್ಕರ್ 3000 ಓಟದಲ್ಲಿ ದ್ವಿತೀಯ ಸ್ಥಾನ ರೋಹನ್ ಎಸ್ ಗೌಡ 1500 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. 14 ವರ್ಷ ವಯೋಮಿತಿ ಒಳಗಿನ ಬಾಲಕರ ಗುಂಪು ಆಟ ವಾಲಿಬಾಲ್ ನಲ್ಲಿ ಪ್ರಥಮ ಸ್ಥಾನ ಕುಮಾರಿ ದೀಕ್ಷಾ ಚದುರಂಗದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ವೈಯಕ್ತಿಕ ವಿಭಾಗದಲ್ಲಿ ಸಂಜನಾ ಎಸ್ ಗೌಡ ಉದ್ದ ಜಿಗಿತದಲ್ಲಿ ತೃತೀಯ ಸ್ಥಾನ ತಿಲಕ್ ಎಲ್ ಗೌಡ 200 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.

ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ದಯಾನಂದ ಗೌಡ ಇವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ದೈಹಿಕ ಶಿಕ್ಷಣ ಪರಿವೀಕ್ಷಕರು, ಮುಖ್ಯ ಅಧ್ಯಾಪಕರಾದ ಗಂಗಾಧರ ಬಟ್ ರವರು, ಸಿಬ್ಬಂದಿ ವರ್ಗದವರುಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ವಿವೇಕ್ ವಿ ನಾಡ್ಕರ್ಣಿ ಅವರು ಅಧ್ಯಕ್ಷರಾದ ಆತ್ಮರಾಮ್ ಎಸ್ ಬಳವಳ್ಳಿ ಅವರು ಸದಸ್ಯರು ಶುಭ ಹಾರೈಸಿ ರುತ್ತಾರೆ.

About The Author

error: Content is protected !!