October 5, 2025

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠ ಮಿರ್ಜಾನ್, ಕುಮಟಾ. ನವರಾತ್ರೋತ್ಸವ

ಕುಮಟಾ : ಶ್ರೀ ಮಹಾಸತಿ ಭೈರವಿ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಪರಮ ಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ದಿವ್ಯ ಆಶೀರ್ವಾದದೊಂದಿಗೆ ಹಾಗೂ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಕೃಪಾಶೀರ್ವಾದದೊಂದಿಗೆ ಹಾಗೂ ಶ್ರೀ ಮಠದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಶಿವಮೊಗ್ಗ ಮತ್ತು ಉತ್ತರಕನ್ನಡ ಜಿಲ್ಲಾ ಶಾಖಾ ಮಠದ ಪೂಜ್ಯರಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಆಶೀರ್ವಾದಪೂರ್ಣ ಮಾರ್ಗದರ್ಶನದಲ್ಲಿ, ಮಿರ್ಜಾನ್ ಶಾಖಾಮಠದ ಪೂಜ್ಯರಾದ ಶ್ರೀ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಶರನ್ನವರಾತ್ರಿಯ ಪ್ರಥಮ ದಿನದಂದು ಶೈಲಪುತ್ರಿ ಅವತಾರದಲ್ಲಿರುವ ಶ್ರೀ ಮಹಾಸತಿ ಭೈರವಿಗೆ ವಿಶೇಷವಾಗಿ ಅರಿಶಿಣ ಅಲಂಕಾರ ಮಾಡಿ ದುರ್ಗಾ ಹೋಮ, ನವದುರ್ಗಾರಾಧನೆ, ಪಂಚಾಮೃತಾಭಿಷೇಕ ಸೇವೆ ಸಲ್ಲಿಸಿ ಮಹಾಪೂಜೆ ನೆರವೇರಿಸಲಾಯಿತು. ಸರ್ವ ಭಕ್ತರಿಗೂ ಪೂಜ್ಯ ಸ್ವಾಮೀಜಿ ಯವರು ತೀರ್ಥ ಪ್ರಸಾದ, ಫಲ-ಪುಷ್ಪ ನೀಡಿ ಆಶೀರ್ವದಿಸಿದರು. ಪೂಜ್ಯ ಸ್ವಾಮಿಜೀಯವರು ತಾಯಿ ಅನ್ನ ಪೂರ್ಣೇಶ್ವರಿಯ ಪೂಜೆ ಮಾಡುವದರೊಂದಿಗೆ ಸರ್ವರಿಗೂ ಅನ್ನ ಪ್ರಸಾದ ವಿತರಿಸಲಾಯಿತು. ನವರಾತ್ರೋತ್ಸವದ ಪ್ರಥಮ ದಿನವು ಅತ್ಯಂತ ವಿಜೃಂಭಣೆ ಯಿಂದ ಸಂಪನ್ನವಾಯಿತು.

About The Author

error: Content is protected !!