
ಭಟ್ಕಳ : ಭಟ್ಕಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಹಕಾರಿ ಧುರೀಣ, ಭಟ್ಕಳದ ವ್ಯವಸಾಯ ಸೇವಾ ಸಹಕಾರಿ ಸಂಘ, ಎಂ ಜಿ. ಎಂ. ಸಹಕಾರಿ ಪತ್ತಿನ ಸಂಘದ ಅಧ್ಯಕ್ಷ, ಪಿ. ಎಲ್ ಡಿ. ಬ್ಯಾಂಕಿನ ಮಾಜಿ ಅಧ್ಯಕ್ಷ, ಸಮಾಜ ಸೇವಕ, ಶಿಕ್ಷಣ ಪ್ರೇಮಿ, ಈರಪ್ಪ ಗರ್ಡಿಕರ್ ಅವರಿಗೆ ಅವರದೇ ಅಧ್ಯಕ್ಷತೆಯ ಎಂ. ಜಿ. ಎಂ. ಸಹಕಾರಿ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ದಂಪತಿ ಸಹಿತ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ಈರಪ್ಪ ಗರ್ಡಿಕರ್ ಅವರು ತೀರಾ ಸಾಮಾನ್ಯ ಕುಟುಂಬದಿAದ ಬಂದು ಹಂತಹoತವಾಗಿ ವ್ಯವಹಾರ, ಸಹಕಾರಿ ಕ್ಷೇತ್ರದಲ್ಲಿ ಎತ್ತರಕ್ಕೆ ಏರಿದವರು. ಎಷ್ಟೇ ಎತ್ತರಕ್ಕೆ ಏರಿದರೂ ಸರಳತೆ ಮತ್ತು ಸೌಜನ್ಯತೆಯನ್ನು ಉಳಿಸಿ ಬೆಳೆಸಿಕೊಂಡು ಬಂದವರು. ತನ್ನ ಮಿತಿಯಲ್ಲಿ ಸದ್ದಿಲ್ಲದೇ ಸಾಮಾಜಿಕ ಸೇವಾ ಕಾರ್ಯ ಮಾಡುತ್ತಾ ಬಂದವರು. ಆದರೆ ಎಂದಿಗೂ ಪ್ರಚಾರ ಬಯಸಿದವರಲ್ಲ. ಸನ್ಮಾನ ಹಾರ ತುರಾಯಿಗಳಿಂದ ಅವರು ಸದಾ ದೂರ. ದುರ್ಬಲರಿಗೆ ಏನಾದರೂ ಯಾರೇ ಒಳ್ಕೆಯ ಕಾರ್ಯವನ್ನು ಮಾಡಲು ಮುಂದಾದರೂ ಕೈಜೋಡಿಸುವ ಸಹೃದಯಿ. ಅವರ ಸಾಮಾಜಿಕ ಶೈಕ್ಷಣಿಕ ಹಾಗೂ ಸಹಕಾರಿ ಕ್ಷೇತ್ರಕ್ಕೆ ಅವರ ಕೊಡುಗೆಗಳನ್ನು ಪರಿಗಣಿಸಿ ಇಂದು ಅವರ ಸಹಕಾರಿ ಕ್ಷೇತ್ರದ ಸಾಧನೆಗೆ ಅವರದೇ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಗೌರವ ಸನ್ಮಾನ ನೀಡಲಾಗುತ್ತಿದೆ. ಗರ್ಡಿಕರ್ ಅವರು ಸಹಕಾರಿ ಕ್ಷೇತ್ರ ಮಾತ್ರವಲ್ಲದೆ ಸಾಮಾಜಿಕ ಶೈಕ್ಷಣಿಕ ಧಾರ್ಮಿಕ, ಕ್ರೀಡೆ ಶಿಕ್ಷಣ ಮುಂತಾದ ಅನೇಕ ಕ್ಷೇತ್ರಗಳಿಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಅಲ್ಲದೆ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಿಗೆ ಮತ್ತು ಸಮ್ಮೇಳನಗಳಿಗೆ ಸದಾ ಒಂದಿಲ್ಲೊAದು ನೆರವನ್ನು ಸದ್ದಿಲ್ಲದೇ ಯಾವುದೇ ನಿರೀಕ್ಷೆಗಳಿಲ್ಲದೆ ನೀಡುತ್ತಾ ಬಂದಿದ್ದಾರೆ. ಅಲ್ಲದೆ ತಾನು ಕಲಿತ ಭಟ್ಕಳದ ಪುರವರ್ಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅತಿಥಿ ಶಿಕ್ಷಕರನ್ನು ಕಳೆದ ಕೆಲವು ವರ್ಷಗಳಿಂದ ತನ್ನ ವೈಯಕ್ತಿಕ ನೆರವಿನಿಂದ ಒದಗಿಸುವ ಮೂಲಕ, ಮತ್ತು ಶಾಲೆಯ ಅಭಿವೃದ್ಧಿಗೆ ಸಹಾಯ ಹಸ್ತ ಚಾಚುತ್ತಾ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತನ್ನದೇ ಆದ ರೀತಿಯ ನೆರವನ್ನು ನೀಡುತ್ತ ಬಂದಿದ್ದಾರೆ..
