
ಶಿರಸಿ: ಯಾವುದೇ ಕೃತಿ, ಸಂಗತಿ ವರ್ತಮಾನಕ್ಕೆ ಅನ್ವಯಿಸುವಂತೆ ಇದ್ದರೆ ಯಾವುದೇ ಕಾಲಕ್ಕೂ ಪ್ರಸ್ತುತವಾಗಿರುತ್ತವೆ ಎಂದು ಲೇಖಕ, ಅರ್ಥಧಾರಿ ನಾರಾಯಣ ಯಾಜಿ ಹೇಳಿದರು. ಅವರು ಭಾನುವಾರ ತಾಲೂಕಿನ ಯಡಹಳ್ಳಿಯ ಸುಕರ್ಮ ಸಭಾಂಗಣದಲ್ಲಿ ಬಿಡುಗಡೆಗೊಂಡ
ನಿವೃತ್ತ ಪ್ರಾಚಾರ್ಯ ಆರ್.ಎಸ್.ಹೆಗಡೆ ಬೆಳ್ಳೇಕೇರಿ ಅವರ ಪುರುಷ ಸೂಕ್ತ ಕೃತಿ ಕುರಿತು ಮಾತನಾಡಿದರು.
ವರ್ತಮಾನಕ್ಕೆ ಇಲ್ಲವಾದರೆ ಅದನ್ನು ಪದೇ ಪದೇ ಮಗುಚಿ ಹಾಕಬೇಕು. ಇಲ್ಲವಾದರೆ ಅವು ಪಾಚಿಕಟ್ಟುತ್ತವೆ ಎಂದು ಉದಾಹರಣೆ ಸಹಿತ ವಿವರಿಸಿ, ಪುರುಷ ಸೂಕ್ತ ರಚನೆ ಮಾಡಿದ್ದು 92 ವರ್ಷದ ಬೆಳ್ಳೇಕೇರಿ ಅವರು. ಇದು ಅವರ ತಪಸ್ಸಿನ ಫಲ. ಜ್ಞಾನ, ವಿಜ್ಞಾನದ ಮೇಲೂ ಇಲ್ಲಿ ಅರ್ಥೈಸಲಾಗಿದೆ. ಮೋಕ್ಷದ ದಾರಿಯೂ ಹೇಳುವದನ್ನೂ ಕೃತಿಯು ಕೊನೆಯಲ್ಲಿ ಸಾಧಿಸುತ್ತದೆ. ಇವತ್ತಿನ ಕಾಲಕ್ಕೆ ಬೇಕಾದ ರೀತಿಯಲ್ಲಿ ಲೇಖಕರು ಬರೆದು ಕೊಟ್ಟಿದ್ದಾರೆ ಎಂದರು.
ಕೃತಿ ಬಿಡುಗಡೆಗೊಳಿಸಿದ ವಿದ್ವಾನ್ ಶಂಕರ ಭಟ್ ಬಾಲಿಗದ್ದೆ, ಭಾರತೀಯ ಸನಾತನ ಪರಂಪರೆಯಲ್ಲಿ ಪರಮಾತ್ಮನೆ ನೀಡಿರುವದು. ಹೊಸ ಅರ್ಥದಲ್ಲಿ ಪ್ರಕಾಶಿಸುವ ಸಾಮರ್ಥ್ಯ ವೇದ ಮಂತ್ರಗಳಿಗೆ ಇದೆ ಎಂದರು.ಹಿರಿಯ ವಿದ್ವಾಂಸ ಉಮಾಕಾಂತ ಭಟ್ಟ ಕೆರೇಕೈ, ಯಡಹಳ್ಳಿಯನ್ನು ಸರಸ್ವತಿಯ ಕ್ಷೇತ್ರವಾಗಿಸಿದವರು ಆರ್.ಎಸ್.ಹೆಗಡೆ ಅವರು. ಅವರ ಸಹೋದರ ಆಗ್ರಾ ಘರಾನೆ ಸಂಗೀತಕ್ಕಾಗಿ ಮುಂಬಯಿಗೆ ತೆರಳಿದರೆ, ಮುಂಬಯಿಗೆ ತೆರಳಿದ್ದ ಆರ್.ಎಸ್.ಹೆಗಡೆ ಅವರು ಊರಿನಲ್ಲಿ ಶೈಕ್ಷಣಿಕ ನಾಯಕತ್ವ ಕೊಟ್ಟವರು. 30 ಸಾವಿರ ಮಕ್ಕಳಿಗೆ ಪಾಠ ಮಾಡಿದವರು. ವೈದಿಕ ಮಾದರಿಯ ಹಾಗೂ ವೈಜ್ಞಾನಿಕ ಪಾಠ ಕ್ರಮ ಯಡಹಳ್ಳಿಯಲ್ಲಿ ನಡೆದಿತ್ತು. ಅದು ಪುರುಷ ಸೂಕ್ತ ತನಕ ಬಂದಿದೆ ಎಂದು ಮನೋಜ್ಞವಾಗಿ ವಿವರಿಸಿದರು. ಅತಿಥಿಗಳಾಗಿ ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ, ಚಿತ್ರಕಾರ ಸತೀಶ ಯಲ್ಲಾಪುರ ಮಾತನಾಡಿದರು. ಲೇಖಕ, ನಿವೃತ್ತ ಪ್ರಾಚಾರ್ಯ ಆರ್.ಎಸ್.ಹೆಗಡೆ ಬೆಳ್ಳೇಕೇರಿ ಅಧ್ಯಕ್ಷತೆವಹಿಸಿದ್ದರು. ಕಿಶೋರ ಹೆಗಡೆ ಸ್ವಾಗತಿಸಿದರು. ರಘುಪತಿ ಯಾಜಿ ಪ್ರಕಾಶನದ ಕುರಿತು ಮಾತನಾಡಿದರು.ವೆಂಕಟಾಚಲ ಭಟ್ ಕರಸುಳ್ಳಿ ನಿರ್ವಹಿಸಿದರು. ಪುರುಷ ಸೂಕ್ತದ ಮಂತ್ರಘೋಷ ನಡೆಸಲಾಯಿತು.
More Stories
ಅತಿವೇಗದ ಬಸ್ ಡಿಕ್ಕಿ, ಸ್ಕೂಟಿ ಸವಾರ ಸ್ಥಳದಲ್ಲೇ ದುರ್ಮರಣ
ಭಟ್ಕಳದ ದರ್ಶನ ನಾಯ್ಕ ರಾಜ್ಯಕ್ಕೆ ಪ್ರಥಮ, ರಾಷ್ಟ್ರಮಟ್ಟಕ್ಕೆ ಭಟ್ಕಳದ ಕೀರ್ತಿ
ಕಡಸಲಗದ್ದೆ ಗಾಂಧಿ ಫಾಲ್ಸ್ ಬಳಿ ಮೊಬೈಲ್ ಕಳವು ಯತ್ನ ಇಬ್ಬರು ಬಂಧನ