October 6, 2025

ಭಟ್ಕಳ ಮಣಕುಳಿಯ ಶ್ರೀ ನಾಗ ಮಾಸ್ತಿ ಕ್ಷೇತ್ರದಲ್ಲಿ ಸರನ್ನವರಾತ್ರಿ ಉತ್ಸವ ಸಿದ್ಧತೆ ಆರಂಭ

ಭಟ್ಕಳ: ಮಣಕುಳಿಯ ರೈಲ್ವೆ ಸ್ಟೇಷನ್ ರಸ್ತೆ ಪ್ರದೇಶದಲ್ಲಿರುವ ಶ್ರೀ ನಾಗ ಮಾಸ್ತಿ ಕ್ಷೇತ್ರದಲ್ಲಿ ನಡೆಯಲಿರುವ ದ್ವಿತೀಯ ವರ್ಷದ ಶರನ್ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಬೆಳಿಗ್ಗೆ 9 ಗಂಟೆಗೆ ಶ್ರೀದೇವಿಗೆ ಪೂಜೆ ಸಲ್ಲಿಸಿ ಬಿಡುಗಡೆ ಮಾಡಲಾಯಿತು.

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ನಡೆಯಲಿರುವ ಉತ್ಸವದ ಸಿದ್ಧತೆಗೆ ಪತ್ರಿಕೆ ಬಿಡುಗಡೆ ಮೂಲಕ ಅಧಿಕೃತ ಚಾಲನೆ ದೊರೆಯಿತು. ಕಳೆದ ವರ್ಷ ಮಧ್ಯಾಹ್ನದ ಪೂಜೆ ಪುನಸ್ಕಾರ ಹಾಗೂ ಸಂಜೆ ಸುಮಂಗಲಿಯರಿAದ ಕುಂಕುಮಾರ್ಚನೆ ಕಾರ್ಯಕ್ರಮ ಮಾತ್ರ ನಡೆದಿದ್ದರೆ, ಈ ಬಾರಿ ರಾತ್ರಿ ವಿಶೇಷ ಅಲಂಕಾರ ಮತ್ತು ಮಹಾಮಂಗಳಾರತಿ ಕಾರ್ಯಕ್ರಮವೂ ಸೇರಿಸಲ್ಪಟ್ಟಿದೆ ಎಂದು ಶ್ರೀ ನಾಗ ಮಾಸ್ತಿ ಕ್ಷೇತ್ರ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಸತೀಶ್ ಕುಮಾರ್ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಕ್ಷೇತ್ರ ಅಭಿವೃದ್ಧಿ ಟ್ರಸ್ಟಿನ ಉಪಾಧ್ಯಕ್ಷ ನಾಗರಾಜ್ ನಾಯ್ಕ, ಕಾರ್ಯದರ್ಶಿ ನಾಗೇಶ್ ನಾಯ್ಕ, ಶ್ರೀಧರ್ ನಾಯ್ಕ, ಸೀತಾರಾಮ್ ನಾಯ್ಕ, ಸೂರ್ಯಕಾಂತ್ ದೇವಾಡಿಗ, ಗಣಪತಿ ಪ್ರಭು, ಸೇವಾ ಸಮಿತಿಯ ಅಧ್ಯಕ್ಷ ಲೋಕೇಶ್ ನಾಯ್ಕ, ಉಪಾಧ್ಯಕ್ಷ ಮಹಾಬಲೇಶ್ವರ ನಾಯ್ಕ, ಹೇಮಂತ್ ನಾಯ್ಕ, ಗಣೇಶ್ ನಾಯ್ಕ, ಗಣಪತಿ ನಾಯ್ಕ, ಸುಬ್ರಾಯ್ ನಾಯ್ಕ, ಆರ್.ಎಸ್. ನಾಯ್ಕ, ನಾಗರಾಜ್ ನಾಯ್ಕ, ವೆಂಕಟೇಶ್ ದೇವಾಡಿಗ, ಮಂಜುನಾಥ ನಾಯ್ಕ, ಪ್ರಧಾನ ಅರ್ಚಕ ಪರಮೇಶ್ವರ ಶಾಸ್ತ್ರಿ ಮೊದಲಾದವರು ಉಪಸ್ಥಿತರಿದ್ದರು.

About The Author

error: Content is protected !!