11 ವರ್ಷಗಳ ಹಿಂದೆ ಅವರ ಮುಂದಾಳತ್ವದಲ್ಲಿ ಪ್ರಾರಂಭಗೊAಡ ಎಂ. ಜಿ. ಎಂ. ಸಂಸ್ಥೆ ಇಂದು 6 ಶಾಖೆ, 50 ಸಿಬ್ಬಂದಿಗಳಿಗೆ ಉದ್ಯೋಗ ಒದಗಿಸಿದೆ. ಸಂಸ್ಥೆಯ ಮೂಲಕ ಉತ್ತಮ ಆರ್ಥಿಕ ಸೇವೆಯನ್ನು ಒದಗಿಸುವ ಕಾರ್ಯದಲ್ಲಿ ಯಶಸ್ವಿಯಾಗಿ ತಾಲೂಕಿನಲ್ಲಿ ಯಶಸ್ವಿ ಹಣಕಾಸು ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂಬುದು ಎಲ್ಲರೂ ಹೆಮ್ಮೆ ಪಡುವ ಸಂಗತಿ ಎಂದು ನುಡಿದರು. ಅವರ ಸಾಮಾಜಿಕ, ಶೈಕ್ಷಣಿಕ, ಸಹಕಾರಿ ಕ್ಷೇತ್ರದ ಕೊಡುಗೆಗೆ ಅವರದೇ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಗೌರವಿಸಿ ಸನ್ಮಾನಿಸುತ್ತಿರುವುದು ನಿಜಕ್ಕೂ ಸಂತಸದ ಸಂಗತಿ ಎಂದು ನುಡಿದರು. ಈ ಸಂದರ್ಭದಲ್ಲಿ ಎಂ. ಜಿ. ಎಂ. ಸಂಸ್ಥೆಯ ಉಪಾಧ್ಯಕ್ಷ ಎಂ. ಜಿ. ಅರುಣಕುಮಾರ, ಸಂಸ್ಥೆಯ ನಿರ್ದೇಶಕರಾದ ಸುರೇಶ ನಾಯ್ಕ, ಮಂಜುನಾಥ ನಾಯ್ಕ ಜಗದೀಶ ನಾಯ್ಕ, ನವನೀತ್ ಗರ್ಡಿಕರ್,ಉದಯ ನಾಯ್ಕ, ಮಂಜುನಾಥ ನಾಯ್ಕ, ನಿವೃತ್ತ ಶಿಕ್ಷಕ ಎಂ. ಕೆ. ನಾಯ್ಕ, ಬ್ಯಾಂಕಿನ ವ್ಯವಸ್ಥಾಪಕರು, ಸಿಬ್ಬಂದಿಗಳು ಹಾಗೂ ನೂರಾರು ಷೇರುದಾರ ಸದಸ್ಯರು ಉಪಸ್ಥಿತರಿದ್ದರು.
More Stories
ಅತಿವೇಗದ ಬಸ್ ಡಿಕ್ಕಿ, ಸ್ಕೂಟಿ ಸವಾರ ಸ್ಥಳದಲ್ಲೇ ದುರ್ಮರಣ
ಭಟ್ಕಳದ ದರ್ಶನ ನಾಯ್ಕ ರಾಜ್ಯಕ್ಕೆ ಪ್ರಥಮ, ರಾಷ್ಟ್ರಮಟ್ಟಕ್ಕೆ ಭಟ್ಕಳದ ಕೀರ್ತಿ
ಕಡಸಲಗದ್ದೆ ಗಾಂಧಿ ಫಾಲ್ಸ್ ಬಳಿ ಮೊಬೈಲ್ ಕಳವು ಯತ್ನ ಇಬ್ಬರು ಬಂಧನ