
ಕಿಕ್ಕೇರಿ ; ಮೈಸೂರು ಅರಸೀಕೆರೆ ಮುಖ್ಯರಸ್ತೆಯ ಕಿಕ್ಕೇರಿ ಭಾಗದಲ್ಲಿ ರಸ್ತೆ ಗುಂಡಿಗಳಿAದ ವಾಹನ ಸವಾರರು ಹಾಗೂ ಪಾದಚಾರಿಗಳು ದೀರ್ಘಕಾಲದಿಂದ ತೊಂದರೆ ಅನುಭವಿಸುತ್ತಿದ್ದರು. ಮಳೆಗಾಲದಲ್ಲಿ ಗುಂಡಿಗಳು ನೀರಿನಿಂದ ತುಂಬಿ ಅಪಘಾತಗಳಿಗೆ ಕಾರಣವಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಮಾತೃಭೂಮಿ ಉಚಿತ ವೃದ್ದಾಶ್ರಮದ ಸಂಸ್ಥಾಪಕರ ಜೈ ಹಿಂದ್ ನಾಗಣ್ಣ ರವರು ಸಮಾಜಮುಖಿ ಸೇವೆಯ ಭಾಗವಾಗಿ ಸ್ವಯಂಪ್ರೇರಿತರಾಗಿ ಗುಂಡಿ ಮುಚ್ಚುವ ಕಾರ್ಯ ಕೈಗೊಂಡರು.

ಸಮಾಜ ಹಿತಕ್ಕಾಗಿ ನಡೆದ ಈ ಕಾರ್ಯ ಸ್ಥಳೀಯರಲ್ಲಿ ಸಂತೋಷದ ಅಲೆ ಮೂಡಿಸಿದ್ದು, ಸರ್ಕಾರದ ಗಮನಕ್ಕೆ ಬರದ ಮೊದಲು ಜನರ ಕಷ್ಟವನ್ನು ಮನಗಂಡು ಮುಂದೆ ಬಂದಿರುವುದು ಶ್ಲಾಘನೀಯ. ಇಂತಹ ಸೇವಾಭಾವನೆ ಇತರರಿಗೂ ಮಾದರಿ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟರು.
ಗುಂಡಿ ಮುಚ್ಚುವ ಕಾರ್ಯದಿಂದ ಮುಖ್ಯರಸ್ತೆಯಲ್ಲಿ ಸಂಚಾರ ಸುಗಮಗೊಂಡಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಸಾರ್ವಜನಿಕ ಸಮಸ್ಯೆ ಪರಿಹಾರದಲ್ಲಿ ನಾಗಣ್ಣರವರ ಹಸ್ತಕ್ಷೇಪ ಗ್ರಾಮೀಣ ಮಟ್ಟದಲ್ಲಿಯೇ ಅಭಿವೃದ್ಧಿ ಕಾರ್ಯಗಳಿಗೆ ಪ್ರೇರಣೆಯಾಗುವಂತಿದೆ ಎಂದು ಸ್ಥಳೀಯರು ಹರ್ಷ ವ್ಯಕ್ತಪಡಿಸಿದರು.
ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ
More Stories
ಶ್ರೀ ಕಿಕ್ಕೇರಮ್ಮ ಕ್ರಿಕೆಟರ್ಸ್ ವತಿಯಿಂದ ಕಿಕ್ಕೇರಿ ಪ್ರೀಮಿಯರ್ ಲೀಗ್ ಸೀಸನ್ 1
ಶಾಲಾ ಮಕ್ಕಳಿಗೆ ಉಪಯೋಗಕ್ಕೆ ಬಾರದ ಶೌಚಾಲಯ
ಪ್ರೆಂಡ್ಸ್ ರಿಕ್ರಿಯೇಶನ್ ಕ್ಲಬ್ (ರಿ), ಕಿಕ್ಕೇರಿ ವತಿಯಿಂದ ವಿದ್ಯಾರ್ಥಿಗಳಿಗೆ ಸನ್ಮಾನ