October 6, 2025

ಹಿರೇಗುತ್ತಿಯಲ್ಲಿ ರಕ್ತದಾನ ಶಿಬಿರ

ಕುಮಟಾ : ಪ್ರಾಥಮಿಕ ಆರೋಗ್ಯ ಕೇಂದ್ರ ಹಿರೇಗುತ್ತಿ ಮತ್ತು ಯು. ಕೆ. ರಕ್ತ ನಿಧಿ ಕೇಂದ್ರ ಉ.ಕ, ಗ್ರಾಮ ಪಂಚಾಯತ ಹಿರೇಗುತ್ತಿ ಮತ್ತು ಬ್ರಹ್ಮಜಟಗ ಯುವಕ ಹಿರೇಗುತ್ತಿ ಇವರ ಸಹಕಾರದಿಂದ ರಕ್ತದಾನ ಶಿಬಿರ ಹಿರೇಗುತ್ತಿ ಹಾಸ್ಪಿಟಲ್ ನಲ್ಲಿ ನಡೆಯಿತು

ಕ್ರಾಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮ ಪಂಚಾಯತ ಅಧ್ಯಕ್ಷರಾದ ಶಾಂತಾ ಎನ್ ನಾಯಕ ” ರಕ್ತದಾನ ಶಿಬಿರ ಅಂದರೆ ಇದು ಒಂದು ಸಾಮಾಜಿಕ ಹಾಗೂ ಮಾನವೀಯ ಸೇವಾ ಕಾರ್ಯವಾಗಿದ್ದು, ಅವಶ್ಯಕತೆಯಲ್ಲಿರುವ ರೋಗಿಗಳಿಗೆ ರಕ್ತವನ್ನು ಉಚಿತವಾಗಿ ಒದಗಿಸುವ ಉದ್ದೇಶದಿಂದ ಆಯೋಜಿಸಲಾಗುತ್ತದೆ” ಎಂದರು

ಹಿರೇಗುತ್ತಿ ಹಾಸ್ಪಿಟಲ್ ವೈದ್ಯಾಧಿಕಾರಿ ಡಾ.ಪ್ರಥ್ವಿ ಒಕ್ಕುಂದ “ರಕ್ತದಾನ ಶಿಬಿರದ ಉದ್ದೇಶಗಳ ಕುರಿತು ತಿಳಿಸಿದರು”. ಕಾರ್ಯಕ್ರಮದ ವೇದಿಕೆಯಲ್ಲಿ ಗೋಕರ್ಣ ಮಹಾಬಲೇಶ್ವರ ಅರ್ಬನ್ ಬ್ಯಾಂಕ್ ನಿರ್ದೇಶಕರಾದ ರಾಮು ಕೆಂಚನ್ ಹಿರೇಗುತ್ತಿ. ಗ್ರಾಮ ಪಂಚಾಯತ ಸದಸ್ಯರಾದ ರಮಾಕಾಂತ ಹರಿಕಂತ್ರ ಶ್ರೀ ಬ್ರಹ್ಮಜಟಗ ಯುವಕ ಸಂಘದ ಅಧ್ಯಕ್ಷರಾದ ಆಕಾಶ ಬಾಲಚಂದ್ರ ನಾಯಕ ಉಪಾಧ್ಯಕ್ಷ ಪ್ರೀತಮ್ ಉಮೇಶ ಗಾಂವಕರ ಸೆಕ್ರಟರಿ ವಿದ್ಯಾಧರ ನಾಯಕ. ಹಾಗೂ ಸೌರವ ನಾಯಕ, ಸಂತೋಷ ನಾಯಕ,ಕಾರ್ತಿಕ ನಾಯಕ ದಿವ್ಯಾನಂದ ಕೆರೆಮನೆ, ಕುಮಟಾ ಹಾಸ್ಪಿಟಲ್ ಪ್ರದೀಪ ನಾಯ್ಕ, ಮತ್ತು ಆಸ್ಪತ್ರೆ ಸಿಬ್ಬಂದಿಗಳು ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು. ನಂತರ ಅನೇಕರು ರಕ್ತದಾನ ಮಾಡಿದರು ಅರ್ಥಪೂರ್ಣ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.

ವರದಿ: ಎನ್ ರಾಮು ಹಿರೇಗುತ್ತಿ

About The Author

error: Content is protected !!