March 15, 2026

ಓಮಿನಿ ಮಾಲಿಕರು ಮತ್ತು ಚಾಲಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ಆಚರಣೆ ಮಾಡಲಾಯಿತು

ಕೃಷ್ಣರಾಜಪೇಟೆ: ತಾಲ್ಲೂಕಿನ ಕಿಕ್ಕೇರಿ ಪಣ್ಣದಲ್ಲಿ ಓಮಿನಿ ಕಾರು ಮಾಲಿಕರು ಮತ್ತು ಚಾಲಕರ ಸಂಘದ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಶಾಸಕ ಹೆಚ್ ಟಿ ಮಂಜು ಧ್ವಜಾರೋಹಣ ನೆರೆವೇರಿಸಿ ಮತ್ತು ಜ್ಯೋತಿ ಬೆಳಗಿಸಿ ಮಾತನಾಡಿ ನವೆಂಬರ್ ತಿಂಗಳು ಬಂದರೆ ನಾಡಿನೆಲ್ಲೆಡೆ ಕನ್ನಡ ರಾಜ್ಯೋತ್ಸವದ ಮುಗಿಲು ಮುಟ್ಟುತ್ತದೆ ಅದೇ ರೀತಿ ನಮ್ಮ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಾಗಿ ಕನ್ನಡ ಬಾಷೆಯನ್ನು ಬಳಕೆ ಮಾಡುತ್ತಾರೆ ಬೇರೆ ಹೊರ ರಾಜ್ಯದ ಗಡಿ ಭಾಗಳಲ್ಲಿ ಬೇರೆ ಬೇರೆ ಬಾಷೆಗಳ ಮೇಲೆ ಅವಲಂಬಿಸಿದ್ದಾರೆ ಆದ್ರೆ ಕನ್ನಡ ನಾಡಿನಲ್ಲಿರು ಪ್ರತಿ ಪ್ರಜ್ಞೆಯು ನಾಡಿನ ಋಣ ತೀರಿಸಿ ನಮ್ಮ ಕನ್ನಡ ಬಾಷೆನ್ನು ಬಳಸಬೇಕು.. ವಿಶೇಷವಾಗಿ ಆಟೋ ಚಾಲಕರು ಮತ್ತು ಓಮಿನಿ ಕಾರು ಚಾಲಕರು ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಾರೆ ಅವರ ಜೊತೆಗೂಡಿ ಪ್ರತಿಯೊಬ್ಬ ಕನ್ನಡಿಗನು ಕನ್ನಡ ನಾಡು, ನುಡಿ, ಜಲ, ಭಾಷೆ ಯಾವುದಕ್ಕಾದರೂ ಧಕ್ಕೆ ಉಂಟಾದರೆ ನಾವು ಕನ್ನಡಿಗರೆಲ್ಲ ಒಟ್ಟಾಗಿ ಅದರ ವಿರುದ್ಧ ಧ್ವನಿ ಎತ್ತಿದಾಗ ಮಾತ್ರ ಕನ್ನಡ ನಾಡು ಉಳಿವಿಗೆ ಸಾಧ್ಯ ಎಂದರು.ಕನ್ನಡ ನಾಡಿನಲ್ಲಿರುವ ಸಂಸ್ಕೃತಿ ಮತ್ತು ವ್ಯವಸ್ಥೆ ಇಡೀ ಭಾರತದಲ್ಲಿ ಎಲ್ಲಿಯೂ ಸಿಗಲು ಸಾಧ್ಯವಿಲ್ಲ ಎಂದರು

ಅಲ್ಲದೆ ಅನ್ನಸಂತರ್ಪಣೆಯನ್ನು ಸಂಘದ ವತಿಯಿಂದ ಏರ್ಪಡಿಸಲಾಗಿತ್ತು..ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಮೊಟ್ಟೆ ಮಂಜು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಐಕನಹಳ್ಳಿ ಕೃಷ್ಣಗೌಡ, ಜೆ.ಡಿ.ಎಸ್ ಹೋಬಳಿ ಘಟಕದ ಅಧ್ಯಕ್ಷ ಕಾಯಿ ಮಂಜೇಗೌಡ, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅದ್ಯಕ್ಷ ಕೆ ಬಿ. ಶೇಖರ, ರಕ್ಷಾಣಾ ವೇದಿಕೆಯ ಜಿಲ್ಲಾದ್ಯಕ್ಷ ವೇಣು, ಉಪಾದ್ಯಕ್ಷ ಸಾಸಲು ಗುರುಮೂರ್ತಿ, ಕಿಕ್ಕೇತಿ ಹೋಬಳಿ ಘಟದ ಅಧ್ಯಕ್ಷ ಸೊಳ್ಳೇಪುರ ಸುರೇಶ್, ಅಪ್ಪು ಬ್ರಿಗ್ರೇಡ್ ಅಧ್ಯಕ್ಷ ಮಹೇಶ್, ಓಮಿನಿ ಕಾರು ಚಾಲಕ ಮತ್ತು ಮಾಲಿಕರ ಸಂಘದ ಅಧ್ಯಕ್ಷರಾದ ರಾಜೇಗೌಡ್ರು, ಯಪಾದ್ಯಕ್ಷರಾದ ಪ್ರಸನ್ನ ಕುಮಾರ್, ಗೌರವ ಅಧ್ಯಕ್ಷರಾದ ರಘು, ಕಾರ್ಯದರ್ಶಿಗಖಾದ ಮಂಜು, ವಿನಯ್ ಮಹದೇವ, ರಮೇಶ್, ಖಜಾಂಚಿ ಅಕ್ಷಯ್, ಸದಸ್ಯರಾದ ದೀಲೀಪ್ ಕುಮಾರ್, ಯೋಗೇಶ್, ರವಿ, ರಮೇಶ್, ವೆಂಕಟರೆಡ್ಡಿ, ರಮೇಶ್, ವಾಜಿದ್ ಪಾಷ, ಜಯರಾಮ್, ದೇವಯ್ಯ, ಚೇತನ್, ಕುಮಾರ್, ರಘು, ಸುರೇಶ್, ಸುರೇಶ್, ರಘು, ಮಹೇಶ್, ರಮೇಶ್, ದೀಪು, ಹರೀಶ್, ಬಾಬು, ಮಂಜುನಾಥ್, ಮನು, ನಾಗರಾಜು, ಸೋಮು, ಶಿವರಾಮ್, ಆಶೋಕ, ಅಪ್ಪಿ, ಮಂಜು, ಸೇರಿದಂತೆ ಕನ್ನಡ ನೂರಾರು ಅಭಿಮಾನಿಗಳು ಇದ್ದರು..

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

About The Author

error: Content is protected !!