October 7, 2025

ಪ್ರೊಫೆಸರ್ ಹುದ್ದೆಗೆ ಬಡ್ತಿ ಪಡೆದ ಪ್ರಾಚಾರ್ಯ ಡಾ. ಡಿ. ಎಲ್. ಹೆಬ್ಬಾರ

ಹೊನ್ನಾವರ : ಪಟ್ಟಣದ ಪ್ರತಿಷ್ಠಿತ ಎಂ.ಪಿ.ಇ. ಸೊಸೈಟಿಯಎಸ್.ಡಿ.ಎಂ. ಪದವಿ ಕಾಲೇಜಿನ ಪ್ರಾಚಾರ್ಯರಾಗಿಕರ್ತವ್ಯ ನಿರ್ವಹಿಸುತ್ತಿರುವಡಾ. ಡಿ. ಎಲ್. ಹೆಬ್ಬಾರ್‌ಅವರು ಸಹ ಪ್ರಾಧ್ಯಾಪಕ ಹುದ್ದೆಯಿಂದ ಪ್ರಾಧ್ಯಾಪಕ (ಪ್ರೊಫೆಸರ್) ಹುದ್ದೆಗೆ ಬಡ್ತಿ ಹೊಂದಿದ್ದಾರೆ.


ಡಾ. ಡಿ. ಎಲ್. ಹೆಬ್ಬಾರ್ ಅವರು ಕಾಲೇಜಿನ ಪಾಠಪ್ರವಚನಗಳ ಜೊತೆಗೆ ರಾಷ್ಟಿçÃಯ- ಅಂತರಾಷ್ಟಿçÃಯ ವಿಚಾರ ಸಂಕಿರಣಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಹಲವಾರು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಮೈನರ್‌ರಿಸರ್ಚ್ ಪ್ರಾಜೆಕ್ಟ್, ಅತಿಥಿ ಉಪನ್ಯಾಸ, ಪುಸ್ತಕÀಗಳ ಪ್ರಕಟಣೆ, ಕಾಲೇಜಿನ ವಿವಿಧಜವಾಬ್ಧಾರಿ ನಿರ್ವಹಣೆ, ರಾಷ್ಟಿçÃಯ ಹಾಗೂ ಅಂತರಾಷ್ಟಿçÃಯ ಮಟ್ಟದಲ್ಲಿ ಸಂಶೋಧನಾತ್ಮಕ ಲೇಖನಗಳ ಪ್ರಕಟಣೆ ಹಾಗೂ ಸಾಮಾಜಿಕ ಕೊಡುಗೆಗಳನ್ನು ಪರಿಗಣಿಸಿ ಕಾಲೇಜು ಶಿಕ್ಷಣ ಆಯುಕ್ತರಕಚೇರಿ ಬೆಂಗಳೂರಿನಲ್ಲಿ ನಡೆಸಿದ ತಜ್ಞರ ಸಮಿತಿಯ ಸಂದರ್ಶನವನ್ನು ಎದುರಿಸಿ ಅವರು ಪ್ರೊಫೆಸರ್ ಹುದ್ದೆಗೆ ಬಡ್ತಿ ಹೊಂದಿರುತ್ತಾರೆ.


ಯು.ಜಿ.ಸಿ.ಯ ಪರಿಷ್ಕೃತ ನಿಯಮಗಳ ಪ್ರಕಾರ ‘ವೃತ್ತಿ ಪ್ರಗತಿಯೋಜನೆ’ಯ ಅಡಿಯಲ್ಲಿ ಪ್ರೊಫೆಸರ್ ಹುದ್ದೆಗೆ ಬಡ್ತಿ ಪಡೆದ ಡಾ. ಡಿ. ಎಲ್. ಹೆಬ್ಬಾರ ಅವರು ತಾವು ಕರ್ತವ್ಯ ನಿರ್ವಹಿಸುತ್ತಿರುವ ಸಂಸ್ಥೆಯ ಅಧ್ಯಕ್ಷರಿಗೆ ಮತ್ತು ಬೋಧಕ-ಬೋಧಕೇತರ ಸಿಬ್ಬಂದಿಗಳಿಗೆ ಕೃತಜ್ಞತೆ ಅರ್ಪಿಸಿದ್ದಾರೆ.

About The Author

error: Content is protected !!