October 5, 2025

ಸೃಷ್ಠಿ ಸಂಸ್ಥೆಯಿ0ದ ನ್ಯೂಟ್ರೆಸನ್ ಕಿಟ್‌ಕೊಡುಗೆ

ಹೊನ್ನಾವರ : “ಕ್ಷಯ, ಹೆಚ್.ಐ.ವಿ ಯಂತಹ ಗಂಭಿರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸೃಷ್ಠಿ ಸಂಸ್ಥೆಯಿAದ ಪೌಷ್ಠಿಕಾಂಶದ ಕಿಟ್‌ಗಳನ್ನು ನೀಡುತ್ತಿರುವುದು ಅನುಕರಣಿಯವಾಗಿದೆ” ಎಂದು ಹೊನ್ನಾವರ ತಾಲೂಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ|| ರಾಜೇಶಕಿಣಿ ಹೇಳಿದರು.

ಅವರು ತಾಲೂಕ ಆಸ್ಪತ್ರೆ ಹೊನ್ನಾವರದಲ್ಲಿ ಸೃಷ್ಠಿ ಸಂಸ್ಥೆಯವರು ನೀಡಿದ ನ್ಯೂಟ್ರೆಸನ್ ಕಿಟ್‌ಗಳನ್ನು ಕ್ಷಯರೋಗದ ಮೇಲ್ವಿಚಾರಕರಾದ ರಾಜಶೇಖರ ನಾಯ್ಕರವರಿಗೆ ಹಸ್ತಾಂತರಿಸಿ ಮಾತನಾಡಿದ್ದರು “ಕ್ಷಯ ರೋಗಿಗಳು ಆರರಿಂದ ಒಂಬತ್ತು ತಿಂಗಳವರೆಗೆ ಔಷಧೋಪಾಚಾರಗಳನ್ನು ಮಾಡಬೇಕಾಗಿದ್ದು ಆ ಸಂದರ್ಭದಲ್ಲಿ ದೇಹಕ್ಕೆ ಹೆಚ್ಚಿನ ಪೌಷ್ಠಿಕಾಂಶÀಗಳ ಅಗತ್ಯವಿರುತ್ತದೆ. ಅಂತವರಿಗೆ ನ್ಯೂಟ್ರಸನ್ ಕಿಟ್‌ಗಳನ್ನು ನೀಡುವದರ ಮೂಲಕ ಸೃಷ್ಠಿ ಸಂಸ್ಥೆ ಆರೋಗ್ಯಯುತ ಸಮಾಜದ ನಿರ್ಮಾಣಕ್ಕೆ ಕೈಜೋಡಿಸಿದೆ” ಎಂದು ಹೇಳಿದರು.

ನ್ಯೂಟ್ರೆಸನ್ ಕಿಟ್‌ಗಳನ್ನು ಸ್ವೀಕರಿಸಿ ಮಾತನಾಡಿದ ಕ್ಷಯರೋಗ ಮೇಲ್ವಿಚಾರಕರಾದ ರಾಜಶೇಖರ ನಾಯ್ಕ“ ಸೃಷ್ಠಿ ಸಂಸ್ಥೆ ನೀಡಿದ ಈ ಕಿಟ್‌ಗಳನ್ನು ಕ್ಷಯ ರೋಗಿಗಳಿಗೆ ನೀಡುವದರ ಮೂಲಕ ಅವರ ದೈಹಿಕ ಆರೋಗ್ಯ ಉತ್ತಮಗೊಳಿಸಲಾಗುವುದು. ಸೃಷ್ಠಿ ಸಂಸ್ಥೆಯ ಈ ಕೊಡುಗೆಯಿಂದ ಆರೋಗ್ಯದ ತೊಂದರೆಯಲ್ಲಿರುವವರಿಗೆ ತುಂಬಾ ಅನೂಕೂಲವಾಗಲಿದೆ” ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲೂಕಿನ ಆಯುಷ್ ವೈದ್ಯಾಧಿಕಾರಿಗಳಾದ ಡಾ|| ಗುರುದತ್ತ ಕುಲಕರ್ಣಿ, ಐಸಿಟಿಸಿ ಆಪ್ತಸಮಾಲೋಚರಾದ ವಿನಾಯಕ ಪಟಗಾರ, ಪ್ರಯೋಗ ಶಾಲಾ ತಂತ್ರಜ್ಷರಾದ ಉಮೇಶ ಕೆ, ರವಿ ನಾಯ್ಕ ಉಪಸ್ಥಿತರಿದ್ದರು.

About The Author

error: Content is protected !!