ಕುಮಟಾ: ವಿಶೇಷ ಚೇತನ ಮಕ್ಕಳಿಗಾಗಿ ಆಯೋಜಿಸಲಾದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಸೆಕೆಂಡರಿ ಹೈ ಸ್ಕೂಲ್, ಹಿರೇಗುತ್ತಿ ವಿದ್ಯಾರ್ಥಿನಿ ನಂದಿನಿ ಬಿ. ಗೌಡ ಗುಂಡುಎಸೆತ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ ಗಳಿಸಿ ತಾಲೂಕು ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಈ ಮಹತ್ವದ ಸಾಧನೆಗೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕುಮಟಾ ಹಾಗೂ ಅವರ ಕಾರ್ಯಾಲಯದ ಎಲ್ಲಾ ಸಿಬ್ಬಂದಿಗಳು ವಿದ್ಯಾರ್ಥಿನಿಯನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.
ಇದಲ್ಲದೆ ಹೈಸ್ಕೂಲ್ ಆಡಳಿತ ಮಂಡಳಿಯ ಅಧ್ಯಕ್ಷರಾದ ಹೊನ್ನಪ್ಪ ಎನ್. ನಾಯಕ ಹಾಗೂ ಸರ್ವ ಸದಸ್ಯರು, ಹಿರೇಗುತ್ತಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶಾಂತಾ ಎನ್. ನಾಯಕ, ಶಾಲೆಯ ಮುಖ್ಯಾಧ್ಯಾಪಕರಾದ ವಿಶ್ವನಾಥ ಬೇವಿನಕಟ್ಟಿ ಹಾಗೂ ಯುವಕ ಸಂಘದ ಅಧ್ಯಕ್ಷರಾದ ಆಕಾಶ ಬಿ. ನಾಯಕ ಅವರು ನಂದಿನಿ ಬಿ. ಗೌಡರ ಸಾಧನೆಗೆ ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಉನ್ನತ ಸಾಧನೆಗಳನ್ನು ಮಾಡುವಂತೆ ಶುಭ ಹಾರೈಕೆಗಳನ್ನು ವ್ಯಕ್ತಪಡಿಸಿದ್ದಾರೆ.
ನಂದಿನಿಯ ಈ ಸಾಧನೆ ವಿಶೇಷ ಚೇತನ ಮಕ್ಕಳಲ್ಲಿರುವ ಅಸೀಮ ಪ್ರತಿಭೆ ಹಾಗೂ ದೃಢಸಂಕಲ್ಪಕ್ಕೆ ಸಾಕ್ಷಿಯಾಗಿದ್ದು, ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.
ವರಿದಿ ; ಎನ್, ರಾಮು ಹಿರೆಗುತ್ತಿ

About The Author


More Stories
ಹಿರೇಗುತ್ತಿಯಲ್ಲಿ 14 ವಯೋಮಾನದ ಬಾಲಕ-ಬಾಲಕಿಯರ ಇಲಾಖಾ ಕ್ರೀಡಾಕೂಟ
ಎನ್. ರಾಮು ಹಿರೇಗುತ್ತಿಗೆ ಒಲಿದ ‘ಇಂಡಿಯಾ ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್’
ಸಂಪನ್ನಗೊಂಡ ಮಿರ್ಜಾನ್ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